ಡಿ.ಜೆ.ಹಳ್ಳಿ ಗಲಾಟೆ: ಮತ್ತೋರ್ವ ಮಾಸ್ಟರ್ ಮೈಂಡ್ ಅರೆಸ್ಟ್
ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ದಿನೇ ದಿನೇ ಅನೇಕ ಬೆಳವಣಿಗೆಗಳಾಗುತ್ತಿವೆ. ಸದ್ಯ ಈಗ ಈ ಪ್ರಕರಣದ ಇನೊಬ್ಬ ಪ್ರಮುಖ ಆರೋಪಿಯನ್ನು ಸಿಸಿಬಿಯ OCW ವಿಭಾಗದ ಸಿಬ್ಬಂದಿ ಬಂಧಿಸಿದ್ದಾರೆ. ಗಲಭೆಯ ಮತ್ತೋರ್ವ ಮಾಸ್ಟರ್ ಮೈಂಡ್ ಹಾಗೂ ಗಲಭೆಯ ಪ್ರಮುಖ ರೂವಾರಿಯಾಗಿದ್ದ ಜೈದ್ ಎಂಬಾತನನ್ನು ಬಂಧಿಸಲಾಗಿದೆ. ಈತ ಶಂಕಿತ ಉಗ್ರ ಅಫ್ರಿದಿ ಸಂಬಂಧಿಯಾಗಿದ್ದಾನೆ. ಅಫ್ರಿದಿ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಆರೋಪಿ. ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಠಾಣೆ ಮುಂದೆ ನಿಂತು […]

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ದಿನೇ ದಿನೇ ಅನೇಕ ಬೆಳವಣಿಗೆಗಳಾಗುತ್ತಿವೆ. ಸದ್ಯ ಈಗ ಈ ಪ್ರಕರಣದ ಇನೊಬ್ಬ ಪ್ರಮುಖ ಆರೋಪಿಯನ್ನು ಸಿಸಿಬಿಯ OCW ವಿಭಾಗದ ಸಿಬ್ಬಂದಿ ಬಂಧಿಸಿದ್ದಾರೆ.
ಗಲಭೆಯ ಮತ್ತೋರ್ವ ಮಾಸ್ಟರ್ ಮೈಂಡ್ ಹಾಗೂ ಗಲಭೆಯ ಪ್ರಮುಖ ರೂವಾರಿಯಾಗಿದ್ದ ಜೈದ್ ಎಂಬಾತನನ್ನು ಬಂಧಿಸಲಾಗಿದೆ. ಈತ ಶಂಕಿತ ಉಗ್ರ ಅಫ್ರಿದಿ ಸಂಬಂಧಿಯಾಗಿದ್ದಾನೆ. ಅಫ್ರಿದಿ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಆರೋಪಿ. ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಠಾಣೆ ಮುಂದೆ ನಿಂತು ಗಲಭೆಗೆ ಪ್ರಚೋದನೆ ನೀಡಿದ್ದ ಮತ್ತೋರ್ವ ಆರೋಪಿ ಸಿರಾಜ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಾಗೂ ಬಂಧಿತ ಆರೋಪಿ ಜೈದ್ಗೆ ಟೆರರ್ ಲಿಂಕ್ ಇರುವುದರಿಂದ ಸಿಸಿಬಿ ಹೆಚ್ಚಿನ ತನಿಖೆ ನಡೆಸುತ್ತಿದೆ.
ಜೈದ್ ಆಟೋ ಓಡಿಸಿಕೊಂಡು ಜೀವನವನ್ನು ಸಾಗಿಸುತ್ತಿದ್ದ. ಗಲಾಟೆ ದಿನ ಗುಂಪು ಸೇರಿ ಪೊಲೀಸ್ ಠಾಣೆ ಮೇಲೆ ಅಟ್ಯಾಕ್ ಮಾಡಿದ್ದ ಹಾಗೂ ಜೈಲಿನಲ್ಲಿರುವ ಅಫ್ರಿದಿ ಜತೆ ಸಂಪರ್ಕದಲ್ಲಿದ್ದ ಎಂದು ಟೆಕ್ನಿಕಲ್ ಇನ್ವೆಸ್ಟಿಗೇಷನ್ನಲ್ಲಿ ಬಯಲಾಗಿದೆ. ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರಿದಿದೆ.
Published On - 9:31 am, Sat, 22 August 20