AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಜಾರಕಿಹೊಳಿಗೆ ಡಿಕೆಶಿ ಠಕ್ಕರ್: ಬೆಳಗಾವಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ

ಬೆಳಗಾವಿ: ರಮೇಶ್ ಜಾರಕಿಹೊಳಿಗೆ ಠಕ್ಕರ್ ನೀಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಡಿಕೆಶಿ ಭೇಟಿ ನೀಡಲಿದ್ದು, ಸೋಮವಾರ ಆಗಸ್ಟ್ 24 ರಂದು ಗೋಕಾಕ್ ತಾಲೂಕಿನಲ್ಲಿ ಮಾತ್ರ ಡಿ.ಕೆ ಶಿವಕುಮಾರ್ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಹೆಚ್ಚು ಹಾನಿಯಾಗಿದೆ. ಆದ್ರೂ ಅತೀ ಹೆಚ್ಚು ಹಾನಿಯಾದ ಪ್ರದೇಶ ಬಿಟ್ಟು ಗೋಕಾಕ್ ತಾಲೂಕಿನಲ್ಲಿ ಮಾತ್ರ ಡಿಕೆಶಿ ಪ್ರವಾಸ ಮಾಡಲಿದ್ದಾರೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ […]

ರಮೇಶ್ ಜಾರಕಿಹೊಳಿಗೆ ಡಿಕೆಶಿ ಠಕ್ಕರ್: ಬೆಳಗಾವಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ
ಡಿಕೆ ಶಿವಕುಮಾರ್
ಆಯೇಷಾ ಬಾನು
ಆಯೇಷಾ ಬಾನು|

Updated on: Aug 22, 2020 | 8:45 AM

Share

ಬೆಳಗಾವಿ: ರಮೇಶ್ ಜಾರಕಿಹೊಳಿಗೆ ಠಕ್ಕರ್ ನೀಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಡಿಕೆಶಿ ಭೇಟಿ ನೀಡಲಿದ್ದು, ಸೋಮವಾರ ಆಗಸ್ಟ್ 24 ರಂದು ಗೋಕಾಕ್ ತಾಲೂಕಿನಲ್ಲಿ ಮಾತ್ರ ಡಿ.ಕೆ ಶಿವಕುಮಾರ್ ಪ್ರವಾಸ ಕೈಗೊಳ್ಳಲಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಹೆಚ್ಚು ಹಾನಿಯಾಗಿದೆ. ಆದ್ರೂ ಅತೀ ಹೆಚ್ಚು ಹಾನಿಯಾದ ಪ್ರದೇಶ ಬಿಟ್ಟು ಗೋಕಾಕ್ ತಾಲೂಕಿನಲ್ಲಿ ಮಾತ್ರ ಡಿಕೆಶಿ ಪ್ರವಾಸ ಮಾಡಲಿದ್ದಾರೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಕ್ಷೇತ್ರದ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ತೀರ್ಮಾನಿಸಿದ್ದಾರೆ.

ಆಗಸ್ಟ್ 24ರಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಡಿಕೆ ಶಿವಕುಮಾರ್ ಆಗಮಿಸಲಿದ್ದು ಬೆಳಗ್ಗೆ 11.30ಕ್ಕೆ ಗೋಕಾಕ್‌ನ ನೆರೆಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಅರಭಾವಿ ಕ್ಷೇತ್ರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಸಂಜೆ 4 ಗಂಟೆಗೆ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾತ್ರಿ ಬೆಳಗಾವಿಯ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿ ಆಗಸ್ಟ್ 25ರಂದು ಬೆಳಗಾವಿಯಿಂದ ಬಾಗಲಕೋಟೆಗೆ ಡಿಕೆಶಿ ತೆರಳಲಿದ್ದಾರೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಡಿಕೆಶಿ ಪ್ರವಾಸ ಹಿನ್ನೆಲೆಯಲ್ಲಿ ನೆರೆ ಪ್ರವಾಹದ ಹೆಸರಲ್ಲಿ ಮತ್ತೆ ಶುರುವಾಗುತ್ತಾ ಬಂಡೆ ಸಾಹುಕಾರ್ ಕಾಳಗ ಎನ್ನುವಂತಿದೆ.

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ