ಡಿ.ಜೆ.ಹಳ್ಳಿ ಗಲಾಟೆ: ಪೊಲೀಸರು ಫೈರಿಂಗ್‌ಗೆ ಬಳಸಿದ್ದ ರೈಫಲ್‌ಗಳು ಸಿಸಿಬಿ ವಶಕ್ಕೆ

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಫೈರಿಂಗ್‌ಗೆ ಬಳಸಿದ್ದ ರೈಫಲ್‌ಗಳನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ. ತನಿಖಾ ಹಂತದಲ್ಲಿ ಮಹತ್ವದ ಪಾತ್ರವಿರುವ ಹಿನ್ನೆಲೆಯಲ್ಲಿ ಗಲಭೆ ವೇಳೆ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಬಳಸಿದ್ದ 17 ರೈಫಲ್ಸ್ ಸಿಸಿಬಿ ವಶಕ್ಕೆ ಪಡೆದಿದೆ. ಈಗಾಗಲೇ FSL ಸಿಬ್ಬಂದಿಯಿಂದ ಫೈರಿಂಗ್ ಸ್ಥಳ ಪರಿಶೀಲನೆ ನಡೆದಿದೆ. ಇನ್ಸ್‌ಪೆಕ್ಟರ್‌ಗಳ ಪಿಸ್ತೂಲ್ ವಶಕ್ಕೆ ಪಡೆಯುವ ಸಾಧ್ಯತೆ ಕೂಡ ಇದೆ. KSRP, CAR, ಡಿ.ಜೆ.ಹಳ್ಳಿ ಪೊಲೀಸರು ಬಳಸಿದ್ದ ಪಿಸ್ತೂಲ್, ಗನ್​ಗಳನ್ನ FSLಗೆ ರವಾನೆ […]

ಡಿ.ಜೆ.ಹಳ್ಳಿ ಗಲಾಟೆ: ಪೊಲೀಸರು ಫೈರಿಂಗ್‌ಗೆ ಬಳಸಿದ್ದ ರೈಫಲ್‌ಗಳು ಸಿಸಿಬಿ ವಶಕ್ಕೆ

Updated on: Aug 23, 2020 | 8:27 AM

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಫೈರಿಂಗ್‌ಗೆ ಬಳಸಿದ್ದ ರೈಫಲ್‌ಗಳನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ.

ತನಿಖಾ ಹಂತದಲ್ಲಿ ಮಹತ್ವದ ಪಾತ್ರವಿರುವ ಹಿನ್ನೆಲೆಯಲ್ಲಿ ಗಲಭೆ ವೇಳೆ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಬಳಸಿದ್ದ 17 ರೈಫಲ್ಸ್ ಸಿಸಿಬಿ ವಶಕ್ಕೆ ಪಡೆದಿದೆ. ಈಗಾಗಲೇ FSL ಸಿಬ್ಬಂದಿಯಿಂದ ಫೈರಿಂಗ್ ಸ್ಥಳ ಪರಿಶೀಲನೆ ನಡೆದಿದೆ. ಇನ್ಸ್‌ಪೆಕ್ಟರ್‌ಗಳ ಪಿಸ್ತೂಲ್ ವಶಕ್ಕೆ ಪಡೆಯುವ ಸಾಧ್ಯತೆ ಕೂಡ ಇದೆ. KSRP, CAR, ಡಿ.ಜೆ.ಹಳ್ಳಿ ಪೊಲೀಸರು ಬಳಸಿದ್ದ ಪಿಸ್ತೂಲ್, ಗನ್​ಗಳನ್ನ FSLಗೆ ರವಾನೆ ಮಾಡಲಾಗುತ್ತೆ. ಬಂದೂಕುಗಳನ್ನ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತೆ.