ಆ ಉದ್ಯಮಿಯ ಮೊಮ್ಮಗನಿಗಾಗಿ ಪ್ರತ್ಯೇಕ ತಂಡ ರಚಿಸಿ ಹುಡುಕಾಡ್ತಿರುವ CCB ಪೊಲೀಸರು!

ಆ ಉದ್ಯಮಿಯ ಮೊಮ್ಮಗನಿಗಾಗಿ ಪ್ರತ್ಯೇಕ ತಂಡ ರಚಿಸಿ ಹುಡುಕಾಡ್ತಿರುವ CCB ಪೊಲೀಸರು!

ಬೆಂಗಳೂರು: ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿರುವ ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ಕೇಸ್​ಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಸ್ಯಾಂಡಲ್​​ವುಡ್ ಡ್ರಗ್ಸ್ ದಂಧೆಗೆ ಭೂಗತ ಪಾತಕಿ ನಂಟಿದೆ ಎಂಬ ಅಂಶ ಬಯಲಾಗಿದೆ. ಈ ಕೇಸ್​ಗೆ ಸಂಬಂಧಿಸಿ ಮಾಜಿ ಭೂಗತ ಪಾತಕಿ ಆಪ್ತನೊಬ್ಬನ ಲಿಂಕ್ ಬಗ್ಗೆ ಮಾಹಿತಿ ಸಿಕ್ಕಿದೆ.

ಆ ಭೂಗತ ಪಾತಕಿಯ ಆಪ್ತನಿಂದ ಮುಂಬೈ, ಚೆನ್ನೈ ಮೂಲಕ ಬೆಂಗಳೂರಿಗೆ ಮಾದಕ ವಸ್ತುಗಳು ಸಪ್ಲೈ ಮಾಡಲಾಗುತ್ತಿತ್ತಂತೆ. ಪಾತಕಿಯ ಆಪ್ತ ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ. ರಾಜಕಾರಣಿಗಳ ಮಕ್ಕಳು, ನಟ, ನಟಿಯರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಡಿಜೆಗಳಿಗೆ, ಪಬ್‌ಗಳು, ಹೈಫೈ ಪಾರ್ಟಿ, ರೆೇವ್ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ. ಡ್ರಗ್ಸ್ ದಂಧೆಗೆ ನೈಜೀರಿಯಾ ಡ್ರಗ್ಸ್ ಪೆಡ್ಲರ್‌ಗಳನ್ನು ಬಳಸಿಕೊಳ್ಳುತ್ತಿದ್ದ ಎಂಬ ಮಾಹಿತಿಯೂ ಸಿಕ್ಕಿದೆ. ಹೀಗಾಗಿ ಭೂಗತ ಪಾತಕಿಯ ಆಪ್ತನಿಗಾಗಿ ಸಿಸಿಬಿ ಪ್ರತ್ಯೇಕ ತಂಡ ರಚಿಸಿದೆ; ಶೋಧಕಾರ್ಯ ನಡೆಸುತ್ತಿದೆ.

ಪ್ರಭಾವಿ ಉದ್ಯಮಿಯ ಮೊಮ್ಮಗನಿಗಾಗಿ ಪೊಲೀಸರ ಹುಡಕಾಟ:
ಇನ್ನು ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಪ್ರಭಾವಿ ಉದ್ಯಮಿಯ ಮೊಮ್ಮಗನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಹಿಂದೆ ಉದ್ಯಮಿಯ ಮೊಮ್ಮಗ ಗಾಂಜಾ ಪ್ರಕರಣವೊಂದರಲ್ಲಿ ಬಂಧನನಾಗಿದ್ದ. ರಾಜಕಾರಣಗಳ ಪುತ್ರರು ಹಾಗೂ ನಟ ನಟಿಯರ ಸಂಪರ್ಕ ಹೊಂದಿದ್ದ. ಅಲ್ಲದೆ ಡ್ರಗ್ ಪೆಡ್ಲರ್‌ಗಳ ಜೊತೆ ನಿರಂತರವಾಗಿ ಸಂಪರ್ಕ ಹೊಂದಿರುವ ಶಂಕೆ ಇದೆ. ಹೀಗಾಗಿ ಡ್ರಗ್ಸ್ ದಂಧೆಯಲ್ಲಿ ಈತನೂ ಭಾಗಿಯಾಗಿರುವ ಶಂಕೆ ಇದ್ದು, ಈಗಾಗಲೇ ಕರ್ನಾಟಕ ಮತ್ತು ಆಂಧ್ರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Click on your DTH Provider to Add TV9 Kannada