ಯಾರು ಅಪಾಯಕಾರಿ ಜನ, ನಿಮಗೆ ಕಷ್ಟ ಕೊಡುವವರು ಯಾರು? ಚಾಣಕ್ಯ ನೀತಿಯಲ್ಲಿ ಇದರ ಬಗ್ಗೆ ಏನಿದೆ ವಿವರಣೆ?
chanakya niti in kannada: ಆಚಾರ್ಯ ಚಾಣಕ್ಯರ ಮಾತುಗಳನ್ನು ಆಲಿಸಲು, ಪಾಲಿಸಲು ತುಂಬಾ ಕಠಿಣವೆನಿಸುತ್ತದೆ. ಆದರೆ ವಾಸ್ತವದ ಕಠೋರತೆಯಲ್ಲಿ ಇದನ್ನು ಪರಾಮರ್ಶಿಸಿದಾಗ ನಿಜಕ್ಕೂ ಅವು ಜೀವನದ ಕಠೋರ ಸತ್ಯಗಳು ಎನಿಸುತ್ತವೆ. ಆಚಾರ್ಯ ಚಾಣಕ್ಯರ ಒಂದೊಂದು ಮಾತೂ ಜೀವನದ ಗೂಢ ರಹಸ್ಯಗಳನ್ನು ತೆರೆದಿಡುತ್ತವೆ.
ಆಚಾರ್ಯ ಚಾಣಕ್ಯರ ಮಹತ್ವದ ಕೃತಿಗಳಲ್ಲಿ ಒಂದಾದ ನೀತಿ ಶಾಸ್ತ್ರ ಗ್ರಂಥದಲ್ಲಿ ಧರ್ಮ, ಸಮಾಜ, ರಾಜನೀತಿ, ಧನ ಇವೇ ಮುಂತಾದ ಎಲ್ಲ ವಿಷಯಗಳ ಬಗ್ಗೆಯೂ ಆದ್ಯಂತವಾಗಿ ಹೇಳಿದ್ದಾರೆ. ಇದರಿಂದ ಯಾರಿಗೇ ಆಗಲಿ ಸನ್ಮಾರ್ಗ ಯಾವುದು, ದುರ್ಮಾರ್ಗ ಯಾವುದು ಎಂಬುದು ತಿಳಿದುಬರುತ್ತದೆ. ಈ ಲೇಖನದಲ್ಲಿ ನಿಮಗೆ ಯಾರು ಅಪಾಯಕಾರಿ ಜನ? ಹೆಚ್ಚು ಕಷ್ಟ ಕೊಡುವವರು ಯಾರು? ಎಂಬುದನ್ನು ಚಾಣಕ್ಯ ನೀತಿಯ ಅನುಸಾರ ವಿವರಣೆ ನೀಡಲಾಗಿದೆ.
ಆಚಾರ್ಯ ಚಾಣಕ್ಯರ ಮಾತುಗಳನ್ನು ಆಲಿಸಲು, ಪಾಲಿಸಲು ತುಂಬಾ ಕಠಿಣವೆನಿಸುತ್ತದೆ. ಆದರೆ ವಾಸ್ತವದ ಕಠೋರತೆಯಲ್ಲಿ ಇದನ್ನು ಪರಾಮರ್ಶಿಸಿದಾಗ ನಿಜಕ್ಕೂ ಅವು ಜೀವನದ ಕಠೋರ ಸತ್ಯಗಳು ಎನಿಸುತ್ತವೆ. ಆಚಾರ್ಯ ಚಾಣಕ್ಯರ ಒಂದೊಂದು ಮಾತೂ ಜೀವನದ ಗೂಢ ರಹಸ್ಯಗಳನ್ನು ತೆರೆದಿಡುತ್ತವೆ. ನಾವು ಆವಾಗಾವಾಗ ಆಚಾರ್ಯ ಚಾಣಕ್ಯರ ಮಾತುಗಳನ್ನು ಅಲ್ಲಿ ಇಲ್ಲಿ ಆಲಿಸುತ್ತೇವೆಯೇ ಹೊರತು ಅದನ್ನು ಪಾಲಿಸಲು ಹೋಗುವುದಿಲ್ಲ.
ನಿಮ್ಮ ಬಗ್ಗೆ ಎದುರಿಗೆ ಮಾತನಾಡುವವರ ಬಗ್ಗೆ ಗೌರವದಿಂದಿರಿ; ಹಿಂದೆ ಮಾತನಾಡುವವರ ಬಗ್ಗೆ ಹುಷಾರು!
ಈ ಸಾಲಿನಲ್ಲಿ ಆಚಾರ್ಯ ಚಾಣಕ್ಯರ ಎರಡು ರೀತಿಯ ಜನರನ್ನು ಪರಿಚಯಿಸುತ್ತಾರೆ. ಅಂತಹ ಎರಡು ಮಾದರಿಯ ಜನ ಖಂಡಿತಾ ನಿಮ್ಮ ಜೀವನದಲ್ಲೂ ಬಂದಿರುತ್ತಾರೆ. ಒಂದು ಈತಿಯ ಜನ ಅಂದರೆ ಪ್ರತಿ ಮಾತು ಮಾತಿಗೂ ಚರ್ಚೆ ನಡೆಸುತ್ತಾ ಇರುತ್ತಾರೆ. ಅಂದರೆ ಬರೀ ಮಾತು ಮಾತು ಅವರದ್ದಾಗಿರುತ್ತದೆ. ಅದರಿಂದ ನಿಮಗೂ ಕಸಿವಿಸಿ ಆಗತೊಡಗುತ್ತದೆ. ಸಾಕಪ್ಪಾ ಸಾಕು ಇವರ ಮತು ಅನಿಸಿಬಿಡುತ್ತದೆ. ಆದರೆ ಆಚಾರ್ಯ ಚಾಣಕ್ಯರು ಹೇಳುವಂತೆ ಹೀಗೆ ಬಡ ಬಡಾ ಅಂತಾ ಮಾತನಾಡುವವರು ನಿಮಗೆ ಅಪಾಯವನ್ನು ತಂದೊಡ್ಡುವುದಿಲ್ಲ. ಅವರು ನಿಮಗೆ ಅಪಾಯಕಾರಿಗಳು ಎನಿಸುವುದಿಲ್ಲ. ಆದರೆ ನಿಜವಾದ ಅಪಾಯಕಾರಿ ಜನ ಯಾರು ಅಂದರೆ ನಿಮ್ಮ ಮುಖಸ್ತುತಿ ಮಾಡುವ ಹಾಗೆ ನಿಮ್ಮೆದುರು ಸಿಹಿಯಾದ ಮಾತುಗಳನ್ನಾಡುತ್ತಾರೆ. ಆದರೆ ನಿಮ್ಮ ಬೆನ್ನಹಿಂದೆಯೇ ನಿಮ್ಮ ಬಗ್ಗೆ ಕೆಟ್ಟ ಕೆಟ್ಟ ಮಾತುಗಳನ್ನು ಹೇಳುತ್ತಿರುತ್ತಾರೆ. ಇಂತಹವರು ನಿಮಗೆ ಮೋಸ ಮಾಡುತ್ತಾರೆ. ಚರ್ಚೆ ಮಅಡುವವರು ತಮ್ಮ ಹೃದಯದಲ್ಲಿ, ಮನದಲ್ಲಿ ಇರುವುದನ್ನು ಇದ್ದಹಾಗೆಯೇ ನಿಮ್ಮ ಮುಂದೆಯೇ ಹೇಳಿಬಿಡುತ್ತಾರೆ. ಆದರೆ ಮೋಸ ಮಾಡುವವರು ನಿಮ್ಮ ಬಗ್ಗೆ ಅವರ ಮನದಲ್ಲಿರುವುದನ್ನು ನಿಮಗೆ ಹೇಳುವುದಿಲ್ಲ. ಇಂತಹ ಜನರ ಬಗ್ಗೆ ಹುಷಾರಾಗಿಯೇ ಇರಿ.
ನಿಮ್ಮನ್ನು ಗೌರವಿಸುವವರ ಬಗ್ಗೆ ನಿಮಗೂ ಗೌರವ ಇರಲಿ; ಶಾಂತಿ ಹಾಳು ಮಾಡುವವರ ಬಗ್ಗೆಯಷ್ಟೇ ಎಚ್ಚರವಿರಲಿ
ಅನೇಕ ಬಾರಿ ನಿಮ್ಮ ಮೇಲೆ ಪ್ರಭಾವ ಬೀರುವವರನ್ನು ನೀವು ಜೀವನದಲ್ಲಿ ಎದುರುಗೊಳ್ಳುತ್ತೀರಿ. ಅಗತ್ಯಕ್ಕಿಂತಲೂ ಹೆಚ್ಚಿಗೆ ಅಂತಹವರಿಗೆ ನೀವು ಪ್ರಾಮುಖ್ಯತೆ ಕೊಡತೊಡಗುತ್ತೀರಿ. ಒಂದು ವೇಳೆ ನೀವು ಯಾರಿಗಾದರೂ ಅಗತ್ಯಕ್ಕಿಂತಲೂ ಹೆಚ್ಚಿನ ಮರ್ಯಾದೆ, ಪ್ರಾಮುಖ್ಯತೆ ಕೊಡುತ್ತಿದ್ದೀರಿ ಎಂದಾದರೆ ಅವರೂ ನಿಮಗೆ ಅಷ್ಟೇ ಮರ್ಯಾದೆ, ಪ್ರಾಮುಖ್ಯತೆ ಕೊಡಬೇಕು ಎಂದಲ್ಲ. ಯಾವಾಗ ನೀವು ತೆಳು ಭಿನ್ನತೆಯನ್ನು ಅರ್ಥೈಸಿಕೊಳ್ಳುತ್ತೀರೋ ಆಗ ನಿಮಗೆ ಸಹಜವಾಗಿಯೇ ದುಃಖವಾಗುತ್ತದೆ. ಆಗ ನೀವು ನಿಮ್ಮ ಎದುರಿಗಿನ ವ್ಯಕ್ತಿಗೆ ದುಃಖ ಕೊಡಲು ಬಯಸುತ್ತೀರಿ. ಬರುಬರುತ್ತಾ ಇದು ಹೆಚ್ಚಾಗುತ್ತಾ ಹೋಗುತ್ತದೆ. ಅದಕ್ಕೇ ಆಚಾರ್ಯ ಚಾಣಕ್ಯ ಹೇಳೋದು ಯಾವ ವ್ಯಕ್ತಿಗೆ ಎಷ್ಟು ಮರ್ಯಾದೆ ಕೊಡಬೇಕೋ ಅಷ್ಟು ಮರ್ಯಾದೆ, ಪ್ರಾಮುಖ್ಯತೆಯನ್ನು ಮಾತ್ರವೇ ನೀಡಿ. ಅವರು ನಿಮಗೆ ಪರಸ್ಪರ ಎಷ್ಟು ಮನ್ನಣೆ ನೀಡುತ್ತಾರೋ ಅಷ್ಟು ಮಾತ್ರವೇ ಅವರಿಗೆ ಮಣೆ ಹಾಕಿ. ಆಗಲೇ ನಿಮ್ಮ ಜೀವನ ಸಮತೋಲವಾಗಿ ಸಾಗುತ್ತದೆ.
(chanakya niti in kannada who are dangerous to you and detrimental to your peace)