ಗೃಹ ಇಲಾಖೆ ಕಡೆಯಿಂದ ರಮೇಶ್ ಜಾರಕಿಹೊಳಿ ಸಿಡಿ ತನಿಖೆಗೆ ಆದೇಶ ಬರಲಿದೆ: ಸಿಎಂ ಯಡಿಯೂರಪ್ಪ
ಅಶ್ಲೀಲ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಇಲಾಖೆಯಿಂದ ತನಿಖೆಗೆ ಘೋಷಣೆ ಮಾಡಲಾಗುತ್ತೆ. ತನಿಖೆ ಬಗ್ಗೆ ಗೃಹ ಸಚಿವರು ಸೂಕ್ತ ತೀರ್ಮಾನ ಕೈಗೊಳ್ತಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಇಲಾಖೆಯಿಂದ ತನಿಖೆಗೆ ಘೋಷಣೆ ಮಾಡಲಾಗುತ್ತೆ. ತನಿಖೆ ಬಗ್ಗೆ ಗೃಹ ಸಚಿವರು ಸೂಕ್ತ ತೀರ್ಮಾನ ಕೈಗೊಳ್ತಾರೆ. ಈ ಬಗ್ಗೆ ನಿನ್ನೆ ಮನವಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿಯೇ ತನಿಖೆ ನಡೆಯುವುದು ಎಂದು ಮಾಹಿತಿ ನೀಡಿದ್ದಾರೆ.
ಇದೇ ವಿಚಾರದ ಮುಂದುವರಿದ ಭಾಗವಾಗಿ ನ್ಯಾಯಾಲಯದ ಮೆಟ್ಟಿಲೇರಿದ 6 ಸಚಿವರಿಂದ ಉತ್ತರ ಪಡೆಯಲು ಕಾಂಗ್ರೆಸ್ ವಿಧಾನಸಭೆ ಕಲಾಪದಲ್ಲಿ ನಿರಾಕರಿಸಿದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ತಿರಸ್ಕಾರ ಮಾಡಲಿ, ಒಳ್ಳೆಯದೇ ಎಂದು ಹೇಳಿದ್ದಾರೆ.
Published On - 12:26 pm, Wed, 10 March 21