ದಂಪತಿ ಐಸೋಲೇಷನ್​ ವಾರ್ಡ್​ಗೆ ಶಿಫ್ಟ್, ಐದಾರು ವರ್ಷದ ಮಕ್ಕಳಿಬ್ಬರನ್ನ ಕೇಳೋರಿಲ್ಲ

| Updated By: ಸಾಧು ಶ್ರೀನಾಥ್​

Updated on: Jun 29, 2020 | 1:04 PM

ಬೆಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದಂಪತಿಯನ್ನು ಐಸೋಲೇಷನ್​ ವಾರ್ಡ್​ಗೆ ಶಿಫ್ಟ್​ ಮಾಡಲಾಗಿದ್ದು ಇದರಿಂದ ಅವರ ಪುಟ್ಟ ಮಕ್ಕಳು ಸಂಕಷ್ಟ ಎದುರಿಸುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ದಂಪತಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೊವಿಡ್​​ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ಗೆ ಶಿಫ್ಟ್​ ಮಾಡಲಾಗಿತ್ತು. ಆದರೆ, ದಂಪತಿಯ ಇಬ್ಬರು ಮಕ್ಕಳಿಗೆ ನೆಗೆಟಿವ್ ರಿಪೋರ್ಟ್ ಬಂದ ಕಾರಣ ಅವರನ್ನು ಅಧಿಕಾರಿಗಳು ಕರೆದೊಯ್ಯಲಿಲ್ಲ. ಇದೀಗ, ಸೋಂಕಿತರ ಮಕ್ಕಳನ್ನ ಸಂಬಂಧಿಕರು ಹಾಗೂ ನೆರೆಹೊರೆಯವರು ಹತ್ತಿರ ಸೇರಿಸಿಕೊಳ್ತಿಲ್ಲ. ಹೀಗಾಗಿ 5 ರಿಂದ 6ವರ್ಷದ ಪುಟ್ಟ ಮಕ್ಕಳನ್ನು […]

ದಂಪತಿ ಐಸೋಲೇಷನ್​ ವಾರ್ಡ್​ಗೆ ಶಿಫ್ಟ್, ಐದಾರು ವರ್ಷದ ಮಕ್ಕಳಿಬ್ಬರನ್ನ ಕೇಳೋರಿಲ್ಲ
Follow us on

ಬೆಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದಂಪತಿಯನ್ನು ಐಸೋಲೇಷನ್​ ವಾರ್ಡ್​ಗೆ ಶಿಫ್ಟ್​ ಮಾಡಲಾಗಿದ್ದು ಇದರಿಂದ ಅವರ ಪುಟ್ಟ ಮಕ್ಕಳು ಸಂಕಷ್ಟ ಎದುರಿಸುತ್ತಿರುವ ಘಟನೆ ನಗರದಲ್ಲಿ ನಡೆದಿದೆ.

ದಂಪತಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೊವಿಡ್​​ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ಗೆ ಶಿಫ್ಟ್​ ಮಾಡಲಾಗಿತ್ತು. ಆದರೆ, ದಂಪತಿಯ ಇಬ್ಬರು ಮಕ್ಕಳಿಗೆ ನೆಗೆಟಿವ್ ರಿಪೋರ್ಟ್ ಬಂದ ಕಾರಣ ಅವರನ್ನು ಅಧಿಕಾರಿಗಳು ಕರೆದೊಯ್ಯಲಿಲ್ಲ.

ಇದೀಗ, ಸೋಂಕಿತರ ಮಕ್ಕಳನ್ನ ಸಂಬಂಧಿಕರು ಹಾಗೂ ನೆರೆಹೊರೆಯವರು ಹತ್ತಿರ ಸೇರಿಸಿಕೊಳ್ತಿಲ್ಲ. ಹೀಗಾಗಿ 5 ರಿಂದ 6ವರ್ಷದ ಪುಟ್ಟ ಮಕ್ಕಳನ್ನು ಯಾರು ನೋಡಿಕೊಳ್ಳಲು ಇಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತ ಮಕ್ಕಳ ಗೋಳು ಬಗ್ಗೆ ತಿಳಿದ ಸೋಂಕಿತ ದಂಪತಿ ‌ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನೂ ಸಹ ಪ್ರಶ್ನಿಸಿದರು. ಆದರೆ, ನಿಮ್ಮ ನೆಂಟರು ಮಕ್ಕಳನ್ನು ಇರಿಸಿಕೊಳ್ಳಲು ಒಪ್ಪಿಕೊಳ್ಳುತ್ತಿಲ್ಲ. ನಮ್ಮನ್ನು ಬೈದು ಕಾಲ್ ಕಟ್ ಮಾಡ್ತಿದ್ದಾರೆ ಎಂದು ಬಿಬಿಎಂಪಿ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Published On - 11:57 am, Mon, 29 June 20