Chocolate Gulab Jamun: ಚಾಕೊಲೇಟ್ ಗುಲಾಬ್ ಜಾಮೂನ್ ವೀಡಿಯೊ ಇದೀಗಾ ಸಖತ್ ವೈರಲ್

ಇತ್ತೀಚೆಗೆ ಚಾಕೊಲೇಟ್ ಗುಲಾಬ್ ಜಾಮೂನ್ ಮೇಲೆ ಕರಗಿಸಿದ ಚಾಕೊಲೇಟ್ ಸುರಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್ತ್ ಆಗಿ ವೈರಲ್ ಆಗುತ್ತಿದೆ.

Chocolate Gulab Jamun: ಚಾಕೊಲೇಟ್ ಗುಲಾಬ್ ಜಾಮೂನ್ ವೀಡಿಯೊ ಇದೀಗಾ ಸಖತ್ ವೈರಲ್
ಸಾಂದರ್ಭಿಕ ಚಿತ್ರ
Image Credit source: Google
Updated By: ಅಕ್ಷತಾ ವರ್ಕಾಡಿ

Updated on: Dec 04, 2022 | 5:17 PM

ಇತ್ತೀಚೆಗೆ ಚಾಕೊಲೇಟ್ ಗುಲಾಬ್ ಜಾಮೂನ್(Chocolate Gulab Jamun) ಮೇಲೆ ಕರಗಿಸಿದ ಚಾಕೊಲೇಟ್ ಸುರಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನ ಒಂದಲ್ಲ ಒಂದು ರೀತಿಯ ವಿಭಿನ್ನವಾದ ಹೊಸ ಹೊಸ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ವಿಡಿಯೋಗಳು ಬೇರೇನೇ ಹವಾ ಕ್ರಿಯೇಟ್ ಮಾಡುತ್ತದೆ. ಅಂತದ್ದೇ ಒಂದು ವಿಡಿಯೋ ಆಹಾರ ಪ್ರಿಯರಲ್ಲಿ ಅಚ್ಚರಿಯುಂಟು ಮಾಡಿದೆ.

ಆದುವೇ ಚಾಕೊಲೇಟ್ ಗುಲಾಬ್ ಜಾಮೂನ್. ಈ ವಿಡಿಯೋ ನೋಡಿದಾಗ ಒಂದು ಕ್ಷಣ ನಿಮ್ಮ ಬಾಯಲ್ಲಿ ನಿರೂರುವುದಂತೂ ಗ್ಯಾರಂಟಿ.

ರಿಚಾ ಮಿಶ್ರಾ ಎಂಬ ಬಳಕೆದಾರರು ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕೆಲವೇ ಕ್ಷಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರ ಗಮನ ಸೆಳೆದಿದೆ. ಸಾವಿರಾರು ಜನರು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಅದು ಗುಲಾಬ್ ಜಾಮೂನ್ ಅಲ್ಲ, ಕೇಕ್ ಎಂದು ಬರೆದ್ದಿದ್ದಾರೆ. ಅದರಲ್ಲೂ ಗುಲಾಬ್ ಜಾಮೂನ್ ಪ್ರಿಯರಂತೂ ನೀವು ಏಕೆ ಗುಲಾಬ್ ಜಾಮೂನ್ ರುಚಿಯನ್ನು ಹಾಳು ಮಾಡುತ್ತಿದ್ದೀರಿ, ಚಾಕೊಲೇಟ್ ಗಿಂತ ಜಾಮೂನ್ ಎಷ್ಟೋ ಹೆಚ್ಚಿನ ರುಚಿಯನ್ನು ಹೊಂದಿದೆ. ಚಾಕೊಲೇಟ್ ನ್ನು ಜಾಮೂನ್ ನೊಂದಿಗೆ ಹೋಲಿಸಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ ಈ ವಿಡಿಯೋ ಮಾತ್ರ ಸಖತ್ತ್ ಆಗಿ ವೈರಲ್ ಆಗ್ತಾ ಇದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 5:16 pm, Sun, 4 December 22