ಬೆಂಗಳೂರು: ಜೆಡಿಎಸ್ ಬಗ್ಗೆ ಬಿಜೆಪಿಯವಱರೂ ಮಾತನಾಡಬಾರದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಮ್ಮ ಪಕ್ಷ ನಾವು ಕಟ್ಟುತ್ತೇವೆ, JDSನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು JDS ಕಟ್ಟಿದ್ದಾರೆ ಎಂದು ಸಿಎಂ B.S.ಯಡಿಯೂರಪ್ಪ ಹೇಳಿದರು.
ಆ ಪಕ್ಷವನ್ನ ಬೆಳೆಸಿ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಆ ಪಕ್ಷದ ವಿಲೀನದ ಬಗ್ಗೆ ಮಾತಾಡೋದು ದೇವೇಗೌಡರು ಮತ್ತು H.D.ಕುಮಾರಸ್ವಾಮಿ ಅವರನ್ನು ಅವಮಾನಿಸಿದಂತೆ ಎಂದು ಸಿಎಂ B.S.ಯಡಿಯೂರಪ್ಪ ಹೇಳಿದರು.
ವಿಲೀನದ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗುವುದಿಲ್ಲ. ಬೇರೆ ಯಾರೂ ಕೂಡ ಮಾತಾಡಬಾರದು. ಪರಿಷತ್ ಸಭಾಪತಿ ವಿಚಾರವಾಗಿ ಸಹಕಾರ ನೀಡಿದ್ದಾರೆ. ಇನ್ಮುಂದೆಯೂ ಅಗತ್ಯವಿದ್ದರೆ ಸಹಕಾರ ಕೊಡಬಹುದು. ಆದರೆ ವಿಲೀನ ಆಗ್ತಾರೆಂದು ಹೇಳೋದು ಶೋಭೆ ತರಲ್ಲ. ನಮ್ಮ ಪಕ್ಷದಲ್ಲೂ ಯಾರೂ ಆ ರೀತಿ ಮಾತಾಡಬಾರದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
BJP ಜೊತೆ JDSನ್ನು ವಿಲೀನಗೊಳಿಸುವ ವರದಿ ಸುಳ್ಳು -ಸಿಎಂ BSY ಸ್ಪಷ್ಟನೆ