Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಂದರ್ಶನ: B Y ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ನನಗೆ ಯಾವ ದೂರೂ ಬಂದಿಲ್ಲ

ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಟಿವಿ9 ಸಂದರ್ಶನ ನಡೆಸಿದೆ. ಕರ್ನಾಟಕದಲ್ಲಿ ಬಿಜೆಪಿಯ ಸದ್ಯದ ಸ್ಥಿತಿಗತಿ, ಪಕ್ಷ ಸಂಘಟನೆ, ಜೆಡಿಎಸ್ ಜೊತೆ ಮೈತ್ರಿ, ಮುಖ್ಯಮಂತ್ರಿ ಬದಲಾವಣೆ, ವಿಜಯೇಂದ್ರ ಹಸ್ತಕ್ಷೇಪ..ಹೀಗೆ ವಿವಿಧ ವಿಷಯಗಳ ಕುರಿತು ಸಮಗ್ರವಾಗಿ ಮಾತನಾಡಿದ್ದಾರೆ ಅರುಣ್ ಸಿಂಗ್.

ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಂದರ್ಶನ: B Y ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ನನಗೆ ಯಾವ ದೂರೂ ಬಂದಿಲ್ಲ
ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (ಸಂಗ್ರಹ ಚಿತ್ರ)
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Dec 21, 2020 | 2:40 PM

ದೆಹಲಿ: ಬಿಜೆಪಿಯ ಹಿರಿಯ ನಾಯಕ, ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಜೊತೆ ಟಿವಿ9 ಸಂದರ್ಶನ ನಡೆಸಿದೆ. ಕರ್ನಾಟಕದ ಬಿಜೆಪಿ ಪ್ರಭಾರಿಯಾಗಿ ನಿಯುಕ್ತಿಗೊಂಡ ನಂತರ ಮೊದಲ ಬಾರಿಗೆ ಕನ್ನಡದ ಸುದ್ದಿ ವಾಹಿನಿಗೆ ಅವರು ಸಂದರ್ಶನ ನೀಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯ ಸದ್ಯದ ಸ್ಥಿತಿಗತಿ, ಪಕ್ಷ ಸಂಘಟನೆ, ಜೆಡಿಎಸ್ ಜೊತೆ ಮೈತ್ರಿ, ಮುಖ್ಯಮಂತ್ರಿ ಬದಲಾವಣೆ, ಬಿ. ವೈ. ವಿಜಯೇಂದ್ರ ಹಸ್ತಕ್ಷೇಪ.. ಹೀಗೆ ವಿವಿಧ ವಿಷಯಗಳ ಕುರಿತು ಸಮಗ್ರವಾಗಿ ಮಾತನಾಡಿದ್ದಾರೆ ಅರುಣ್ ಸಿಂಗ್.

ಪ್ರ: ನಮಸ್ಕಾರ ಸರ್.. ತಾವು ಕರ್ನಾಟಕ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡ ನಂತರ ಪಕ್ಷದಲ್ಲಿ ಯಾವ ಬದಲಾವಣೆ ತರಬೇಕೆಂದು ಯೋಚಿಸಿದ್ದೀರಿ? ಉತ್ತರ: ಕರ್ನಾಟಕದಲ್ಲಿ ಬಿಜೆಪಿ ಸಂಘಟನೆ ಹಿಂದಿನಿಂದಲೂ ಚೆನ್ನಾಗಿದೆ. ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಯೋಜನೆ ರೂಪಿಸಿದ್ದೇವೆ. ಆದರೆ, ಕೆಲವೆಡೆ ಬಿಜೆಪಿ ಕಡಿಮೆ ಮತ ಪಡೆಯುತ್ತಿದೆ. ಇಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಪಕ್ಷ ಸಂಘಟನೆಯತ್ತ ಹೆಚ್ಚು ಗಮನ ಹರಿಸುತ್ತಿದ್ದೇವೆ. ಉದಾಹರಣೆಗೆ, ಹಳೇ  ಮೈಸೂರು ಭಾಗದಲ್ಲಿ ಬಿಜೆಪಿ ಸ್ವಲ್ಪ ದುರ್ಬಲವಾಗಿದೆ. ಈ ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಯೋಜನೆ ರೂಪಿಸುತ್ತೇವೆ.

ಟಿವಿ9ಗೆ ಸಂದರ್ಶನ ನೀಡುತ್ತಿರುವ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ಪ್ರ: ಬಿಜೆಪಿ ಮತ್ತು ಜೆಡಿಎಸ್​ನ ಸಂಬಂಧದ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಜೆಡಿಎಸ್​ ನಾಯಕರು ಬಿಜೆಪಿ ಹೈಕಮಾಂಡ್ ಜೊತೆ ಪಕ್ಷ ವಿಲೀನದ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ..? ಉ: ಈ ವದಂತಿಗಳು ಕೇವಲ ಊಹಾಪೋಹವಷ್ಟೇ. ಯಾರೂ ಈ ಸುದ್ದಿಯನ್ನು ನಂಬಬೇಕಿಲ್ಲ. ಜೆಡಿಎಸ್ ಮೈತ್ರಿ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಬಿಜೆಪಿ ಸರ್ಕಾರಕ್ಕೆ ಬಹುಮತ ಇರುವುದರಿಂದ ಯಾವುದೇ ಪಕ್ಷದ ಜೊತೆ ಮೈತ್ರಿಯ ಅವಶ್ಯಕತೆಯಿಲ್ಲ. ಬಿಜೆಪಿ ತನ್ನ ಬಲದ ಮೇಲೆ‌ ಚುನಾವಣೆ ಎದುರಿಸಲಿದೆ. ಜೆಡಿಎಸ್ ಜೊತೆ ಮೈತ್ರಿಯ ಪ್ರಶ್ನೆಯೇ ಇಲ್ಲ. ಪಕ್ಷ ಬಲಗೊಳ್ಳಬೇಕಾದ ಕೆಲ ಪ್ರದೇಶಗಳಲ್ಲಿ ಕಾರ್ಯೋನ್ಮುಖರಾಗುತ್ತೇವೆ. ಉದಾಹರಣೆಗೆ ಹಳೇ ಮೈಸೂರು ಭಾಗ. ಅಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತೇವೆ. ಪರಿಸ್ಥಿಗೆ ಅನುಗುಣವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ.

ಪ್ರ: ಹಾಗಾದ್ರೆ, ಬಿಜೆಪಿ ಮತ್ತು ಜೆಡಿಎಸ್ ಮತ್ತೊಮ್ಮೆ ಮೈತ್ರಿ ಮಾಡಿಕೊಳ್ಳಲ್ಲವಾ..? ಉ: ಖಂಡಿತ ಇಲ್ಲ. ಬಿಜೆಪಿ ಸ್ವಂತ ಸಾಮರ್ಥ್ಯದ ಮೇಲೆ ಚುನಾವಣೆ ಎದುರಿಸುತ್ತದೆ. ಮೈತ್ರಿಯ ಯಾವುದೇ ಆಯ್ಕೆಯೂ ನಮ್ಮೆದುರಿಗಿಲ್ಲ.

ಅರುಣ್ ಸಿಂಗ್

ಪ್ರ: ತಾವು ಕರ್ನಾಟಕದ ಪ್ರಭಾರಿಯಾದ ಮೇಲೆ ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆಯಾಗಲಿದೆ ಎನ್ನಲಾಗುತ್ತಿತ್ತು. ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪದವಿಯಿಂದ ಹೈಕಮಾಂಡ್ ಕೆಳಗಿಳಿಸಲಿದೆಯಾ? ಉ: ಬಿ. ಎಸ್.ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಬಗ್ಗೆ ಹೈಕಮಾಂಡ್ ಯಾವತ್ತೂ ಯೋಚಿಸಿಲ್ಲ. ಬಿ. ಎಸ್. ಯಡಿಯೂರಪ್ಪ ಓರ್ವ ಮಾಸ್ ಲೀಡರ್. ಬಿಜೆಪಿಯ ಹಿರಿಯ ಕಾರ್ಯಕರ್ತರು. ರಾಜ್ಯದ ಜನರು ನೆನಪಿನಲ್ಲಿಡುವಂತಹ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕನ್ನಡಿಗರ ಜನಮಾನಸದಲ್ಲಿ ನೆಲೆಸಿದ್ದಾರೆ. ಭಾಗ್ಯಲಕ್ಷ್ಮಿಯಂತಹ ಉತ್ತಮ ಯೋಜನೆಗಳನ್ನು ನೀಡಿದ್ದಾರೆ. ಇಂತಹ ಅದ್ಭುತ ನಾಯಕನನ್ನು ಬದಲಾಯಿಸುವ ಯೋಚನೆ ಖಂಡಿತ  ಹೈಕಮಾಂಡ್​ಗಿಲ್ಲ. ಈ ಅನಗತ್ಯ ಗೊಂದಲ ಸೃಷ್ಟಿಯ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ. ಈಗ ಬಿ. ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾರೆ, ಮುಂದೆಯೂ ಅವರೇ ಸಿಎಂ ಆಗಿರಲಿದ್ದಾರೆ. ಅವರಿಗೆ ಉತ್ತಮ ಆಡಳಿತ ನೀಡುವ ಸಾಮರ್ಥ್ಯವಿದೆ.

ಪ್ರ: ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ. ವೈ. ವಿಜಯೇಂದ್ರ ಅವರ ಕುರಿತು ಒಂದಷ್ಟು ಮಾತುಗಳು ಕೇಳಿಬರುತ್ತಿವೆ.. ಉ: ಬಿ. ವೈ. ವಿಜಯೇಂದ್ರ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷರಿದ್ದಾರೆ. ಪಕ್ಷವನ್ನು ಬಲಗೊಳಿಸುವ ಕೆಲಸದಲ್ಲಿ ನಿರತರಾಗಿದ್ಧಾರೆ. ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಪ್ರ: ಬಿಜೆಪಿಯ ಕೆಲ ಶಾಸಕರು ಬಿ. ವೈ. ವಿಜಯೇಂದ್ರ ವಿರುದ್ಧ ಹೈಕಮಾಂಡ್​ಗೆ ದೂರು ನೀಡಿದ್ದರು. ಈ ಕುರಿತು ತಮ್ಮ ಪ್ರತಿಕ್ರಿಯೆ? ಉ: ಈವರೆಗೆ ಬಿ. ವೈ. ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ನನಗೆ ಯಾವ ದೂರುಗಳೂ ಬಂದಿಲ್ಲ.

ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ಪ್ರ: ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಲಿದ್ದಾರಾ? ಅಥವಾ ಸಂಪುಟ ಪುನಾರಚನೆ ಆಗಲಿದೆಯೇ? ಉ: ಸಂಪುಟ ವಿಸ್ತರಿಸಬೇಕೇ ಅಥವಾ  ಪುನಃ ರಚಿಸಬೇಕೇ  ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೇ ಬಿಟ್ಟ ವಿಚಾರ. ಈ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಅವರ ಕೈಯಲ್ಲಿದೆ. ತಮ್ಮ ಸಂಪುಟದಲ್ಲಿ ಏನಾಗಬೇಕು, ಯಾರು ಇರಬೇಕು ಅಥವಾ ಇರಬಾರದು ಎಂದು ನಿರ್ಧರಿಸುವ ಅಧಿಕಾರವನ್ನು ಅವರ ಮರ್ಜಿಗೆ ಬಿಡಲಾಗಿದೆ.

ಕರ್ನಾಟಕ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ವದಂತಿಗಳಿಗೆ ಟಿವಿ9 ಸಂದರ್ಶನದ ಮೂಲಕ  ಅರುಣ್ ಸಿಂಗ್ ತೆರೆಎಳೆದರು. ಜೆಡಿಎಸ್​ ಜೊತೆ ಮೈತ್ರಿ ಪ್ರಶ್ನೆಯೇ ಇಲ್ಲ ಎಂಬ ಮೂಲಕ ಬಿಜೆಪಿ ಸ್ವತಂತ್ರವಾಗಿ ಚುನಾವಣೆ ಎದುರಿಸಲಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ, ಹಳೇ ಮೈಸೂರು ಭಾಗದಲ್ಲಿ ಪಕ್ಷ ದುರ್ಬಲವಾಗಿರುವುದನ್ನು ಒಪ್ಪಿಕೊಂಡ ಅವರು, ಪಕ್ಷವನ್ನು ಬಲಗೊಳಿಸಲು ಯೋಜನೆಗಳನ್ನು ರೂಪಿಸುತ್ತಿರುವುದಾಗಿ ತಿಳಿಸಿದರು. ಸಂಪುಟ ವಿಸ್ತರಣೆಯ ಅಧಿಕಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿಯೇ ಇದೆ ಎಂದು ಮಂತ್ರಿ ಸ್ಥಾನದ ಆಸಕ್ತರಿಗೆ  ಗುಟ್ಟು ಬಿಟ್ಟುಕೊಟ್ಟರು.

ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ