ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿಗಿಂತ ಹೆಚ್ಚು ಸ್ಥಾನ ಗೆದ್ದರೆ ಟ್ವೀಟರ್​ ಬಳಕೆ ನಿಲ್ಲಿಸುವೆ: ಪ್ರಶಾಂತ್ ಕಿಶೋರ್

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿಗಿಂತ ಹೆಚ್ಚು ಸ್ಥಾನ ಗೆದ್ದರೆ ಟ್ವೀಟರ್​ ಬಳಕೆ ನಿಲ್ಲಿಸುವೆ: ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 220 ಸದಸ್ಯ ಬಲ ಬೇಕು. 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಹುಕಿಯಲ್ಲಿರುವ ಬಿಜೆಪಿ, ಅಮಿತ್ ಶಾ ಪ್ರಚಾರದ ಸುನಾಮಿ ಮುಂದೆ ತೃಣಮೂಲ ಕಾಂಗ್ರೆಸ್​ ಸರ್ಕಾರ ನೆಲಕಚ್ಚುವುದು ಖಚಿತ ಎಂಬ ಭರವಸೆ ವ್ಯಕ್ತಪಡಿಸಿದೆ.

guruganesh bhat

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 21, 2020 | 3:16 PM

ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಸರಣಿ ಪ್ರಚಾರ ಸಭೆಗಳನ್ನು ನಡೆಸಿದ ಬೆನ್ನಲ್ಲೇ ಚುನಾವಣಾ ಕಾರ್ಯತಂತ್ರ ನಿಪುಣ (ಎಲೆಕ್ಷನ್ ಸ್ಟ್ರಾಟರ್ಜಿಸ್ಟ್) ಪ್ರಶಾಂತ್ ಕಿಶೋರ್ ಬಿಜೆಪಿಯ ಕಾಲೆಳೆದಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿರುವ ಚುನಾವಣಾ ಪ್ರಶಾಂತ್ ಕಿಶೋರ್, ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಎರಡಂಕಿ ಮುಟ್ಟಲೂ ಹರಸಾಹಸ ಪಡಲಿದೆ’ ಎಂದು ಟ್ವೀಟ್ ಮಾಡಿದ್ದಾರೆ. ‘ದಯವಿಟ್ಟು ಈ ಟ್ವೀಟ್​ ನೆನಪಿಟ್ಟುಕೊಳ್ಳಿ, ಒಂದು ವೇಳೆ ಬಿಜೆಪಿ ಎರಡಂಕಿಗಿಂತ ಹೆಚ್ಚು ಸ್ಥಾನ ಗೆದ್ದರೆ, ನಾನು ಟ್ವಿಟರ್​ ಬಳಕೆಯನ್ನು ತ್ಯಜಿಸುತ್ತೇನೆ. ಸುವೇಂದು ಅಧಿಕಾರಿಯನ್ನು ಸೇರಿಸಿಕೊಂಡಾಕ್ಷಣ ಗೆದ್ದುಬಿಡುತ್ತೇವೆಂದು ಬೀಗುವುದು ಮೂರ್ಖತನ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಪ್ರಶಾಂತ್ ಕಿಶೋರ್ ಟ್ವೀಟ್​ಗೆ ಪ್ರತಿಕ್ರಿಯಿಸಿರಿರುವ ಪಶ್ಚಿಮ ಬಂಗಾಳ ಬಿಜೆಪಿ ಉಸ್ತುವಾರಿ ಕೈಲಾಸ್ ವಿಜಯವರ್ಗೀಯ, ಚುನಾವಣಾ ಫಲಿತಾಂಶದ ನಂತರ ಬಂಗಾಳದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಆಗ, ದೇಶವು ಚುನಾವಣಾ ಕಾರ್ಯತಂತ್ರ ನಿಪುಣನೊಬ್ಬನನ್ನು ಕಳೆದುಕೊಳ್ಳಲಿದೆ’ ಎಂದು ಕಿಶೋರ್​ರನ್ನು ಕುಟುಕಿದ್ದಾರೆ.

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 220 ಸದಸ್ಯ ಬಲ ಬೇಕು. 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಹುಕಿಯಲ್ಲಿರುವ ಬಿಜೆಪಿ, ಅಮಿತ್ ಶಾ ಪ್ರಚಾರದ ಸುನಾಮಿ ಮುಂದೆ ತೃಣಮೂಲ ಕಾಂಗ್ರೆಸ್​ ಸರ್ಕಾರ ನೆಲಕಚ್ಚುವುದು ಖಚಿತ ಎಂಬ ಭರವಸೆ ವ್ಯಕ್ತಪಡಿಸಿದೆ.

ಜಯಗಳಿಸಲೇಬೇಕೆಂಬ ಆಕಾಂಕ್ಷೆಯಲ್ಲಿರುವ ಬಿಜೆಪಿಯನ್ನು ಮಣ್ಣುಮುಕ್ಕಿಸಲು ಪ್ರಶಾಂತ್ ಕಿಶೋರ್ ತಂತ್ರ ಹೆಣೆಯುತ್ತಿದ್ದಾರೆ. 2021ರಲ್ಲಿ ನಡೆಯಲಿರುವ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ಗೆ ಗೆಲುವಿನ ದಾರಿ ತೋರಿಸುವ ಜವಾಬ್ದಾರಿ ಹೊತ್ತು ಕಿಶೋರ್ ಈಚೆಗಷ್ಟೇ ಬಂಗಾಳಕ್ಕೆ ಅಡಿಯಿಟ್ಟಿದ್ದರು. ಐದಾರು ತಿಂಗಳ ಮೊದಲಿಂದಲೇ ಬಂಗಾಳ ಕಣವನ್ನು ಹುರಿಗಟ್ಟಿಸುತ್ತಿರುವ ಕಿಶೋರ್​, ಅಮಿತ್ ಶಾ ಅವರ ತುರುಸಿನ ಪ್ರಚಾರದ ಸವಾಲು ಎದುರಿಸಬೇಕಿದೆ.

ಸಿಎಂ ಪಟ್ಟ ಉಳಿಸಿಕೊಳ್ಳಲು ದೀದಿಗೆ ನೆರವಾಗುತ್ತಾ ಪ್ರಶಾಂತ್​ ಕಿಶೋರ್​ನ ರಾಜಕೀಯ ದಾಳ?

Follow us on

Related Stories

Most Read Stories

Click on your DTH Provider to Add TV9 Kannada