BSY ಜೈಲಿಗೆ ಹೋಗಿದ್ದವರು, ಈಗ RTGS ಮೂಲಕ ಹಣ ಪಡೆಯುತ್ತಿದ್ದಾರೆ: ಬೇಳೂರು

ಶಿವಮೊಗ್ಗ: ಭೂ ಕಾಯ್ದೆ ತಿದ್ದುಪಡಿ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರ ವಿರುದ್ಧ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. CM BSY, ಅವರ ಪುತ್ರ ಮತ್ತು ಸಚಿವ ಆರ್ ಅಶೋಕ ಅವರುಗಳು ಕಾರ್ಪೋರೇಟರ್ ಕಂಪನಿಗಳ ಗುಲಾಮರು ಎಂದು ಬೇಳೂರು ಗೋಪಾಲಕೃಷ್ಣ ಜರಿದಿದ್ದಾರೆ. ಸಿಎಂ ಬಿಎಸ್ವೈ ರೈತ ನಾಯಕರು ಅಲ್ಲ. ಬಿಎಸ್ವೈ ಮಂಡ್ಯದಿಂದ ಶಿವಮೊಗ್ಗಕ್ಕೆ ರೈತರು ಬೆಳೆದ ನಿಂಬೆ ಮಾರಾಟಕ್ಕೆ ಬಂದವರು. ಸಿಎಂ ಬಿಎಸ್ ವೈ ಮತ್ತು ಸಂಸದ ಬಿವೈ ರಾಘವೇಂದ್ರ ಹಾಗೂ ಕುಟುಂಬಸ್ಥರು […]

BSY ಜೈಲಿಗೆ ಹೋಗಿದ್ದವರು, ಈಗ RTGS ಮೂಲಕ ಹಣ ಪಡೆಯುತ್ತಿದ್ದಾರೆ: ಬೇಳೂರು
ಬೇಳೂರು ಗೋಪಾಲಕೃಷ್ಣ
Edited By:

Updated on: Sep 29, 2020 | 1:42 PM

ಶಿವಮೊಗ್ಗ: ಭೂ ಕಾಯ್ದೆ ತಿದ್ದುಪಡಿ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರ ವಿರುದ್ಧ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. CM BSY, ಅವರ ಪುತ್ರ ಮತ್ತು ಸಚಿವ ಆರ್ ಅಶೋಕ ಅವರುಗಳು ಕಾರ್ಪೋರೇಟರ್ ಕಂಪನಿಗಳ ಗುಲಾಮರು ಎಂದು ಬೇಳೂರು ಗೋಪಾಲಕೃಷ್ಣ ಜರಿದಿದ್ದಾರೆ.

ಸಿಎಂ ಬಿಎಸ್ವೈ ರೈತ ನಾಯಕರು ಅಲ್ಲ. ಬಿಎಸ್ವೈ ಮಂಡ್ಯದಿಂದ ಶಿವಮೊಗ್ಗಕ್ಕೆ ರೈತರು ಬೆಳೆದ ನಿಂಬೆ ಮಾರಾಟಕ್ಕೆ ಬಂದವರು. ಸಿಎಂ ಬಿಎಸ್ ವೈ ಮತ್ತು ಸಂಸದ ಬಿವೈ ರಾಘವೇಂದ್ರ ಹಾಗೂ ಕುಟುಂಬಸ್ಥರು ಭ್ರಷ್ಟಾಚಾರದಲ್ಲಿ ಮಾತ್ರ ಭಾಗಿಯಾದವರು. ಮುಂದೆ ಅಧಿಕಾರ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿರಂತರವಾಗಿ ಸಿಎಂ ಕುಟುಂಬ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.

ಹಿಂದೆ ಚೆಕ್ ಮೂಲಕ ಹಣ ಪಡೆದು ಬಿಎಸ್ ವೈ ಜೈಲಿಗೆ ಹೋಗಿದ್ದರು. ಈಗ ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆ ಆಗುತ್ತಿದೆ. ಇದೊಂದು ನಾಚಿಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.