ಜೀವ ಜಲವಿಲ್ಲದೆ ಬೇಸತ್ತ ಸೋಂಕಿತರ ಬಗ್ಗೆ ಯಾಕಿಷ್ಟು ತಾತ್ಸಾರ?
ಬೆಳಗಾವಿ: ಕೊರೊನಾ.. ಆರಂಭದಲ್ಲೇ ಹೊಸ ವರ್ಷದ ಹರುಷವನ್ನೇ ಹಾಳು ಮಾಡಿ ದಾರಿದ್ರ್ಯ ತುಂಬಿದ ಮಹಾಮಾರಿ ಕೊರೊನಾ ದೇಶಕ್ಕೆ ಕಂಟಕವಾಗಿ ಕಾಡುತ್ತಿದೆ. ಜೀವನವನ್ನೇ ನರಕ ಮಾಡಿರುವ ಕೊರೊನಾ ಇನ್ನೂ ಕಡಿಮೆಯಾಗಿಲ್ಲ. ದಿನೇ ದಿನೇ ತನ್ನ ಪ್ರತಾಪ ತೋರಿಸುತ್ತಲೇ ಸಾಗಿದೆ. ಈ ನಡುವೆ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ಸಹ ಎಡವುತ್ತಿದ್ದಾರೆ. ಜಿಲ್ಲೆಯ ಬಿಮ್ಸ್‌ನಲ್ಲಿ ನೀರಿಗಾಗಿ ಕೊರೊನಾ ಸೋಂಕಿತರು ಪರದಾಡುತ್ತಿರುವಂತ ಪರಿಸ್ಥಿತಿ ಎದುರಾಗಿದೆ. ಕುಡಿಯುವುದಕ್ಕೂ ನೀರಿಲ್ಲ, ಶೌಚಾಲಯಕ್ಕೂ ನೀರಿಲ್ಲ. ಕೊವಿಡ್ ವಾರ್ಡ್‌ನಲ್ಲಿ ನೀರಿಲ್ಲದೆ ಸೋಂಕಿತರ ಗೋಳು ನೋಡೋರೆ […]

ಬೆಳಗಾವಿ: ಕೊರೊನಾ.. ಆರಂಭದಲ್ಲೇ ಹೊಸ ವರ್ಷದ ಹರುಷವನ್ನೇ ಹಾಳು ಮಾಡಿ ದಾರಿದ್ರ್ಯ ತುಂಬಿದ ಮಹಾಮಾರಿ ಕೊರೊನಾ ದೇಶಕ್ಕೆ ಕಂಟಕವಾಗಿ ಕಾಡುತ್ತಿದೆ. ಜೀವನವನ್ನೇ ನರಕ ಮಾಡಿರುವ ಕೊರೊನಾ ಇನ್ನೂ ಕಡಿಮೆಯಾಗಿಲ್ಲ. ದಿನೇ ದಿನೇ ತನ್ನ ಪ್ರತಾಪ ತೋರಿಸುತ್ತಲೇ ಸಾಗಿದೆ. ಈ ನಡುವೆ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ಸಹ ಎಡವುತ್ತಿದ್ದಾರೆ.
ಜಿಲ್ಲೆಯ ಬಿಮ್ಸ್‌ನಲ್ಲಿ ನೀರಿಗಾಗಿ ಕೊರೊನಾ ಸೋಂಕಿತರು ಪರದಾಡುತ್ತಿರುವಂತ ಪರಿಸ್ಥಿತಿ ಎದುರಾಗಿದೆ. ಕುಡಿಯುವುದಕ್ಕೂ ನೀರಿಲ್ಲ, ಶೌಚಾಲಯಕ್ಕೂ ನೀರಿಲ್ಲ. ಕೊವಿಡ್ ವಾರ್ಡ್‌ನಲ್ಲಿ ನೀರಿಲ್ಲದೆ ಸೋಂಕಿತರ ಗೋಳು ನೋಡೋರೆ ಇಲ್ಲ. ಅಲ್ಲದೆ ಶೌಚಾಲಯಗಳು ಸಹ ಬಳಸುವುದಕ್ಕೆ ಯೋಗ್ಯವಾಗಿಲ್ಲ. ವೈದ್ಯರು, ಮೇಲಧಿಕಾರಿಗಳ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯವಹಿಸುತ್ತಿದ್ದಾರೆ. ನೀರಿಗಾಗಿ ಹೊರಗಡೆ ಹೋಗುವುದಕ್ಕೂ ಆಗದೆ ಸೋಂಕಿತರು ದಂಗಾಗಿ ಹೋಗಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
