15 ದಿನದಲ್ಲಿ ಬಾಕಿ ಪಾವತಿ, ಕಬ್ಬು ಬೆಳೆಗಾರರಿಗೆ ಕುಮಾರಸ್ವಾಮಿ ಅಭಯ

ಬೆಂಗಳೂರು:ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಇಂದು ಕಬ್ಬು ಬೆಳೆಗಾರರ ಜೊತೆಗೆ ಸಭೆ ನಡೆಸಿದ್ದು, ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದಾರೆ. ಸಕ್ಕರೆ ಕಾರ್ಖಾನೆಗಳ ಬಾಕಿ ಹಣ ಪಾವತಿಗೆ ಪಟ್ಟುಹಿಡಿದಿರುವ ಕಬ್ಬು ಬೆಳೆಗಾರರ ಜೊತೆ ಒಂದು ಗಂಟೆ ಕಾಲ ಚರ್ಚಿಸಿದ ಹೆಚ್​ಡಿಕೆ, ಕೂಡಲೇ ಕಾರ್ಖಾನೆಗಳಿಂದ ಬಾಕಿ ಹಣ ವಸೂಲಿಗೆ ಕ್ರಮ ಕೈಗೊಳ್ಳುವೆ. ಚುನಾವಣಾ ನೀತಿ ಸಂಹಿತೆ ಅಡ್ಡಿ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಈಗ ಹೋರಾಟ ಕೈಬಿಡಿ ಅಂತಾ ಮನವಿ ಮಾಡಿದರು. ರೈತರ ನೇತೃತ್ವ ವಹಿಸಿದ್ದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು. […]

15 ದಿನದಲ್ಲಿ ಬಾಕಿ ಪಾವತಿ, ಕಬ್ಬು ಬೆಳೆಗಾರರಿಗೆ ಕುಮಾರಸ್ವಾಮಿ ಅಭಯ
Edited By:

Updated on: Sep 07, 2019 | 3:16 PM

ಬೆಂಗಳೂರು:ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಇಂದು ಕಬ್ಬು ಬೆಳೆಗಾರರ ಜೊತೆಗೆ ಸಭೆ ನಡೆಸಿದ್ದು, ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದಾರೆ.

ಸಕ್ಕರೆ ಕಾರ್ಖಾನೆಗಳ ಬಾಕಿ ಹಣ ಪಾವತಿಗೆ ಪಟ್ಟುಹಿಡಿದಿರುವ ಕಬ್ಬು ಬೆಳೆಗಾರರ ಜೊತೆ ಒಂದು ಗಂಟೆ ಕಾಲ ಚರ್ಚಿಸಿದ ಹೆಚ್​ಡಿಕೆ, ಕೂಡಲೇ ಕಾರ್ಖಾನೆಗಳಿಂದ ಬಾಕಿ ಹಣ ವಸೂಲಿಗೆ ಕ್ರಮ ಕೈಗೊಳ್ಳುವೆ. ಚುನಾವಣಾ ನೀತಿ ಸಂಹಿತೆ ಅಡ್ಡಿ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಈಗ ಹೋರಾಟ ಕೈಬಿಡಿ ಅಂತಾ ಮನವಿ ಮಾಡಿದರು.

ರೈತರ ನೇತೃತ್ವ ವಹಿಸಿದ್ದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು. ಮಹತ್ವದ ಸಭೆಯಲ್ಲಿ ಸರ್ಕಾರದ ಸಿಎಸ್​ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಕಬ್ಬು ಕಾರ್ಖಾನೆಗಳು ಬೆಳೆಗಾರರಿಗೆ 3 ಸಾವಿರ ಕೋಟಿ ರೂ ಹಣ ಬಾಕಿ ಪಾವತಿಸಬೇಕಿವೆ. ಇದಕ್ಕೆ ಸ್ಪಂದಿಸುವಂತೆ ರಾಜ್ಯ ಸರ್ಕಾರಕ್ಕೆ 15 ದಿನಗಳ ಗಡುವು ಕೊಟ್ಟಿದ್ದೇವೆ ಎಂದು ಸಭೆ ಬಳಿಕ ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

Published On - 6:48 pm, Tue, 4 June 19

Follow Us