ಗುಹೆಯಲ್ಲಿ ವಾಸವಿದ್ದ ಕುಟುಂಬಕ್ಕೆ ತಕ್ಷಣ ಮನೆ ನೀಡುವಂತೆ ಸಿಎಂ ಸೂಚನೆ

|

Updated on: Apr 23, 2020 | 10:35 AM

ಚಿಕ್ಕಮಗಳೂರು: ಗುಹೆಯಲ್ಲಿ ವಾಸಿಸುತ್ತಿರುವ ಕುಟುಂಬಕ್ಕೆ ತಕ್ಷಣ ಮನೆ ನೀಡುವಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಕಳೆದ ವರ್ಷ ಪ್ರವಾಹ ಸಂದರ್ಭದಲ್ಲಿ ಮಾವಿನಕೆರೆಯ ಅನಂತ್ ಕುಟುಂಬ ಮನೆ ಕಳೆದುಕೊಂಡಿತ್ತು. 2019ರಲ್ಲಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ವಾಸವಿದ್ದ ಅನಂತ್ ಕುಟುಂಬ ಮನೆ ಕಳೆದುಕೊಂಡು, ಗುಹೆಯಲ್ಲಿ ವಾಸ ಮಾಡುತ್ತಿತ್ತು. ಗುಹೆಯಲ್ಲಿ ವಾಸಿಸುತ್ತಿರುವ ವಿಚಾರ ಮಾಧ್ಯಮದ ಮೂಲಕ ಸಿಎಂ ಗಮನಕ್ಕೆ ಬಂದಿತ್ತು. ತಕ್ಷಣವೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ ಸಿಎಂ ಯಡಿಯೂರಪ್ಪ, ಅನಂತ್ ಕುಟುಂಬಕ್ಕೆ ಮನೆ ವ್ಯವಸ್ಥೆ […]

ಗುಹೆಯಲ್ಲಿ ವಾಸವಿದ್ದ ಕುಟುಂಬಕ್ಕೆ ತಕ್ಷಣ ಮನೆ ನೀಡುವಂತೆ ಸಿಎಂ ಸೂಚನೆ
Follow us on

ಚಿಕ್ಕಮಗಳೂರು: ಗುಹೆಯಲ್ಲಿ ವಾಸಿಸುತ್ತಿರುವ ಕುಟುಂಬಕ್ಕೆ ತಕ್ಷಣ ಮನೆ ನೀಡುವಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಕಳೆದ ವರ್ಷ ಪ್ರವಾಹ ಸಂದರ್ಭದಲ್ಲಿ ಮಾವಿನಕೆರೆಯ ಅನಂತ್ ಕುಟುಂಬ ಮನೆ ಕಳೆದುಕೊಂಡಿತ್ತು.

2019ರಲ್ಲಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ವಾಸವಿದ್ದ ಅನಂತ್ ಕುಟುಂಬ ಮನೆ ಕಳೆದುಕೊಂಡು, ಗುಹೆಯಲ್ಲಿ ವಾಸ ಮಾಡುತ್ತಿತ್ತು. ಗುಹೆಯಲ್ಲಿ ವಾಸಿಸುತ್ತಿರುವ ವಿಚಾರ ಮಾಧ್ಯಮದ ಮೂಲಕ ಸಿಎಂ ಗಮನಕ್ಕೆ ಬಂದಿತ್ತು. ತಕ್ಷಣವೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ ಸಿಎಂ ಯಡಿಯೂರಪ್ಪ, ಅನಂತ್ ಕುಟುಂಬಕ್ಕೆ ಮನೆ ವ್ಯವಸ್ಥೆ ಮತ್ತು ಒಂದು ಲಕ್ಷ ಹಣ ನೀಡುವಂತೆ ಆದೇಶಿಸಿದ್ದಾರೆ.