ಕೊರೊನಾ ಎಫೆಕ್ಟ್: ತಿಪಟೂರು ಮಾರುಕಟ್ಟೆಯಲ್ಲಿ ಕೊಳೀತಾ ಬಿದ್ದಿದೆ ಕೊಬ್ಬರಿ

ತುಮಕೂರು: ಈಗಾಗಲೇ ಅನೇಕ ದೇಶಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿ ಹರಡುತ್ತಿರುವ ಕೊರೊನಾ ವೈರಸ್ ಎಫೆಕ್ಟ್ ಕೊಬ್ಬರಿ ರಫ್ತಿಗೂ ತಟ್ಟಿದೆ. ಕೊಬರಿ ಮಾರುಕಟ್ಟೆ ಮೇಲೆ ಕೊರೊನಾ ವೈರಸ್​ನ ಭಾರಿ ಪರಿಣಾಮ ಬೀರಿದ್ದು, ಕೊಬ್ಬರಿ ಬೆಲೆ ಕುಸಿದಿದೆ. ವಿಶ್ವವಿಖ್ಯಾತ ಕೊಬ್ಬರಿ ಮಾರುಕಟ್ಟೆ ಎಂದು ಹೆಸರು ಪಡೆದಿರುವ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ₹16 ಸಾವಿರದಿಂದ ₹10 ಸಾವಿರಕ್ಕೆ ಕೊಬ್ಬರಿ ಬೆಲೆ ಇಳಿದಿದೆ. ಒಂದು ವರ್ಷಕ್ಕೆ 60 ಲಕ್ಷ ಟನ್ ಕೊಬ್ಬರಿ ರಫ್ತಾಗುತ್ತಿತ್ತು. ಅದರಲ್ಲಿ ಚೀನಾಗೆ […]

ಕೊರೊನಾ ಎಫೆಕ್ಟ್: ತಿಪಟೂರು ಮಾರುಕಟ್ಟೆಯಲ್ಲಿ ಕೊಳೀತಾ ಬಿದ್ದಿದೆ ಕೊಬ್ಬರಿ
ಸಾಧು ಶ್ರೀನಾಥ್​

Updated on: Mar 04, 2020 | 1:44 PM

ತುಮಕೂರು: ಈಗಾಗಲೇ ಅನೇಕ ದೇಶಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿ ಹರಡುತ್ತಿರುವ ಕೊರೊನಾ ವೈರಸ್ ಎಫೆಕ್ಟ್ ಕೊಬ್ಬರಿ ರಫ್ತಿಗೂ ತಟ್ಟಿದೆ. ಕೊಬರಿ ಮಾರುಕಟ್ಟೆ ಮೇಲೆ ಕೊರೊನಾ ವೈರಸ್​ನ ಭಾರಿ ಪರಿಣಾಮ ಬೀರಿದ್ದು, ಕೊಬ್ಬರಿ ಬೆಲೆ ಕುಸಿದಿದೆ.

ವಿಶ್ವವಿಖ್ಯಾತ ಕೊಬ್ಬರಿ ಮಾರುಕಟ್ಟೆ ಎಂದು ಹೆಸರು ಪಡೆದಿರುವ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ₹16 ಸಾವಿರದಿಂದ ₹10 ಸಾವಿರಕ್ಕೆ ಕೊಬ್ಬರಿ ಬೆಲೆ ಇಳಿದಿದೆ. ಒಂದು ವರ್ಷಕ್ಕೆ 60 ಲಕ್ಷ ಟನ್ ಕೊಬ್ಬರಿ ರಫ್ತಾಗುತ್ತಿತ್ತು. ಅದರಲ್ಲಿ ಚೀನಾಗೆ ₹12 ಲಕ್ಷ ಟನ್ ಕೊಬ್ಬರಿ ರಫ್ತಾಗುತ್ತಿತ್ತು. ಆದರೆ ಕೊರೊನಾ ವೈರಸ್​ನಿಂದಾಗಿ ಕಳೆದ ಎರಡು ತಿಂಗಳಿಂದ ಕೊಬ್ಬರಿ ರಫ್ತು ಕುಸಿತ ಕಂಡಿದೆ. ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.


Published On - 1:01 pm, Wed, 4 March 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us