ನನ್ನ ಗಂಡ ಯಾವುದೇ ತಪ್ಪು ಕೆಲಸ ಮಾಡಿಲ್ಲ: ಬಂಧಿತ ‘ಮಂತ್ರವಾದಿ’ ಶಿವಾನಂದ ಪತ್ನಿ ಭಾರತಿ

ಬಾಗಲಕೋಟೆ: ಚಿತ್ರ ಸಾಹಿತಿ ಕೆ ಕಲ್ಯಾಣ ದಾಂಪತ್ಯದಲ್ಲಿ ಬಿರುಕಿನ ಪ್ರಕರಣದ ಸಂಬಂಧ ಕೆ.ಕಲ್ಯಾಣ್ ದೂರಿನ ಮೇರೆಗೆ ನಿನ್ನೆ ರಾತ್ರಿ ಬಂಧನಕ್ಕೊಳಗಾಗಿರುವ ಮಂತ್ರವಾದಿ ಶಿವಾನಂದ ವಾಲಿ ಬಗ್ಗೆ ಪತ್ನಿ ಭಾರತಿ ಪ್ರತಿಕ್ರಿಯಿಸಿದ್ದಾರೆ. ಆರೋಪಿ ಶಿವಾನಂದ ವಾಲಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನು, ಶಿವಾನಂದ ವಾಲಿ ಪತ್ನಿ ಭಾರತಿ ಅವರು ನನ್ನ ಗಂಡನದು ಏನೂ ತಪ್ಪಿಲ್ಲ, ನನ್ನ ಗಂಡನ ಮೇಲೆ ಸುಳ್ಳು ಆರೋಪ ಮಾಡಲಾಗ್ತಿದೆ.. ನಮ್ಮ ಯಜಮಾನ್ರದು ಏನೂ ತಪ್ಪಿಲ್ಲ.. 10-15 ವರ್ಷಗಳಿಂದ ವಾಹನ ಉದ್ಯೋಗ ಮಾಡ್ತಾ ಇದಾರೆ.. ಒಬ್ಬ‌ […]

ನನ್ನ ಗಂಡ ಯಾವುದೇ ತಪ್ಪು ಕೆಲಸ ಮಾಡಿಲ್ಲ: ಬಂಧಿತ ‘ಮಂತ್ರವಾದಿ’ ಶಿವಾನಂದ ಪತ್ನಿ ಭಾರತಿ
ಸಾಧು ಶ್ರೀನಾಥ್​

Updated on: Oct 05, 2020 | 2:56 PM

ಬಾಗಲಕೋಟೆ: ಚಿತ್ರ ಸಾಹಿತಿ ಕೆ ಕಲ್ಯಾಣ ದಾಂಪತ್ಯದಲ್ಲಿ ಬಿರುಕಿನ ಪ್ರಕರಣದ ಸಂಬಂಧ ಕೆ.ಕಲ್ಯಾಣ್ ದೂರಿನ ಮೇರೆಗೆ ನಿನ್ನೆ ರಾತ್ರಿ ಬಂಧನಕ್ಕೊಳಗಾಗಿರುವ ಮಂತ್ರವಾದಿ ಶಿವಾನಂದ ವಾಲಿ ಬಗ್ಗೆ ಪತ್ನಿ ಭಾರತಿ ಪ್ರತಿಕ್ರಿಯಿಸಿದ್ದಾರೆ. ಆರೋಪಿ ಶಿವಾನಂದ ವಾಲಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇನ್ನು, ಶಿವಾನಂದ ವಾಲಿ ಪತ್ನಿ ಭಾರತಿ ಅವರು ನನ್ನ ಗಂಡನದು ಏನೂ ತಪ್ಪಿಲ್ಲ, ನನ್ನ ಗಂಡನ ಮೇಲೆ ಸುಳ್ಳು ಆರೋಪ ಮಾಡಲಾಗ್ತಿದೆ.. ನಮ್ಮ ಯಜಮಾನ್ರದು ಏನೂ ತಪ್ಪಿಲ್ಲ.. 10-15 ವರ್ಷಗಳಿಂದ ವಾಹನ ಉದ್ಯೋಗ ಮಾಡ್ತಾ ಇದಾರೆ.. ಒಬ್ಬ‌ ಮಗ ಇದಾನೆ, ಆತನು ಶಾಲೆಗೆ ಹೋಗ್ತಿದಾನೆ.. ಆ ರೀತಿಯ ಯಾವುದೇ ಕೆಲಸವನ್ನು ನನ್ನ ಪತಿ ಮಾಡೋದಿಲ್ಲ.. ಎಂದು ಜಿಲ್ಲೆಯ ಬೂದಿಹಾಳ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Published On - 2:53 pm, Mon, 5 October 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us