‘ಸಾವಿರಾರು ಎಕರೆ ಈರುಳ್ಳಿ ಬೆಳೆ ನಾಶ: ಕೂಡಲೇ ಪರಿಹಾರ ಕೊಡಿ.. ಇಲ್ಲದಿದ್ರೆ ಹೋರಾಟ’

ದಾವಣಗೆರೆ: ಭಾರಿ ಮಳೆ, ಕೊಳೆ ರೋಗದಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್​ನಿಂದ ಪ್ರತಿಭಟನೆ ಮಾಡಲಾಗುತ್ತಿದೆ. ನೀಲಗುಂದ ಗುರುಪೀಠದ ಚೆನ್ನಬಸವಣ್ಣ ಹಾಗೂ ಕಾಂಗ್ರೆಸ್ ಮುಖಂಡ ಎಂ.ಪಿ.ವೀಣಾ ಮಹಾಂತೇಶ ನೇತ್ರತ್ವದಲ್ಲಿ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದೆ. ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ವಿಳಂಬ ಮಾಡಿದರೆ ನಿರಂತರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಾವಿರಾರು ಎಕರೆ ಈರುಳ್ಳಿ ಬೆಳೆ ನಾಶ: ಕೂಡಲೇ ಪರಿಹಾರ ಕೊಡಿ.. ಇಲ್ಲದಿದ್ರೆ ಹೋರಾಟ’
Edited By:

Updated on: Sep 02, 2020 | 2:25 PM

ದಾವಣಗೆರೆ: ಭಾರಿ ಮಳೆ, ಕೊಳೆ ರೋಗದಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್​ನಿಂದ ಪ್ರತಿಭಟನೆ ಮಾಡಲಾಗುತ್ತಿದೆ.

ನೀಲಗುಂದ ಗುರುಪೀಠದ ಚೆನ್ನಬಸವಣ್ಣ ಹಾಗೂ ಕಾಂಗ್ರೆಸ್ ಮುಖಂಡ ಎಂ.ಪಿ.ವೀಣಾ ಮಹಾಂತೇಶ ನೇತ್ರತ್ವದಲ್ಲಿ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದೆ. ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ವಿಳಂಬ ಮಾಡಿದರೆ ನಿರಂತರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Published On - 2:23 pm, Wed, 2 September 20