ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಸೋಮವಾರವೂ ಸದನದಲ್ಲಿ ಹೋರಾಟ ಮುಂದುವರೆಸುವುದು ನಿಶ್ಚಿತ ಅನಿಸುತ್ತಿದೆ

ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಸೋಮವಾರವೂ ಸದನದಲ್ಲಿ ಹೋರಾಟ ಮುಂದುವರೆಸುವುದು ನಿಶ್ಚಿತ ಅನಿಸುತ್ತಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 18, 2022 | 9:53 PM

ಕಾಂಗ್ರೆಸ್ ನಾಯಕರು ಈಶ್ವರಪ್ಪ ವಿರುದ್ಧ ಸೋಮವಾರವೂ ಸದನದಲ್ಲಿ ಹೋರಾಟ ಮುಂದುವರಿಸಲಿದ್ದಾರೆ. ಸರ್ಕಾರ ಕರೆದ ಎರಡೂ ಸದನಗಳ ವಿಶೇಷ ಅಧಿವೇಶನ 'ಈಶ್ವರಪ್ಪ ವಿಶೇಷ' ಅಧಿವೇಶನವಾಗಿ ಮಾರ್ಪಟ್ಟಿದೆ.

ವಿಧಾನಸಭಾ ಕಾರ್ಯಕಲಾಪ ಶುಕ್ರವಾರ ಸ್ವಲ್ಪ ಸಮಯದವರೆಗೆ ನಡೆದರೂ ಕಾಂಗ್ರೆಸ್ ನಾಯಕರು ದಿನವಿಡೀ ಬ್ಯೂಸಿಯಾಗಿದ್ದರು. ಈಗ ಅವರ ಸಿಂಗಲ್-ಪಾಯಿಂಟ್ ಅಜೆಂಡಾ (single-point agenda) ಕೆ ಎಸ್ ಈಶ್ವರಪ್ಪ (KS Eshwarappa) ಅವರನ್ನು ಮಂತ್ರಿ ಸ್ಥಾನದಲ್ಲಿ ಮುಂದುವರಿಯದಂತೆ ಮಾಡುವುದು ಅಂತ ಕಾಣುತ್ತೆ. ಎರಡು ದಿನಗಳ ಹಿಂದೆಯೇ ಸಿದ್ದರಾಮಯ್ಯ ಅವರು, ಈಶ್ವರಪ್ಪ ವಿರುದ್ಧ ಕ್ರಮ ಜರುಗಿಸದ ಹೊರತು ಕಾಂಗ್ರೆಸ್ ಪ್ರತಿಭಟನೆ ನಿಲ್ಲಿಸುವುದಿಲ್ಲ. ಸದನದ ಒಳಗೆ ಮತ್ತು ಹೊರಗೂ ನಾವು ಹೋರಾಟ ನಡಸುತ್ತೇವೆ ಎಂದು ಹೇಳಿದ್ದರು. ಸದನದ ಹೊರಗೆ ನಡೆಸುವ ಕೆಲಸವನ್ನು ಕಾಂಗ್ರೆಸ್ ಯುವ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ನಲಪಾಡ್ಗೆ (Mohammad Nalpad) ವಹಿಸಿದಂತೆ ಕಾಣುತ್ತಿದೆ. ಅವರು ತಮ್ಮ ಯುವಪಡೆಯ ಜೊತೆ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಳ್ಳುವುದು ಬೆಂಗಳೂರು ನಗರದಲ್ಲಿ ನಡೆಯುತ್ತಿದೆ.

ವಿಧಾನಮಂಡಲದ ಕಾರ್ಯಕಲಾಪಗಳನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೋಮವಾರದವರೆಗೆ ಮುಂದೂಡಿದ ಬಳಿಕ ಸಿದ್ದರಾಮಯ್ಯ ಮತ್ತು ಕೆ ಪಿ ಸಿ ಸಿ ಅಧ್ಯಕ್ಷ ಜಂಟಿ ಸುದ್ದಿಗೋಷ್ಟಿಯೊಂದನ್ನು ನಡೆಸಿದರು. ಇದರಲ್ಲೂ ಇಬ್ಬರು ನಾಯಕರು ಈಶ್ವರಪ್ಪನವರ ಕೇಸರಿ ಧ್ವಜ ಹೇಳಿಕೆ ಮತ್ತು ರಾಜ್ಯಾದಾದ್ಯಂತ ನಡೆಯುತ್ತಿರುವ ಹಿಜಾಬ್-ಕೇಸರಿ ವಿವಾದದ ಬಗ್ಗೆ ಮಾತಾಡಿದರು.

ಕಾಂಗ್ರೆಸ್ ನಾಯಕರು ಈಶ್ವರಪ್ಪ ವಿರುದ್ಧ ಸೋಮವಾರವೂ ಸದನದಲ್ಲಿ ಹೋರಾಟ ಮುಂದುವರಿಸಲಿದ್ದಾರೆ. ಸರ್ಕಾರ ಕರೆದ ಎರಡೂ ಸದನಗಳ ವಿಶೇಷ ಅಧಿವೇಶನ ‘ಈಶ್ವರಪ್ಪ ವಿಶೇಷ’ ಅಧಿವೇಶನವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ: Karnataka Hijab Row: ದುಪಟ್ಟಾವನ್ನೇ ಧರಿಸಲು ಅನುಮತಿಗೆ ಮನವಿ; ಹಿಜಾಬ್ ವಿವಾದ ವಿಚಾರಣೆ ನಾಳೆಗೆ ಮುಂದೂಡಿಕೆ