ಚಾಮರಾಜನಗರ: RSSನವರು ಜನರ ಬ್ರೇನ್ ವಾಷ್ ಮಾಡುತ್ತಿದ್ದಾರೆ. ಪ್ರತಿ ಮನೆಗೆ ಭೇಟಿ ನೀಡಿ ಜನರ ಬ್ರೇನ್ ವಾಷ್ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಯತೀಂದ್ರ ಹೇಳಿದರು. ಕಾಂಗ್ರೆಸ್ ಪಕ್ಷವನ್ನ ಹಿಂದುತ್ವದ ವಿರೋಧಿ ಎಂದು ಹೇಳ್ತಾರೆ. ಹಿಂದುತ್ವ, ಹಿಂದೂ ಎರಡೂ ಒಂದೇ ಅಲ್ಲಾ ಎಂದು ಯತೀಂದ್ರ ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದ್ಮೇಲೆ ಕೋಮುವಾದ ಭಾವನೆ ಹೆಚ್ಚಾಗಿದೆ. ನಮ್ಮ ದೇಶ ಜಾತ್ಯತೀತ ದೇಶವಾಗಿದೆ ಎಂದು ಶಾಸಕ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿದರು.
‘ಹಿಂದುತ್ವವನ್ನ ಟೀಕೆ ಮಾಡಿದವರು ಹಿಂದೂ ವಿರೋಧಿಗಳಲ್ಲ’
ಹಿಂದುತ್ವವನ್ನ ಟೀಕೆ ಮಾಡಿದವರು ಹಿಂದೂ ವಿರೋಧಿಗಳಲ್ಲ. ಹಿಂದುತ್ವ ಅನ್ನುವುದು ರಾಜಕೀಯ ಸಿದ್ಧಾಂತ. ಅಡಿಯಾಳಾಗಿ ಬದುಕಬೇಕೆಂಬುದೇ ಹಿಂದುತ್ವ. ಎಲ್ಲರನ್ನೂ ಜೊತೆಯಾಗಿ ಕೊಂಡೊಯ್ಯುವುದೇ ಹಿಂದೂ ಧರ್ಮ. ಹಿಂದೂ ಬೇರೆ ಹಿಂದುತ್ವ ಬೇರೆ. ಇದನ್ನ ಅರ್ಥೈಸಿಕೊಳ್ಳಬೇಕು. ಇದನ್ನು ನಮ್ಮ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
‘ಕಾಂಗ್ರೆಸ್ ಒಡೆದ ಮನೆ ಎಂದು ಜನಾಭಿಪ್ರಾಯ ಬಂದರೆ ಅಧಿಕಾರ ಹಿಡಿಯುವುದು ಕಷ್ಟ’
ಮೈಸೂರು ಮೇಯರ್ ಚುನಾವಣೆ ಬಗ್ಗೆ ಯತೀಂದ್ರ ಬೇಸರ ವ್ಯಕ್ತಪಡಿಸಿದರು. ಒಬ್ಬ ನಾಯಕನಿಗೆ ಹಿನ್ನಡೆ ಮಾಡುವುದಕ್ಕೆ ಮಾಡಿದ ಷಡ್ಯಂತ್ರವಿದು. ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕು ಎಂದ ಶಾಸಕ ಯತೀಂದ್ರ ಬೇರೆಯವರು ಒಗ್ಗಟ್ಟನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆ ಎಂದು ಜನಾಭಿಪ್ರಾಯ ಬಂದರೆ ಅಧಿಕಾರ ಹಿಡಿಯುವುದು ಕಷ್ಟ ಎಂದು ಹೇಳಿದರು. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ ಪಕ್ಷ ಅಧಿಕಾರಕ್ಕೆ ತರಬೇಕು ಎಂದು ಕಾಂಗ್ರೆಸ್ ಶಾಸಕ ಯತೀಂದ್ರ ಹೇಳಿದರು.
‘ಕಾಂಗ್ರೆಸ್ ನಾಶ ಮಾಡಲು ಸಿದ್ದರಾಮಯ್ಯ ಒಬ್ಬರೇ ಸಾಕಿತ್ತು’
ಇತ್ತ, ಮೈಸೂರು ಮೇಯರ್ ಆಯ್ಕೆಯಲ್ಲಿ ಕಾಂಗ್ರೆಸ್ ಬೆತ್ತಲಾಗಿದೆ ಎಂದು ಹಾಸನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ K.S.ಈಶ್ವರಪ್ಪ ಹೇಳಿದ್ದಾರೆ. ಕಾಂಗ್ರೆಸ್ ನಾಶ ಮಾಡಲು ಸಿದ್ದರಾಮಯ್ಯ ಒಬ್ಬರೇ ಸಾಕಿತ್ತು. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಂದಿದ್ದಾರೆ ಎಂದು ಈಶ್ವರಪ್ಪ ಟಾಂಗ್ ಕೊಟ್ರು.
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ನಾಯಕತ್ವ ಇಲ್ಲ. ಜನರೇ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡುತ್ತಿದ್ದಾರೆ.ನಾಯಕರೇ ಕಚ್ಚಾಡಿ ಕಾಂಗ್ರೆಸ್ ಪಕ್ಷ ನಾಶ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು.
‘ಕುಮಾರಸ್ವಾಮಿ ಬಿಜೆಪಿಗಿಂತ JDS ಪಕ್ಷ ಉಳಿಸಿಕೊಳ್ಳಲಿ’
ಕುಮಾರಸ್ವಾಮಿ ಬಿಜೆಪಿಗಿಂತ JDS ಪಕ್ಷ ಉಳಿಸಿಕೊಳ್ಳಲಿ. ಹೆಚ್.ಡಿ.ಕುಮಾರಸ್ವಾಮಿ ಸರಿಯಾಗಿ ಆಡಳಿತ ನಡೆಸಿದ್ರೆ. ಶಾಸಕರು ಪಕ್ಷ ಬಿಟ್ಟು ಬರುತ್ತಿರಲಿಲ್ಲ ಎಂದ ಈಶ್ವರಪ್ಪ ಶಾಸಕರು ಬಿಜೆಪಿ ಸೇರಿದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ.
2023ರ ಚುನಾವಣೆಯಲ್ಲಿ 2 ಪಕ್ಷ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಅಧಿಕಾರಕ್ಕೆ ಬರಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: ನಾನು ಕನಕಪುರ ಬಂಡೆ ಅಲ್ಲ.. ಅದು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ -ಡಿಕೆಶಿ ಜಬರ್ದಸ್ತ್ ಡೈಲಾಗ್!