Weekly Horoscope; ವಾರ ಭವಿಷ್ಯ | ಈ ವಾರ ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ?; ಒಂದು ವಾರದ ಭವಿಷ್ಯ

Weekly Horoscope; ವಾರ ಭವಿಷ್ಯ | ಈ ವಾರ ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ?; ಒಂದು ವಾರದ ಭವಿಷ್ಯ
ವಾರ ಭವಿಷ್ಯ

ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Rajesh Duggumane

| Edited By: Ayesha Banu

Feb 28, 2021 | 8:32 AM

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

ತಾ.01-03-2021 ರಿಂದ ತಾ.07-03-2021 ರವರೆಗೆ, ದ್ವಾದಶ ರಾಶಿಗಳ ಫಲ

ಮೇಷ: ಕೈಗೆ ಬಂದ ಅವಕಾಶಗಳನ್ನು ತಾನಾಗಿಯೇ ಕೈ ಚೆಲ್ಲಬೇಡಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದಿಂದ ಲಾಭ ಪಡೆಯುವ ಅವಕಾಶವಿದೆ. ವೃತ್ತಿರಂಗದಲ್ಲಿ ಬರುವ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಶುಭಸಂಖ್ಯೆ: 4

ವೃಷಭ: ಕೌಟುಂಬಿಕ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಸಂಗಾತಿಯ ಸಲಹೆ ಪಡೆಯಿರಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಸರಕಾರಿ ಉದ್ಯೋಗಿಗಳಿಗೆ ಮೇಲಿನ ಹಂತಕ್ಕೆ ಏರುವ ಅವಕಾಶ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಶುಭಸಂಖ್ಯೆ: 6

ಮಿಥುನ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಾರ್ಯಸಾಧನೆಯಾಗಬೇಕಾದರೆ ಓಡಾಟ ನಡೆಸಬೇಕಾಗುತ್ತದೆ. ಸರಕಾರಿ ದಾಖಲೆ ಪತ್ರಗಳನ್ನು ಎಚ್ಚರಿಕೆಯಿಂದ ಸಂರಕ್ಷಿಸಿ. ಭೂಮಿ, ಮನೆ ಖರೀದಿಗೆ ಸಕಾಲ. ಆದಾಯಕ್ಕೆ ಕೊರತೆಯಿರದು. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ಶುಭಸಂಖ್ಯೆ:3

ಕರ್ಕಟಕ: ನಿರುದ್ಯೋಗಿಗಳು ಬಹುದಿನಗಳಿಂದ ಆಸೆಪಡುತ್ತಿದ್ದ ಉದ್ಯೋಗಾವಕಾಶ ಸಿಗಲಿದೆ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಶುಭಸಂಖ್ಯೆ: 1

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಏಳಿಗೆಯನ್ನು ಯಾರೂ ತಡೆಯಲಾಗದು. ಹಿತಶತ್ರುಗಳ ವಂಚನೆ ಬೆಳಕಿಗೆ ಬರಲಿದೆ. ಸಾಮಾಜಿಕವಾಗಿ ಉನ್ನತ ಸ್ಥಾನ ಮಾನ ಗಳಿಸುವ ಯೋಗ. ವಿದ್ಯಾರ್ಥಿಗಳು ನಿರೀಕ್ಷಿತ ಫಲ ಪಡೆಯಲಿದ್ದಾರೆ. ಮನಸ್ಸಿಗೆ ಸಂತಸವಾಗಲಿದೆ. ಶುಭಸಂಖ್ಯೆ: 9

ಕನ್ಯಾ: ಎಷ್ಟೋ ದಿನದಿಂದ ಅಂದುಕೊಂಡಿದ್ದ ಕೆಲಸಗಳನ್ನು ಇಂದು ನೆರವೇರಿಸಲು ಮುಂದಾಗುವಿರಿ. ಅನಿರೀಕ್ಷಿತವಾಗಿ ಹಳೆಯ ಸ್ನೇಹಿತರ ಭೇಟಿಯಾಗಲಿದ್ದು, ಮನಸ್ಸಿಗೆ ಸಂತಸವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 5

ತುಲಾ: ಅರ್ಧಕ್ಕೇ ನಿಂತ ಕೆಲಸಗಳಿಗೆ ಮರುಚಾಲನೆ ನೀಡಲಿದ್ದೀರಿ. ಆರ್ಥಿಕವಾಗಿ ಹಂತ ಹಂತವಾಗಿ ಸುಧಾರಣೆ ಕಂಡುಬರಲಿದೆ. ಬಂಧು ಮಿತ್ರರ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ. ಅನಗತ್ಯ ಚಿಂತೆಗಳಿಗೆ ಕಡಿವಾಣವಿರಲಿ. ಶುಭಸಂಖ್ಯೆ: 8

ವೃಶ್ಚಿಕ: ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಭಂಗ ತರುವ ಘಟನೆಗಳು ಎದುರಾದೀತು. ಮಾನಸಿಕವಾಗಿ ಋಣಾತ್ಮಕ ಚಿಂತೆಗಳನ್ನು ದೂರ ಮಾಡಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಕಾರ್ಯನಿಮಿತ್ತ ಕೆಲವು ಪ್ರಮುಖರ ಭೇಟಿ ಸಂಭವ. ಶುಭಸಂಖ್ಯೆ: 4

ಧನು: ಮಕ್ಕಳ ವಿಚಾರದಲ್ಲಿ ಅನಗತ್ಯ ಚಿಂತೆ ಮಾಡಲು ಹೋಗಬೇಡಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚು ಪರಿಶ್ರಮ ಪಡಬೇಕಾಗಬಹುದು. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಶುಭಸಂಖ್ಯೆ: 3

ಮಕರ: ವೃತ್ತಿರಂಗದಲ್ಲಿ ನಿಮ್ಮ ಯಶಸ್ಸಿಗೆ ತೊಡಕುಂಟುಮಾಡುವವರ ಬಗ್ಗೆ ಎಚ್ಚರವಿರಲಿ. ಆತ್ಮವಿಶ್ವಾಸವೇ ನಿಮಗೆ ಶ್ರೀರಕ್ಷೆಯಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭೇಟೆಗೆ ಅಲೆದಾಟ ತಪ್ಪದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಶುಭಸಂಖ್ಯೆ: 6

ಕುಂಭ: ನಿಮ್ಮ ಕೆಲಸ ಕಾರ್ಯದ ಬಗ್ಗೆ ಮಾತ್ರ ಗಮನಹರಿಸಿದರೆ ಸಾಕು. ಬೇಡದ ವಿಚಾರಗಳಲ್ಲಿ ಮೂಗು ತೂರಿಸಲು ಹೋದರೆ ಅವಮಾನ ಎದುರಿಸಬೇಕಾದೀತು. ಯಂತ್ರೋಪಕರಣ ವೃತ್ತಿಯವರಿಗೆ ಮುನ್ನಡೆಯ ಯೋಗವಿದೆ. ದೇವತಾ ಪ್ರಾರ್ಥನೆ ಮಾಡಿ. ಶುಭಸಂಖ್ಯೆ: 2

ಮೀನ: ಒಳ್ಳೆಯ ಕೆಲಸ ಆರಂಭಿಸಲು ಹಿಂದೆ ಮುಂದೆ ನೋಡುತ್ತಾ ಕೂರಬೇಡಿ. ನಿಮ್ಮ ನೇರ ನುಡಿ ಕೆಲವರಿಗೆ ಇಷ್ಟವಾಗದೇ ಹೋಗಬಹುದು. ಆದರೆ ಚಿಂತೆ ಮಾಡಬೇಡಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಶುಭಸಂಖ್ಯೆ: 7

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Follow us on

Related Stories

Most Read Stories

Click on your DTH Provider to Add TV9 Kannada