‘ಸಿದ್ದರಾಮಯ್ಯರನ್ನು ಮಾಜಿ CM ಅಂತಾ ಹೇಳೋಕೆ ಮನಸ್ಸಾಗ್ತಿಲ್ಲ.. ಅದಕ್ಕೆ ಭಾವಿ CM ಅಂತಾ ಕರೆಯುತ್ತೇನೆ’

Zameer Ahmed Khan: ಸಿದ್ದರಾಮಯ್ಯರನ್ನು ಮಾಜಿ ಸಿಎಂ ಎಂದು ಹೇಳಲು ಮನಸ್ಸಾಗ್ತಿಲ್ಲ. ಹೀಗಾಗಿ, ಅವರನ್ನ ಭಾವಿ ಸಿಎಂ ಎಂದೇ ಕರೆಯುತ್ತೇನೆಂದು ತಮ್ಮ ಭಾಷಣ ಆರಂಭಿಸುವ ಮುನ್ನ ಜಿಲ್ಲೆಯ ಹುಣಸೂರಿನಲ್ಲಿ ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್ ಹೇಳಿದರು.

‘ಸಿದ್ದರಾಮಯ್ಯರನ್ನು ಮಾಜಿ CM ಅಂತಾ ಹೇಳೋಕೆ ಮನಸ್ಸಾಗ್ತಿಲ್ಲ.. ಅದಕ್ಕೆ ಭಾವಿ CM ಅಂತಾ ಕರೆಯುತ್ತೇನೆ’
ಜಮೀರ್ ಅಹ್ಮದ್
Follow us
KUSHAL V
|

Updated on: Feb 19, 2021 | 10:16 PM

ಮೈಸೂರು: ಸಿದ್ದರಾಮಯ್ಯರನ್ನು ಮಾಜಿ ಸಿಎಂ ಎಂದು ಹೇಳಲು ಮನಸ್ಸಾಗ್ತಿಲ್ಲ. ಹೀಗಾಗಿ, ಅವರನ್ನ ಭಾವಿ ಸಿಎಂ ಎಂದೇ ಕರೆಯುತ್ತೇನೆಂದು ತಮ್ಮ ಭಾಷಣ ಆರಂಭಿಸುವ ಮುನ್ನ ಜಿಲ್ಲೆಯ ಹುಣಸೂರಿನಲ್ಲಿ ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್ ಹೇಳಿದರು. ಶಾಸಕ ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎನ್ನುತ್ತಿದ್ದಂತೆ ಕಾರ್ಯಕರ್ತರಿಂದ ಸಿಳ್ಳೆ ಚಪ್ಪಾಳೆ ಕೇಳಿಬಂತು. ಸಮಾವೇಶದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು ಸಿಳ್ಳೆ ಚಪ್ಪಾಳೆ ಹೊಡೆದು ಸಂತಸಪಟ್ಟರು.

2018ರಲ್ಲಿ ತಪ್ಪು ಮಾಡಿದ್ದೇವೆಂದು ಜನರು ಮಾತನಾಡುತ್ತಿದ್ದಾರೆ. ರಾಜ್ಯದ ಜನರಿಗೆ ಒಳ್ಳೇದು ಆಗಬೇಕಾದ್ರೆ ಮತ್ತೆ ಇವರು ಸಿಎಂ ಆಗಬೇಕು. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಜಮೀರ್ ಅಹ್ಮದ್​ ಹೇಳಿದರು. ಜಿಲ್ಲೆಯ ಹುಣಸೂರಿನಲ್ಲಿ ‘ಕೈ’ ಜನಾಧಿಕಾರ ಸಮಾವೇಶದಲ್ಲಿ ಶಾಸಕ ಜಮೀರ್ ಅಹ್ಮದ್ ಭಾಷಣ ಮಾಡಿದರು. ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸೋ ನಿಟ್ಟಿನಲ್ಲಿ ಈ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು.

ಅಂದ ಹಾಗೆ, ಇದಕ್ಕೂ ಮುನ್ನ ಜಿಲ್ಲೆಯ ಹುಣಸೂರಲ್ಲಿ ಶಾಸಕರ ಕಚೇರಿ ಉದ್ಘಾಟನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದ್ದರು. ಹುಣಸೂರು ಶಾಸಕ ಹೆಚ್​.ಪಿ.ಮಂಜುನಾಥ್​ ಅವರ ಕಚೇರಿ ಉದ್ಘಾಟನೆಗೆ ಆಗಮಿಸಿದ್ದರು.

ಈ ವೇಳೆ, ಸಿದ್ದರಾಮಯ್ಯರ ಕಾರಿನ ಮೇಲೆ ಹೂ‌ ಮಳೆ ಸುರಿಸಿ ಕಾರ್ಯಕರ್ತರು ಸ್ವಾಗತ ಕೋರಿದರು. ಸಿದ್ದರಾಮಯ್ಯಗೆ ಸೇಬಿನ‌ ಹಾರ ಹಾಕಿ ಬೆಂಬಲಿಗರು ಸಂತಸ ಪಟ್ಟರು. ಸ್ವಾಗತದ ನಂತರ, ಸೇಬಿಗಾಗಿ‌ ಕಾರ್ಯಕರ್ತರು ಕಿತ್ತಾಡಿದ ದೃಶ್ಯ ಸಹ ಕಂಡುಬಂತು.

ಇದನ್ನೂ ಓದಿ: BY Vijayendra ಬಸನಗೌಡ ಪಾಟೀಲ್​ ಯತ್ನಾಳ್​ಗೆ ನನ್ನ ಮೇಲೆ ಬಹಳ ಪ್ರೀತಿ -B.Y.ವಿಜಯೇಂದ್ರ ಟಾಂಗ್​