Horoscope; ದಿನ ಭವಿಷ್ಯ | ಮಕರ ರಾಶಿಯವರಿಗೆ ನಿಷ್ಠುರ ಮಾತುಗಳನ್ನು ಕೇಳುವ ಸಂಭವ

Horoscope; ದಿನ ಭವಿಷ್ಯ | ಮಕರ ರಾಶಿಯವರಿಗೆ ನಿಷ್ಠುರ ಮಾತುಗಳನ್ನು ಕೇಳುವ ಸಂಭವ
ರಾಶಿ ಭವಿಷ್ಯ

ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರ ಋತು, ಶುಕ್ಲಪಕ್ಷ, ಅಷ್ಟಮಿ ತಿಥಿ, ಶನಿವಾರ, ಫೆಬ್ರವರಿ 20, 2021 ರಾಶಿ ಭವಿಷ್ಯ.

Rajesh Duggumane

| Edited By: pruthvi Shankar

Feb 20, 2021 | 6:52 AM

ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರ ಋತು, ಶುಕ್ಲಪಕ್ಷ, ಅಷ್ಟಮಿ ತಿಥಿ, ಶನಿವಾರ, ಫೆಬ್ರವರಿ 20, 2021. ಕೃತ್ತಿಕೆ ನಕ್ಷತ್ರ, ರಾಹುಕಾಲ: ಬೆಳಿಗ್ಗೆ 9 :34ರಿಂದ ಇಂದು ಬೆಳಿಗ್ಗೆ 11:01 ತನಕ . ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.40. ಸೂರ್ಯಾಸ್ತ: ಸಂಜೆ 6.19.

ದಿನಾಂಕ: 20-02-2021 ರ ಶನಿವಾರದ ರಾಶಿಭವಿಷ್ಯ

ಮೇಷ: ಪ್ರಮುಖ ಯೋಜನೆಗಳ ಜವಾಬ್ದಾರಿ ಹೆಚ್ಚುವದು. ಆರ್ಥಿಕ ಅಭಿವೃದ್ಧಿ ಕಂಡುಬರುವದು. ಸ್ನೇಹಿತರ ಭಿನ್ನಾಭಿಪ್ರಾಯ ಬಗೆಹರಿಯುವದು. ಶತೃಗಳೂ ಸೌಮ್ಯರಾಗುವ ಕಾಲ ಇರುವದರಿಂದ ಅಪೇಕ್ಷಿತ ಕಾರ್ಯವನ್ನು ಸಾಧಿಸುವಿರಿ. ಶುಭಸಂಖ್ಯೆ: 9

ವೃಷಭ: ವ್ಯಾಪಾರದಲ್ಲಿ ಪ್ರಗತಿ ಇರುವದು. ವೈವಾಹಿಕ ತೊಂದರೆಗಳು ಪರಿಹಾರವಾಗುವವು. ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರುವದು. ಶುಭಸಂಖ್ಯೆ: 3

ಮಿಥುನ: ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ಮೊದಲು ಕಷ್ಟ ನಂತರದಲ್ಲಿ ಉತ್ತಮವಾದ ಫಲ ದೊರೆಯುವದು. ಗುರುಬಲ ವೃದ್ಧಿಸುವದು. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವದು. ಶುಭಸಂಖ್ಯೆ: 7

ಕರ್ಕ: ಅಪೇಕ್ಷಿಸಿದ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುವವು ಆಸ್ತಿ ವಿವಾದ ಸೃಜನರ ಅತೃಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ,ಸಂತೃಪ್ತಿಯ ಯೋಗವಿದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶವನ್ನು ಹೊಂದುವರು.ಸಭಾಸಮಾಜ ಕೀರ್ತಿ ಲಭಿಸುವುದು. ಶುಭಸಂಖ್ಯೆ: 1

ಸಿಂಹ: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭಸಂಖ್ಯೆ: 6

ಕನ್ಯಾ: ಕೌಟುಂಬಿಕ ಕಲಹ ಹೆಚ್ಚಾಗುವ ಸಾಧ್ಯತೆ ಇದೆ ಸಮಾಧಾನ ಚಿತ್ತದಿಂದ ವರ್ತಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವದು. ಹಾನಿ ಇಲ್ಲ ಆದರೆ ಲಾಭವೂ ಇಲ್ಲದ ಸ್ಥಿತಿ ಇರುವದು. ಶುಭಸಂಖ್ಯೆ: 2

ತುಲಾ: ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವದು ಒಳಿತು. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಶುಭಸಂಖ್ಯೆ: 5

ವೃಶ್ಚಿಕ: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭಸಂಖ್ಯೆ: 8

ಧನು: ನಿರೀಕ್ಷಿತ ಸರ್ವಕಾರ್ಯಗಳು ನೆರವೆರುತ್ತದೆ. ಆರ್ಥಿಕ ಮಟ್ಟವೂ ಏರಿ, ಸ್ಥಿರಪ್ರಾಪ್ತಿ, ಸಂಸಾರಸುಖ ಸಂಬ್ರಮಗಳಿರುತ್ತದೆ. ಶುಭ ಕಾರ್ಯ ಪ್ರಯತ್ನ ಫಲಕೊಡುತ್ತದೆ. ಶುಭಸಂಖ್ಯೆ: 9

ಮಕರ: ವ್ಯಥಾ ಚಿಂತೆ, ತಪ್ಪು ಕಲ್ಪನೆ, ನಿಷ್ಠುರ ಮಾತುಗಳನ್ನು ಕೇಳುವ ಸಂಭವ, ಜನ್ಮಸ್ಥ ಶುಕ್ರ ಇರುವದರಿಂದ ಆರ್ಥಿಕ ಸುಭದ್ರತೆ ಇರುವದು. ವಿದ್ಯಾರ್ಥಿಗಳಿಗೆ ಪರಿಶ್ರಮ ಅವಶ್ಯಕ. ಮನೆಯಲ್ಲಿ ಸಂತೋಷವಿರುವದು. ಗೋಸೇವೆಯಿಂದ ಕಷ್ಟಪರಿಹಾರ. ಶುಭಸಂಖ್ಯೆ: 4

ಕುಂಭ: ಗುರಿಸಾಧನೆಗೆ ಇದು ಸೂಕ್ತ ಸಮಯ. ಪ್ರಯತ್ನಿಸಿದ ಕಾರ್ಯಗಳು ಕೈಗೂಡುವವು. ವಿದ್ಯಾರ್ಥಿಗಳಿಗೆ ಉನ್ನತ ಪ್ರಶಸ್ತಿ ದೊರಕುವ ಸಾಧ್ಯತೆ ಇರುವದು. ಶುಭಸಂಖ್ಯೆ: 1

ಮೀನ: ಹೊಸ ಯೋಜನೆಗೆ ಸಂಬಂಧಿಸಿದಂತೆ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ. ಶುಭಸಂಖ್ಯೆ: 5

basavaraj guruji

ಬಸವರಾಜ ಗುರೂಜಿ(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 9972848937)

Follow us on

Related Stories

Most Read Stories

Click on your DTH Provider to Add TV9 Kannada