ಬೆಂಗಳೂರು: KPCC ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು.
ನಗರದ ಕಾಂಗ್ರೆಸ್ ಭವನದ ಮುಂದೆ ಧರಣಿ ನಡೆಸಲಾಯಿತು. ಕೈಯಲ್ಲಿ ಬಕೆಟ್ ಹಿಡಿದುಕೊಂಡು ಬಕೆಟ್ ಯೋಗೇಶ್ವರ್ ಎಂದು ಆಕ್ರೋಶ ಹೊರಹಾಕಿದರು. ಜೊತೆಗೆ, ಯೋಗೇಶ್ವರ್ ನಟನೆಯ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಬಿಜೆಪಿ ನಾಯಕರ ವ್ಯಂಗ್ಯ ಮಾಡಿದರು.
Published On - 12:52 pm, Fri, 31 July 20