Gas Price Hike: ಅಕ್ಟೋಬರ್ ತಿಂಗಳಿಂದ ಅಡುಗೆ ಅನಿಲ ದರ ಶೇ 57ರಷ್ಟು ಏರಿಕೆ ಸಾಧ್ಯತೆ
2021ರ ಅಕ್ಟೋಬರ್ನಿಂದ ಅಡುಗೆ ಅನಿಲ ಸಿಲಿಂಡರ್ ದರ ಶೇ 57ರಷ್ಟು ಏರಿಕೆ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ. ಅದಕ್ಕೆ ಕಾರಣ ಏನು ಮತ್ತಿತರ ವಿವರ ಇಲ್ಲಿದೆ
ಐಸಿಐಸಿಐ ಸೆಕ್ಯೂರಿಟೀಸ್ ಅಂದಾಜು ಮಾಡಿರುವ ಪ್ರಕಾರ, ಮುಂದಿನ ತಿಂಗಳಿನಿಂದ ಅನಿಲ ಬೆಲೆಯಲ್ಲಿ ಶೇ 57ರಷ್ಟು ಏರಿಕೆ ಆಗಬಹುದು. ಹೀಗೆ ಭವಿಷ್ಯ ನುಡಿದಿರುವ ಕಾರಣ ಏನೆಂದರೆ, CNG ಮತ್ತು ಪೈಪ್ಡ್ ಅಡುಗೆ ಅನಿಲದ ಬೆಲೆಯಲ್ಲಿ ಹೊಸ ಸುತ್ತಿನ ಏರಿಕೆ ಆಗುವ ಸಾಧ್ಯತೆಗಳಿವೆ. ಐಸಿಐಸಿಐ ಸೆಕ್ಯೂರಿಟಿಗಳ ವರದಿಯನ್ನು ಉಲ್ಲೇಖಿಸಿ ಹೇಳುವುದಾದರೆ, ದೇಶೀಯ ನೈಸರ್ಗಿಕ ಅನಿಲದ ಬೆಲೆಯನ್ನು ಪ್ರತಿ ಏಪ್ರಿಲ್ ಮತ್ತು ಅಕ್ಟೋಬರ್‌ನಲ್ಲಿ ಪರಿಷ್ಕರಿಸಲು ಸರ್ಕಾರ ಬಳಸುವ ಅಂತಾರಾಷ್ಟ್ರೀಯ ಬೆಲೆ-ಆಧಾರಿತ ಸೂತ್ರದ ಪರಿಣಾಮವಾಗಿ ಬೆಲೆ ಏರಿಕೆ ಆಗಲಿದೆ ಎಂದು ಎಕನಾಮಿಕ್ ಟೈಮ್ಸ್ ಹೇಳಿದೆ. ವರದಿಯ ಪ್ರಕಾರ, ನೈಸರ್ಗಿಕ ಅನಿಲದ ಬೆಲೆಯು ಈಗಿನ ಪ್ರತಿ ಮೆಟ್ರಿಕ್ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್‌ಗೆ (mmBtu) ಪ್ರತಿ 2 ಯುಎಸ್ಡಿಯಿಂದ 3.15 ಅಮೆರಿಕನ್ ಡಾಲರ್ಗೆ ಹೆಚ್ಚಾಗುತ್ತದೆ.
ಈ ಬಗ್ಗೆ ಅಧಿಕಾರಿಗಳು ಏನು ಹೇಳುತ್ತಾರೆ? ಈ ವರ್ಷದ ಆರಂಭದಲ್ಲಿ, ಜುಲೈನಲ್ಲಿನ ಒಎನ್‌ಜಿಸಿಯ ವ್ಯವಸ್ಥಾಪಕ ನಿರ್ದೇಶಕರ ಮಾತನ್ನು ಬಿಜಿನೆಸ್ ಸ್ಟ್ಯಾಂಡರ್ಡ್ ಉಲ್ಲೇಖಿಸಿ, “ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲದ ಬೆಲೆ ಅಕ್ಟೋಬರ್ 2021-ಮಾರ್ಚ್ 2022ರ ಅವಧಿಯಲ್ಲಿ ಶೇ 50-60 ಹೆಚ್ಚಾಗುತ್ತದೆ,” ಎಂದು ತಿಳಿಸಿತ್ತು. ದೇಶೀಯ ಬೆಲೆಯು ಪ್ರತಿ mBtuಗೆ 3 ಯುಎಸ್ಡಿಗಿಂತ ಕಡಿಮೆ ಇರುವ ಸಾಧ್ಯತೆಯಿದೆ ಮತ್ತು ಕಷ್ಟಕರವಾದ ಆವಿಷ್ಕಾರಗಳಿಂದ ಅನಿಲದ ಬೆಲೆ ಮಿತಿಯು mBtuಗೆ 6 ಯುಎಸ್ಡಿಗಿಂತ ಕಡಿಮೆಯಿರುತ್ತದೆ ಎಂದು ಬಿಜಿನೆಸ್ ಸ್ಟ್ಯಾಂಡರ್ಡ್ ಸೇರಿಸಿದೆ.
ಅನಿಲ ವಿತರಕರು ಹೊರೆಯನ್ನು ದಾಟಿಸಬೇಕು ಬ್ರೋಕರೇಜ್ ಸಂಸ್ಥೆಯ ಪ್ರಕಾರ, ಎಕಾನಮಿಕ್ ಟೈಮ್ಸ್ ಉಲ್ಲೇಖಿಸಿದಂತೆ, ದೇಶೀಯ ಗ್ಯಾಸ್ ಬೆಲೆಯ ಏರಿಕೆ ಎಂದರೆ ಆ ನಗರದ ಗ್ಯಾಸ್ ವಿತರಕರು ಅಂದರೆ ಗುಜರಾತ್ ಗ್ಯಾಸ್, ಮಹಾನಗರ ಗ್ಯಾಸ್ ಮತ್ತು ಇಂದ್ರಪ್ರಸ್ಥ ಗ್ಯಾಸ್-ಅಕ್ಟೋಬರ್‌ನಲ್ಲಿ ಶೇ 10-11ರಷ್ಟು ಬೆಲೆ ಏರಿಕೆ ಮಾಡಬೇಕಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಇಂಧನ ಬೆಲೆಗಳು ಏರಿಕೆ ಆಗಿರುವುದರಿಂದ ಗ್ಯಾಸ್ ಕಂಪೆನಿಗಳು ಬೆಲೆಯನ್ನು ಹೆಚ್ಚಿಸುವ ನಿಯಂತ್ರಣವನ್ನು ಹೊಂದಿದ್ದವು.
2014ರಿಂದ ದೇಶೀಯ ಅನಿಲದ ಬೆಲೆಯನ್ನು ‘ಜಾಗತಿಕ ಅನಿಲ ಕೇಂದ್ರಗಳಲ್ಲಿ ನೈಸರ್ಗಿಕ ಅನಿಲದ ಬೆಲೆಯ ತೂಕದ ಸರಾಸರಿ’ ಗಣನೆಗೆ ತೆಗೆದುಕೊಳ್ಳುವ ಸೂತ್ರದಿಂದ ನಿರ್ಧರಿಸಲಾಗಿದೆ. ಮತ್ತೊಂದೆಡೆ, ‘ಕಷ್ಟಕರ ಆವಿಷ್ಕಾರಗಳಿಂದ’ ಅನಿಲದ ಬೆಲೆಯ ಮೇಲಿನ ಮಿತಿಯನ್ನು ಪರ್ಯಾಯ ಇಂಧನಗಳ ಬೆಲೆಗೆ ಜೋಡಿಸಲಾಗಿದೆ ಮತ್ತು ಎರಡರ ಬೆಲೆಗಳು ಏಕಕಾಲದಲ್ಲಿ ಏರಿಕೆಯಾಗುತ್ತವೆ ಅಥವಾ ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಅಂತರಾಷ್ಟ್ರೀಯ ಬೆಲೆಗಳನ್ನು ಗಣನೆಗೆ ತೆಗೆದುಕೊಂಡ ನಂತರ ಅನಿಲದ ದೇಶೀಯ ಬೆಲೆಯನ್ನು ಲೆಕ್ಕ ಹಾಕಲಾಗುತ್ತದೆ. ಆದರೆ ಕೆಲವು ತಿಂಗಳ ವಿಳಂಬದೊಂದಿಗೆ, ಅದಕ್ಕಾಗಿಯೇ ಸರ್ಕಾರವು ಪ್ರತಿ ಏಪ್ರಿಲ್ ಮತ್ತು ಅಕ್ಟೋಬರ್‌ನಲ್ಲಿ ಅದರ ಬೆಲೆಗಳನ್ನು ಪರಿಷ್ಕರಿಸುತ್ತದೆ.
ಇದನ್ನೂ ಓದಿ: How To Get LPG Cylinder New Connection: ಒಂದು ಮಿಸ್ಡ್ ಕಾಲ್ನಲ್ಲಿ ಪಡೆಯಬಹುದು ಎಲ್ಪಿಜಿ ಹೊಸ ಸಂಪರ್ಕ
(Cooking Gas Price Expected To Hike 57 Percent From October)