AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿ.ಜೆ.ಹಳ್ಳಿ ಠಾಣೆಯಲ್ಲಿ 9 ಪ್ರತ್ಯೇಕ FIR, ಜಾಮೀನು ರಹಿತ ಅಪರಾಧಗಳ ವಿವರ ಇಲ್ಲಿದೆ

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ಕೇಸ್​ಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ 9 ಪ್ರತ್ಯೇಕ FIR ದಾಖಲಿಸಲಾಗಿದೆ. ಡಿ.ಜೆ.ಹಳ್ಳಿ ಠಾಣೆ ಇನ್​ಸ್ಪೆಕ್ಟರ್ ಕೇಶವಮೂರ್ತಿ ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ. ಅಫ್ನಾನ್, ಮುಜಾಮಿಲ್ ಪಾಶಾ, ಸೈಯದ್ ಮಸೂದ್, ಅಯಾಜ್, ಅಲ್ಲಾಭಕ್ಷ್ ವಿರುದ್ಧ ದೂರು ದಾಖಲಾಗಿದೆ. ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ಆರೋಪಿ ನವೀನ್​ನ ಪೊಲೀಸರು ಬಂಧಿಸಿ ಕರೆ ತರುತ್ತಿದ್ದ ವೇಳೆ ಆತನ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಮೊದಲೇ ಆರೋಪಿಗಳು ಗುಂಪು ರಚಿಸಿದ್ದರು ಎಂದು FIRನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, […]

ಡಿ.ಜೆ.ಹಳ್ಳಿ ಠಾಣೆಯಲ್ಲಿ 9 ಪ್ರತ್ಯೇಕ FIR, ಜಾಮೀನು ರಹಿತ ಅಪರಾಧಗಳ ವಿವರ ಇಲ್ಲಿದೆ
KUSHAL V
| Edited By: |

Updated on:Aug 13, 2020 | 11:43 AM

Share

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ಕೇಸ್​ಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ 9 ಪ್ರತ್ಯೇಕ FIR ದಾಖಲಿಸಲಾಗಿದೆ. ಡಿ.ಜೆ.ಹಳ್ಳಿ ಠಾಣೆ ಇನ್​ಸ್ಪೆಕ್ಟರ್ ಕೇಶವಮೂರ್ತಿ ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ. ಅಫ್ನಾನ್, ಮುಜಾಮಿಲ್ ಪಾಶಾ, ಸೈಯದ್ ಮಸೂದ್, ಅಯಾಜ್, ಅಲ್ಲಾಭಕ್ಷ್ ವಿರುದ್ಧ ದೂರು ದಾಖಲಾಗಿದೆ.

ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ಆರೋಪಿ ನವೀನ್​ನ ಪೊಲೀಸರು ಬಂಧಿಸಿ ಕರೆ ತರುತ್ತಿದ್ದ ವೇಳೆ ಆತನ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಮೊದಲೇ ಆರೋಪಿಗಳು ಗುಂಪು ರಚಿಸಿದ್ದರು ಎಂದು FIRನಲ್ಲಿ ಉಲ್ಲೇಖಿಸಲಾಗಿದೆ.

ಜೊತೆಗೆ, ಏಕಾಏಕಿ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆದಿದ್ದು ಪೊಲೀಸರನ್ನೂ ಕೊಲ್ಲಿ, ಮುಗಿಸಿಬಿಡಿ ಎಂಬ ಘೋಷಣೆಗಳೊಂದಿಗೆ ಅಟ್ಯಾಕ್ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇನ್ನು ಹಲ್ಲೆಯ ವೇಳೆ ಹೆಡ್ ಕಾನ್ಸ್​ಟೇಬಲ್ ಶ್ರೀಧರ್ ತಲೆಗೆ ಗಾಯಗಳಾಗಿವೆ.

ಹಾಗಾಗಿ, ಘಟನೆಯ ಗಂಭೀರತೆ ಅರಿತು ಹೆಚ್ಚಿನ ಪೊಲೀಸ್ ನಿಯೋಜನೆಗೆ ಇನ್​ಸ್ಪೆಕ್ಟರ್ ಬೇಡಿಕೆಯಿಟ್ಟಿದ್ದರು. ಜೊತೆಗೆ, ಶಾಂತಿ ಕಾಪಾಡುವಂತೆ ಮನವಿ ಮಾಡಿದರೂ ಉದ್ರಿಕ್ತರ ಗುಂಪು ಕೇಳಲಿಲ್ಲವಂತೆ. ಠಾಣಾ ಆವರಣಕ್ಕೆ ನುಗ್ಗಿ ಪೊಲೀಸ್ ವಾಹನ‌ ಹಾಗೂ ಹೊರಗಿದ್ದ ಸಾರ್ವಜನಿಕರ ವಾಹನಗಳಿಗೆ ಗಲಭೇಕೋರರು ಬೆಂಕಿ ಹಚ್ಚಿದ್ದಾರೆ. ಠಾಣಾ ಕೆಳಮಹಡಿಯಲ್ಲಿದ್ದ ಜಪ್ತಿಯಾದ ವಾಹನಗಳಿಗೂ ಉದ್ರಿಕ್ತರು ಬೆಂಕಿ ಹಚ್ಚಿದ್ದರು.

ಗಲಭೇಕೋರರನ್ನ ಚದುರಿಸಲು ಲಾಠಿ ಚಾರ್ಜ್ ಕಮಿಷನರ್ ಅನುಮತಿ ಪಡೆದು ತಕ್ಷಣ ಉದ್ರಿಕ್ತ ಏರಿಯಾದಲ್ಲಿ 144 ಸೆಕ್ಷನ್ ಜಾರಿ ಮಾಡಲಾಯಿತು. ಗಲಭೇಕೋರರನ್ನ ಚದುರಿಸಲು ಅಶ್ರುವಾಯು ಸಿಡಿಸಿ, ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಈ ನಡುವೆ ಆರೋಪಿಗಳು CRPF ವಾಹನಕ್ಕೆ ಬೆಂಕಿ ಹಚ್ಚಿ, ಸಿಬ್ಬಂದಿಗಳ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನ ಕಿತ್ತುಕೊಂಡು ಪೊಲೀಸರನ್ನೇ ಕೊಲ್ಲಲು ಮುನ್ನುಗಿದರು. ಆಗ, ವಿಧಿಯಿಲ್ಲದೇ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಗಾಳಿಯಲ್ಲಿ‌ ಗುಂಡು ಹಾರಿಸಬೇಕಾಯಿತು ಎಂದು FIRನಲ್ಲಿ ಉಲ್ಲೇಖಿಸಲಾಗಿದೆ.

ದಿಕ್ಕಾಪಾಲಾಗಿ ಓಡುವಾಗ ಕೆಲ ಉದ್ರಿಕ್ತರಿಗೆ ಗಂಭೀರ ಗಾಯಗಳಾಗಿದ್ದು ಮೇಲ್ಕಂಡ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಇನ್​ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿದ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರಂತೆ. ಆದರೆ, ಸರಿಯಾದ ಸಮಯಕ್ಕೆ ಸ್ಥಳದಲ್ಲಿದ್ದ ಇತರೆ ಪೊಲೀಸ್ ಸಿಬ್ಬಂದಿ ಆರೋಪಿಗಳನ್ನ ಹಿಡಿದು ನಿಲ್ಲಿಸಿದ್ದರಂತೆ ಎಂದು ಸರ್ಕಾರದ ಪರವಾಗಿ ಇನ್​ಸ್ಪೆಕ್ಟರ್ ಕೇಶವಮೂರ್ತಿ ಘಟನೆ ಸಂಬಂಧ ಲಿಖಿತ ದೂರು ಸಲ್ಲಿಸಿದ್ದಾರೆ.

ಕೆ.ಜಿ.ಹಳ್ಳಿ ಠಾಣೆಯಲ್ಲಿ ದೂರು ದಾಖಲು ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜಿ.ಹಳ್ಳಿ ಠಾಣೆಯಲ್ಲಿಯೂ ಸಹ ದೂರು ದಾಖಲಾಗಿದ್ದು 17 ಆರೋಪಿಗಳ ವಿರುದ್ಧ ಪಿಐ ಅಜಯ್ ಸಾರಥಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 143, 147, 148, 353, 333, 323ನಲ್ಲಿ ದೂರು ದಾಖಲಿಸಿದ್ದಲ್ಲದೆ ಐಪಿಸಿ ಸೆಕ್ಷನ್ 436, 427, 148 ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ-1984 ಕಾಯ್ದೆ ಅಡಿ ದೂರು ಸಹ ದಾಖಲಾಗಿದೆ.

ಇನ್ನು ದೂರಿನಲ್ಲಿ A1 ಅಬ್ಬಾಸ್, A2 ಫೈರೋಜ್, A3 ಮುಜಮ್ಮಿಲ್, A4 ಹಬೀಬ್, A5 ಪೀರ್ ಪಾಷಾ ಸೇರಿದಂತೆ ಒಟ್ಟು 17 ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಜೊತೆಗೆ, ಬಂಧಿತರು SDPIಕಾರ್ಯಕರ್ತರೆಂದು FIRನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ವೇಳೆ ಡಿ.ಜೆ.ಹಳ್ಳಿ ಠಾಣೆಗೂ ಬಂದಿದ್ದ A2 ಫೈರೋಜ್ ಖಾನ್ ಎಲ್ಲೆಲ್ಲಿ ಗಲಾಟೆ ಮಾಡಬೇಕೆಂದು ಮೆಸೇಜ್ ಸಹ ಕಳಿಸಿದ್ದನಂತೆ. ಆರ್.ಟಿ ನಗರದ ನಿವಾಸಿಯಾಗಿರುವ ಫೈರೋಜ್ ಖಾನ್ ಟಿಪ್ಪು ಆರ್ಮಿ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸದ್ಯ ಐಪಿಸಿ ಸೆಕ್ಷನ್ 353 (ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ), 333 (ಸರ್ಕಾರಿ ನೌಕರನಿಗೆ ತೀವ್ರ ಹಲ್ಲೆ ನಡೆಸಿ ಆತನ ಕರ್ತವ್ಯಕ್ಕೆ ಅಡ್ಡಿಪಡಿಸುವುದು), 436 (ಮನೆ ನಾಶಪಡಿಸುವ ಉದ್ದೇಶದಿಂದ ಬೆಂಕಿ ಅಥವಾ ಸ್ಫೋಟಕ ಬಳಕೆ) ನಡಿ ದೂರು ದಾಖಲಾಗಿದ್ದು ಈ ಮೂರೂ ಸೆಕ್ಷನ್​ಗಳು ಜಾಮೀನು ರಹಿತ ಅಪರಾಧಗಳಾಗಿವೆ. ಇದರ ಅಡಿಯಲ್ಲಿ 10 ವರ್ಷಗಳಿಂದ ಹಿಡಿದು ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಉಳಿದ ಸೆಕ್ಷನ್ ಗಳು ಜಾಮೀನು ನೀಡಬಹುದಾದ ಸೆಕ್ಷನ್.

Published On - 11:24 am, Thu, 13 August 20