ಬೇರೆಯವಳನ್ನ ಮದ್ವೆಯಾಗಿದ್ದಕ್ಕೆ ಮಾಜಿ ಲವರ್ ಮೇಲೆ ಹಲ್ಲೆ.. ಯುವತಿ ವಿರುದ್ಧ FIR ದಾಖಲು
ಮೈಸೂರು: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿದ್ದ ಹಿನ್ನೆಲೆಯಲ್ಲಿ ಯುವತಿಯೊಬ್ಬಳ ವಿರುದ್ಧ FIR ದಾಖಲಾಗಿರುವ ಪ್ರಕರಣ ನಗರದ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ. ಯುವಕರ ಜೊತೆ ಸೇರಿಕೊಂಡು ಹಲ್ಲೆ ಮಾಡಿದ್ದ ಯುವತಿ ಭೂಮಿಕಾ ವಿರುದ್ಧ FIR ದಾಖಲಾಗಿದೆ. ಉಮೇಶ್ ಮತ್ತು ಅಶೋಕ್ ಎಂಬ ಯುವಕರ ಮೇಲೆ ಭೂಮಿಕಾ ಹಲ್ಲೆ ನಡೆಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಗಾಯಾಳು ಉಮೇಶ್ ಈ ಹಿಂದೆ ಭೂಮಿಕಾ ಜೊತೆಗಿರುತ್ತಿದ್ದ ಎಂದು ತಿಳಿದುಬಂದಿದೆ. ಆದರೆ, ಕೆಲ ತಿಂಗಳ ಹಿಂದೆ ಇಬ್ಬರು ಬೇರೆಯಾಗಿದ್ದರಂತೆ. […]

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿದ್ದ ಹಿನ್ನೆಲೆಯಲ್ಲಿ ಯುವತಿಯೊಬ್ಬಳ ವಿರುದ್ಧ FIR ದಾಖಲಾಗಿರುವ ಪ್ರಕರಣ ನಗರದ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ. ಯುವಕರ ಜೊತೆ ಸೇರಿಕೊಂಡು ಹಲ್ಲೆ ಮಾಡಿದ್ದ ಯುವತಿ ಭೂಮಿಕಾ ವಿರುದ್ಧ FIR ದಾಖಲಾಗಿದೆ. ಉಮೇಶ್ ಮತ್ತು ಅಶೋಕ್ ಎಂಬ ಯುವಕರ ಮೇಲೆ ಭೂಮಿಕಾ ಹಲ್ಲೆ ನಡೆಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಗಾಯಾಳು ಉಮೇಶ್ ಈ ಹಿಂದೆ ಭೂಮಿಕಾ ಜೊತೆಗಿರುತ್ತಿದ್ದ ಎಂದು ತಿಳಿದುಬಂದಿದೆ. ಆದರೆ, ಕೆಲ ತಿಂಗಳ ಹಿಂದೆ ಇಬ್ಬರು ಬೇರೆಯಾಗಿದ್ದರಂತೆ. ಈ ನಡುವೆ, ಉಮೇಶ್ ಆಗಸ್ಟ್ 31ರಂದು ಮತ್ತೊಬ್ಬ ಯುವತಿಯೊಂದಿಗೆ ವಿವಾಹವಾಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ಭೂಮಿಕಾ ಉಮೇಶ್‌ನನ್ನು ಬೆಂಗಳೂರಿನ ಆಕೆಯ ಮನೆಗೆ ಕರೆಸಿಕೊಂಡು ಹಲ್ಲೆ ಸಹ ನಡೆಸಿದ್ದಳು. ಹಲ್ಲೆಯ ಆ ವಿಡಿಯೋ ಆಗ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇದಾದ ನಂತರ, ಕೆಲವು ದಿನಗಳ ಹಿಂದೆ ಉಮೇಶ್‌ನನ್ನು ಮತ್ತೊಮ್ಮೆ ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಕರೆಸಿಕೊಂಡು ಭೂಮಿಕಾ ಮನಬಂದಂತೆ ಹಲ್ಲೆ ನಡಿಸಿದ್ದಾಳಂತೆ. ಉಮೇಶ್ ಜೊತೆಗೆ ಬಂದಿದ್ದ ಅಶೋಕ್ ಮೇಲೂ ಹಲ್ಲೆ ಮಾಡಿದ್ದಾಳಂತೆ. ಈ ವೇಳೆ ಭೂಮಿಕಾಗೆ KRS ಚೇತು ಮತ್ತು ಅಭಿ ಎಂಬ ಯುವಕರ ಸಾಥ್ ನೀಡಿದ್ದರು ಎಂದು ತಿಳಿದುಬಂದಿದೆ. ಹಲ್ಲೆಯಲ್ಲಿ ಉಮೇಶ್‌ಗೆ ಗಂಭೀರ ಗಾಯಗಳಾಗಿದ್ದರೆ ಅಶೋಕ್‌ಗೆ ಸಣ್ಣಪುಟ್ಟ ಗಾಯವಾಗಿದೆ. ಸದ್ಯ ಇಬ್ಬರು ಯುವಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಮಿಕಾ, KRS ಚೇತು, ಅಭಿ ಸೇರಿದಂತೆ ನಾಲ್ವರ ವಿರುದ್ಧ ಮೈಸೂರಿನ ಲಕ್ಷ್ಮೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



