IPL 2020: ಮೈದಾನದಲ್ಲಿ CSK ವಿರುದ್ಧ RR ಆಟಗಾರರು ಮಿಂಚು ಹರಿಸಿದ್ದು ಹೀಗೆ..

ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಐಪಿಎಲ್ 2020 ಮೊದಲ ಪಂದ್ಯದಲ್ಲಿ ಅದ್ಭುತ ಜಯ ದಾಖಲಿಸಿದೆ. ಭರ್ಜರಿ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತನ್ನ ಅಭಿಯಾನವನ್ನು ಉತ್ತಮವಾಗಿ ಪ್ರಾರಂಭಿಸಿದೆ. ರಾಜಸ್ಥಾನವು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವನ್ನು 16 ರನ್​ಗಳಿಂದ ಸೋಲಿಸಿತು. [yop_poll id=”1″] ಯಶಸ್ವಿ ಜೈಸ್ವಾಲ್ ಐಪಿಎಲ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡುವಾ ಮೂಲಕ ತಮ್ಮ ಕ್ರಿಕೆಟ್​ ಬದುಕನ್ನು ಆರಂಭಿಸಿದ್ದಾರೆ. ಮೊದಲ ಬಾರಿಗೆ ಎಂಎಸ್ ಧೋನಿಯ ಎದುರಾದ ಜೈಸ್ವಾಲ್ ಧೋನಿ ಬಗ್ಗೆ ಗೌರವ ವ್ಯಕ್ತಪಡಿಸಿ ಎರಡು […]

IPL 2020: ಮೈದಾನದಲ್ಲಿ CSK ವಿರುದ್ಧ RR ಆಟಗಾರರು ಮಿಂಚು ಹರಿಸಿದ್ದು ಹೀಗೆ..
Follow us
ಸಾಧು ಶ್ರೀನಾಥ್​
|

Updated on:Sep 23, 2020 | 1:43 PM

ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಐಪಿಎಲ್ 2020 ಮೊದಲ ಪಂದ್ಯದಲ್ಲಿ ಅದ್ಭುತ ಜಯ ದಾಖಲಿಸಿದೆ. ಭರ್ಜರಿ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತನ್ನ ಅಭಿಯಾನವನ್ನು ಉತ್ತಮವಾಗಿ ಪ್ರಾರಂಭಿಸಿದೆ. ರಾಜಸ್ಥಾನವು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವನ್ನು 16 ರನ್​ಗಳಿಂದ ಸೋಲಿಸಿತು.

[yop_poll id=”1″]

ಯಶಸ್ವಿ ಜೈಸ್ವಾಲ್ ಐಪಿಎಲ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡುವಾ ಮೂಲಕ ತಮ್ಮ ಕ್ರಿಕೆಟ್​ ಬದುಕನ್ನು ಆರಂಭಿಸಿದ್ದಾರೆ. ಮೊದಲ ಬಾರಿಗೆ ಎಂಎಸ್ ಧೋನಿಯ ಎದುರಾದ ಜೈಸ್ವಾಲ್ ಧೋನಿ ಬಗ್ಗೆ ಗೌರವ ವ್ಯಕ್ತಪಡಿಸಿ ಎರಡು ಕೈಗಳಿಂದ ನಮಸ್ಕರಿಸಿದರು. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಆದರೆ ಯಶಸ್ವಿ ಜೈಸ್ವಾಲ್ ಅವರ ಐಪಿಎಲ್ ವೃತ್ತಿಜೀವನವು ಉತ್ತಮಯಾಗಿ ಪ್ರಾರಂಭವಾಗಲಿಲ್ಲ. ಕೇವಲ 6 ರನ್ ಗಳಿಸಿದ ಜೈಸ್ವಾಲ್ ಔಟ್ ಆಗಿ ಪೆವಿಲಿಯನ್​ ಸೇರಿದರು.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ ಸಂಜು ಸ್ಯಾಮ್ಸನ್ ಹೆಸರೆ ಆರ್ಭಟಿಸಿತು. ಸ್ಯಾಮ್ಸನ್ ಉತ್ತಮ ಇನಿಂಗ್ಸ್ ಆಡುವ ಮೂಲಕ ರಾಜಸ್ಥಾನದ ದೊಡ್ಡ ಸ್ಕೋರಿಗೆ ಅಡಿಪಾಯ ಹಾಕಿದರು. ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ ಅರ್ಧ ಶತಕವನ್ನು ಬಾರಿಸಿದಲ್ಲದೆ ಕೇವಲ 32 ಎಸೆತಗಳಲ್ಲಿ 74 ರನ್ ಗಳಿಸಿದರು. ಇದರಲ್ಲಿ 9 ಭವ್ಯವಾದ ಸಿಕ್ಸರ್‌ಗಳು ಸೇರಿದ್ದವು.

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಕೂಡ ಅದ್ಭುತ ಅರ್ಧ ಶತಕ ಬಾರಿಸಿದರು. ಅಲ್ಲದೆ ಸ್ಯಾಮ್ಸನ್ ಔಟ್ ಆದ ನಂತರವೂ ತಂಡವನ್ನು ಮುನ್ನಡೆಸಿ ಸ್ಮಿತ್ 67 ರನ್ ಗಳಿಸಿದರು.

ಜಡೇಜಾ ತೀವ್ರ ಪ್ರಯತ್ನ ಮಾಡಿದರೂ ಸಹ ಇಂದಿನ ಪಂದ್ಯದಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಸ್ಯಾಮ್ಸನ್ ಜಡೇಜಾ ಓವರ್​ಗಳಲ್ಲಿ ಅಬ್ಬರಿಸಿ ಬೊಬ್ಬಿರಿದರು.

ಆರ್ಚರ್ ಬ್ಯಾಟ್​ ಮಾಡಿದ ಕೊನೆಯ ಓವರ್​ ಅತ್ಯುತ್ತಮವಾಗಿತ್ತು. ಆರ್ಚರ್ ಕೊನೆಯ ಓವರ್‌ನಲ್ಲಿ ಲುಂಗಿ ಎನ್‌ಗಿಡಿ ಅವರಿಗೆ ಸತತ 4 ಸಿಕ್ಸರ್‌ಗಳನ್ನು ಬಾರಿಸಿದಲ್ಲದೆ ಕೇವಲ 8 ಎಸೆತಗಳಲ್ಲಿ 27 ರನ್ ಗಳಿಸಿದರು.

ರಾಹುಲ್ ತಿವಾಟಿಯಾ ಅವರ ಬೌಲಿಂಗ್ ಪಂದ್ಯದ ದಿಕ್ಕನೇ ಬದಲಾಯಿಸಿತು. ನಿಧಾನಗತಿಯ ಸ್ಪಿನ್‌ನಿಂದ ತಿವಾಟಿಯಾ ಪಂದ್ಯದಲ್ಲಿ 3 ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸುವುದರ ಜೊತೆಗೆ ಚೆನ್ನೈನ ಮಧ್ಯಮ ಕ್ರಮಾಂಕವನ್ನು ಪೆವಿಲಿಯನ್​ಗೆ ಅಟ್ಟುವುದರಲ್ಲಿ ಯಶಸ್ವಿಯಾದರು.

ಉತ್ತಮ ಬ್ಯಾಟಿಂಗ್ ಮಾಡಿದ ನಂತರ, ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಸತತ 2 ಎಸೆತಗಳಲ್ಲಿ ಉತ್ತಮ ಸ್ಟಂಪಿಂಗ್ ಮಾಡಿದರು.

ಇದರ ಜೊತೆಗೆ ಸ್ಯಾಮ್ಸನ್ ಅವರು ಗಾಳಿಯಲ್ಲಿ ಹಾರಿ ಕೇದಾರ್ ಜಾಧವ್ ಅವರ ಅತ್ಯುತ್ತಮ ಕ್ಯಾಚ್ ಅನ್ನು ಒಂದು ಕೈಯಿಂದ ಹಿಡಿದರು.

ಕೊನೆಯ ಓವರ್‌ನಲ್ಲಿ ಎಂ.ಎಸ್.ಧೋನಿ ಸತತ 3 ಸಿಕ್ಸರ್‌ಗಳನ್ನು ಬಾರಿಸಿದರು, ಆದರೆ ಆ ಹೊತ್ತಿಗೆ ಪಂದ್ಯವು ಕೈಮೀರಿ ಹೋಗಿತ್ತು.

(Photo courtesy: BCCI/IPL Twitter)

Published On - 10:59 am, Wed, 23 September 20

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ