ಶುಂಠಿ, ಮೆಕ್ಕೆಜೋಳ ಮಧ್ಯೆ ಇವರು ಏನು​ ಬೆಳೆದಿದ್ದರು ಗೊತ್ತಾ?!

ಶಿವಮೊಗ್ಗ: ಹೊಲದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಕಣ್ಣೂರು ಗ್ರಾಮದಲ್ಲಿ ನಡೆದಿದೆ. ಅಬಕಾರಿ ಇಲಾಖೆ DC ಕ್ಯಾಪ್ಟನ್ ಅಜಿತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಹೊಲದಲ್ಲಿ ಬೆಳೆದಿದ್ದ 200ಕ್ಕೂ ಅಧಿಕ ಗಾಂಜಾ ಗಿಡಗಳನ್ನ ಜಪ್ತಿ ಮಾಡಲಾಯಿತು. ವಶಕ್ಕೆ ಪಡೆದ ಗಿಡಗಳ ಮೌಲ್ಯ ಸುಮಾರು 5.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಪರಶುರಾಮ್, ಗಂಗಾಧರಪ್ಪ ಮತ್ತು ಹುಚ್ಚರಾಯಪ್ಪ ಎಂಬವರಿಗೆ ಸೇರಿದ್ದ ಹೊಲದಲ್ಲಿ ಶುಂಠಿ ಹಾಗೂ ಮೆಕ್ಕೆಜೋಳ ನಡುವೆ ಗಾಂಜಾ ಗಿಡಗಳನ್ನು ಬೆಳೆಸಲಾಗಿತ್ತು! […]

ಶುಂಠಿ, ಮೆಕ್ಕೆಜೋಳ ಮಧ್ಯೆ ಇವರು ಏನು​ ಬೆಳೆದಿದ್ದರು ಗೊತ್ತಾ?!
Updated By: ಸಾಧು ಶ್ರೀನಾಥ್​

Updated on: Sep 22, 2020 | 9:16 PM

ಶಿವಮೊಗ್ಗ: ಹೊಲದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಕಣ್ಣೂರು ಗ್ರಾಮದಲ್ಲಿ ನಡೆದಿದೆ. ಅಬಕಾರಿ ಇಲಾಖೆ DC ಕ್ಯಾಪ್ಟನ್ ಅಜಿತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಹೊಲದಲ್ಲಿ ಬೆಳೆದಿದ್ದ 200ಕ್ಕೂ ಅಧಿಕ ಗಾಂಜಾ ಗಿಡಗಳನ್ನ ಜಪ್ತಿ ಮಾಡಲಾಯಿತು. ವಶಕ್ಕೆ ಪಡೆದ ಗಿಡಗಳ ಮೌಲ್ಯ
ಸುಮಾರು 5.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಪರಶುರಾಮ್, ಗಂಗಾಧರಪ್ಪ ಮತ್ತು ಹುಚ್ಚರಾಯಪ್ಪ ಎಂಬವರಿಗೆ ಸೇರಿದ್ದ ಹೊಲದಲ್ಲಿ ಶುಂಠಿ ಹಾಗೂ ಮೆಕ್ಕೆಜೋಳ ನಡುವೆ ಗಾಂಜಾ ಗಿಡಗಳನ್ನು ಬೆಳೆಸಲಾಗಿತ್ತು!

ತೀರ್ಥಹಳ್ಳಿ ಬಳಿ ಗಾಂಜಾ ಸ್ಮಗ್ಲರ್ಸ್​ ಅರೆಸ್ಟ್​
ಇತ್ತ ಜಿಲ್ಲೆಯ ತೀರ್ಥಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಮಹಿಳೆ ಸೇರಿ ನಾಲ್ವರ ಗಾಂಜಾ ಸ್ಮಗ್ಲರ್ಸ್​ಗಳನ್ನ ಬಂಧಿಸಿದ್ದಾರೆ. ಎರಡು ಕೆ.ಜಿಗೂ ಅಧಿಕ ಗಾಂಜಾ ಮತ್ತು ಒಂದು ಕಾರ್ ಸೀಜ್ ಮಾಡಲಾಗಿದೆ.

ಪಟ್ಟಣದ ಬಾಳೇಬೈಲು ಬಳಿ ಕಾರ್ಯಾಚರಣೆ ನಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯಿಂದ ಬರುತ್ತಿದ್ದ ಕಾರ್​ನ ಪರಿಶೀಲನೆ ವೇಳೆ ಗಾಂಜಾ ಪತ್ತೆಯಾಗಿದೆ. ಬಂಧಿತ ಆರೋಪಿಗಳನ್ನು ಮುಬಾರಕ್, ಜೀಶನ್, ಜೀನಾಥ್ ಹಾಗೂ ಜಾಬೀರ್ ಎಂದು ಗುರುತಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತರು ಸಾಗರ ಹಾಗೂ ಉಡುಪಿಯ ಕಾರ್ಕಳದವರು ಎಂದು ತಿಳಿದುಬಂದಿದೆ.


Published On - 3:45 pm, Tue, 22 September 20