ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ..ತನ್ನ ನೋವಿನ ಕಥೆ..
ರಾಮನಗರ: ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲ ಅನ್ನೋ ಹಾಗೆ ಲಾಕ್ಡೌನ್ ಸಂಪೂರ್ಣವಾಗಿ ತೆರವುಗೊಂಡಿದ್ರು, ಅದರ ಎಫೆಕ್ಟ್ ವ್ಯಾಪಾರಸ್ಥರ ಮೇಲೆ ಈಗಲೂ ಸಹ ಇದೆ. ಅದರಲ್ಲೂ ಚನ್ನಪಟ್ಟಣದ ಬೊಂಬೆ ತಯಾರಕರು ಹಾಗೂ ವ್ಯಾಪಾರಿಗಳ ಪಾಡು ಹೇಳ ತೀರದಾಗಿದೆ. ಕೆಳೋರಿಲ್ಲ ಚನ್ನಪಟ್ಟಣದ ಬೊಂಬೆಗಳನ್ನ ಹೌದು, ಚನ್ನಪಟ್ಟಣ ಬೊಂಬೆಗಳು, ರಾಜ್ಯ, ದೇಶವಲ್ಲದೇ ವಿಶ್ವಮಟ್ಟದಲ್ಲೂ ಕೂಡ ಪ್ರಸಿದ್ಧಿ ಪಡೆದಿವೆ. ಮುದ್ದಾದ, ಪುಟಾಣಿ ಬೊಂಬೆಗಳು ಎಂಥವರನ್ನು ಕೂಡ ತನ್ನತ್ತ ಸೆಳೆಯುತ್ತದೆ. ಆದ್ರೆ ಇದೀಗ, ಬೊಂಬೆ ತಯಾರಿಸುವವರು ಹಾಗೂ ಅದರ ಮಾರಾಟ ಮಾಡುವವರ ಬದುಕು […]
ರಾಮನಗರ: ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲ ಅನ್ನೋ ಹಾಗೆ ಲಾಕ್ಡೌನ್ ಸಂಪೂರ್ಣವಾಗಿ ತೆರವುಗೊಂಡಿದ್ರು, ಅದರ ಎಫೆಕ್ಟ್ ವ್ಯಾಪಾರಸ್ಥರ ಮೇಲೆ ಈಗಲೂ ಸಹ ಇದೆ. ಅದರಲ್ಲೂ ಚನ್ನಪಟ್ಟಣದ ಬೊಂಬೆ ತಯಾರಕರು ಹಾಗೂ ವ್ಯಾಪಾರಿಗಳ ಪಾಡು ಹೇಳ ತೀರದಾಗಿದೆ.
ಕೆಳೋರಿಲ್ಲ ಚನ್ನಪಟ್ಟಣದ ಬೊಂಬೆಗಳನ್ನ ಹೌದು, ಚನ್ನಪಟ್ಟಣ ಬೊಂಬೆಗಳು, ರಾಜ್ಯ, ದೇಶವಲ್ಲದೇ ವಿಶ್ವಮಟ್ಟದಲ್ಲೂ ಕೂಡ ಪ್ರಸಿದ್ಧಿ ಪಡೆದಿವೆ. ಮುದ್ದಾದ, ಪುಟಾಣಿ ಬೊಂಬೆಗಳು ಎಂಥವರನ್ನು ಕೂಡ ತನ್ನತ್ತ ಸೆಳೆಯುತ್ತದೆ. ಆದ್ರೆ ಇದೀಗ, ಬೊಂಬೆ ತಯಾರಿಸುವವರು ಹಾಗೂ ಅದರ ಮಾರಾಟ ಮಾಡುವವರ ಬದುಕು ಬೀದಿಗೆ ಬಿದ್ದಿದೆ. ಕೊರೊನಾ ಎಫೆಕ್ಟ್ ನಿಂದಾಗಿ ಬೊಂಬೆಗಳ ಬೇಡಿಕೆ ಕುಸಿದಿದ್ದು ಬದುಕು ಮೂರಾಬಟ್ಟೆಯಾಗಿದೆ.
ಚನ್ನಪಟ್ಟಣದ ಬೊಂಬೆಗಳನ್ನ ಕೇಳುವವರು ಇಲ್ಲದೆ ಬೊಂಬೆ ತಯಾರಿಕರು ಹಾಗೂ ಮಾರಾಟಗಾರರ ಬದುಕು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್ಡೌನ್ಗೂ ಮೊದಲು ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದ್ರೆ ಈಗ ಇಡೀ ತಿಂಗಳಲ್ಲಿ ಅಷ್ಟು ವ್ಯಾಪಾರವಾಗುತ್ತಿಲ್ಲ. ಜೊತೆಗೆ ಈಗಾಗಲೇ ಬೇರೆ ಬೇರೆ ಕಡೆಗೆ ರಫ್ತು ಮಾಡಲು ತಯಾರು ಮಾಡಿರುವ ಬೊಂಬೆಗಳಿಗೂ ಕೂಡ ಬೇಡಿಕೆ ಕುಸಿದಿದೆ.
ಖಾಲಿ ಹೊಡೆಯುತ್ತಿವೆ ಬೊಂಬೆ ಅಂಗಡಿಗಳು ಅಂದಹಾಗೆ, ಜಿಲ್ಲೆಯ ಚನ್ನಪಟ್ಟಣದ ಬೊಂಬೆಗಳು ಎಂದರೇ ರಾಜ್ಯ, ದೇಶ, ವಿದೇಶಗಳಲ್ಲು ಕೂಡ ಹೆಸರು ವಾಸಿ. ಹೀಗಾಗಿ, ಚನ್ನಪಟ್ಟಣದ ಬಳಿಯಿರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೂರಾರು ಬೊಂಬೆ ಅಂಗಡಿಗಳನ್ನು ನೋಡಬಹುದು.
ಹೆದ್ದಾರಿಯಲ್ಲಿ ಪ್ರಯಾಣಿಸುವ ಸಾವಿರಾರು ಜನರು ಬೊಂಬೆಗಳನ್ನ ಖರೀದಿಸಿ ಹೋಗುತ್ತಿದ್ದರು. ಆದ್ರೆ ಈಗ ಕೊರೊನಾ ಕಾಟದಿಂದ ಅವರ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ ಅಂಗಡಿಗಳಲ್ಲಿ ಬೊಂಬೆಗಳನ್ನ ಕೇಳುವವರೇ ಇಲ್ಲದಂತಾಗಿದೆ. ಅಂಗಡಿ ಮಾಲೀಕರು ವ್ಯಾಪಾರವಿಲ್ಲದೆ ಪರದಾಡುತ್ತಿದ್ದಾರೆ.
ಒಟ್ಟಾರೆ, ತಲೆತಲಾಂತರಗಳಿಂದ ಬೊಂಬೆ ತಯಾರಿಕಾ ಉದ್ಯಮವನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಆಡಿಸಿಯೇ ನೋಡು, ಬೀಳಿಸಿಯೇ ನೋಡು. ಎಂದು ಸೋಲದು, ಸೋತು ತಲೆಯಬಾಗದು ಎನ್ನುತ್ತಿದ್ದ ಚನ್ನಪಟ್ಟಣದ ಬೊಂಬೆ ತಯಾರಿಕಾ ಉದ್ಯಮ ಇದೀಗ ಲಾಕ್ಡೌನ್ ಸಂಕಷ್ಟಕ್ಕೆ ತಲೆಬಾಗಿ ಮಣಿಯುವ ಸ್ಥಿತಿ ತಲುಪುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕರಿತು ಆದಷ್ಟು ಬೇಗ ಗಮನ ಹರಿಸಿ ಸೂಕ್ತ ನೆರವು ನೀಡಬೇಕು ಎಂಬು ಇಲ್ಲಿನವರ ಮನವಿ. -ಪ್ರಶಾಂತ್ ಹುಲಿಕೆರೆ
Published On - 7:37 pm, Tue, 18 August 20