ಇದ್ಯಾವ ಸೀಮೆ ನ್ಯಾಯ ಸಚಿವರೇ? ನೀವೇನು ಕರ್ನಾಟಕಕ್ಕೆ ಸಚಿವರಾ? ಅಥವಾ ಚಿಕ್ಕಮಗಳೂರಿಗೆ ಮಾತ್ರನಾ?

ನವದೆಹಲಿ: ಚಿಕ್ಕಮಗಳೂರು ಶಾಸಕ ಹಾಗೂ ಕರ್ನಾಟಕದ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಇವತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಮಾಡಿ ಚಿಕ್ಕಮಗಳೂರು ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಪ್ರಕಟಿಸುವಂತೆ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾದ ಸಿಟಿ ರವಿ, ಕರ್ನಾಟಕದಲ್ಲಾಗುತ್ತಿರುವ ಭಾರೀ ಮಳೆಯಿಂದಾಗಿ ತಮ್ಮ ತವರು ಜಿಲ್ಲೆ ಚಿಕ್ಕಮಗಳೂರು ಭಾರೀ ತೊಂದರೆಯಲ್ಲಿದೆ. ಹೀಗಾಗಿ ಚಿಕ್ಕಮಗಳೂರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿ ಟಿ ರವಿಯವರೊಂದಿಗೆ […]

ಇದ್ಯಾವ ಸೀಮೆ ನ್ಯಾಯ ಸಚಿವರೇ? ನೀವೇನು ಕರ್ನಾಟಕಕ್ಕೆ ಸಚಿವರಾ? ಅಥವಾ ಚಿಕ್ಕಮಗಳೂರಿಗೆ ಮಾತ್ರನಾ?
Guru

|

Aug 18, 2020 | 7:13 PM

ನವದೆಹಲಿ: ಚಿಕ್ಕಮಗಳೂರು ಶಾಸಕ ಹಾಗೂ ಕರ್ನಾಟಕದ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಇವತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಮಾಡಿ ಚಿಕ್ಕಮಗಳೂರು ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಪ್ರಕಟಿಸುವಂತೆ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾದ ಸಿಟಿ ರವಿ, ಕರ್ನಾಟಕದಲ್ಲಾಗುತ್ತಿರುವ ಭಾರೀ ಮಳೆಯಿಂದಾಗಿ ತಮ್ಮ ತವರು ಜಿಲ್ಲೆ ಚಿಕ್ಕಮಗಳೂರು ಭಾರೀ ತೊಂದರೆಯಲ್ಲಿದೆ. ಹೀಗಾಗಿ ಚಿಕ್ಕಮಗಳೂರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಿ ಟಿ ರವಿಯವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕೂಡಾ ಉಪಸ್ಥಿತರಿದ್ದು, ಸಿಟಿ ರವಿಯ ಮನವಿಗೆ ಬೆಂಬಲ ಸೂಚಿಸಿದರು ಎಂದು ತಿಳಿದು ಬಂದಿದೆ.

ಆದರೆ ಕರ್ನಾಟಕದ ಬಹುತೇಕ ಭಾಗವೇ ಮಳೆ ಮತ್ತು ಪ್ರವಾಹದಿಂದ ಸಂಕಷ್ಟದಲ್ಲಿರುವಾಗ ಕೇವಲ ಚಿಕ್ಕಮಗಳೂರು ಜಿಲ್ಲೆಗೆ ಸಿಟಿ ರವಿ ಸ್ಪೇಷಲ್‌ ಪ್ಯಾಕೇಜ್‌ ಕೇಳಿರೋದು ಹಲವಾರು ಪ್ರಶ್ನೆಗಳಿಗೆಡೆ ಮಾಡಿದೆ. ಇವರೇನು ಕರ್ನಾಟಕಕ್ಕೆ ಸಚಿವರಾ ಅಥವಾ ಕೇವಲ ಚಿಕ್ಕಮಗಳೂರು ಜಿಲ್ಲೆಗೆ ಮಾತ್ರ ಸಚಿವರಾ ಎಂದು ಜನರು ಮಾತನಾಡುವಂತಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada