ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೊರೊನಾ ವಾರಿಯರ್ ಬಲಿ

|

Updated on: Aug 27, 2020 | 8:31 AM

ಮೈಸೂರು: ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಕೊರೊನಾ ವಾರಿಯರ್ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೊರೊನಾ ವಾರಿಯರ್ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಆಗಸ್ಟ್ 12ರಂದು ಕಾನ್ಸ್‌ಟೇಬಲ್‌ಗೆ ಸೋಂಕು ಇರುವುದು ದೃಢವಾಗಿತ್ತು. ಹೀಗಾಗಿ ಅವರು ಹೋಮ್ ಐಸೋಲೇಷನ್ ಆಗಿದ್ದರು. ಕಾನ್ಸ್‌ಟೇಬಲ್‌ಗೆ ತೀವ್ರ ಉಸಿರಾಟ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಆಸ್ಪತ್ರೆ ಕರೆದುಕೊಂಡು ಬರಲು ಕುಟುಂಬ ಸದಸ್ಯರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ರು. ಬಳಿಕ ಆ್ಯಂಬುಲೆನ್ಸ್ ತಡವಾಗಿ ಮನೆಯ ಬಳಿ ಆಗಮಿಸಿದೆ. […]

ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೊರೊನಾ ವಾರಿಯರ್ ಬಲಿ
Follow us on

ಮೈಸೂರು: ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಕೊರೊನಾ ವಾರಿಯರ್ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೊರೊನಾ ವಾರಿಯರ್ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.

ಆಗಸ್ಟ್ 12ರಂದು ಕಾನ್ಸ್‌ಟೇಬಲ್‌ಗೆ ಸೋಂಕು ಇರುವುದು ದೃಢವಾಗಿತ್ತು. ಹೀಗಾಗಿ ಅವರು ಹೋಮ್ ಐಸೋಲೇಷನ್ ಆಗಿದ್ದರು. ಕಾನ್ಸ್‌ಟೇಬಲ್‌ಗೆ ತೀವ್ರ ಉಸಿರಾಟ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಆಸ್ಪತ್ರೆ ಕರೆದುಕೊಂಡು ಬರಲು ಕುಟುಂಬ ಸದಸ್ಯರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ರು. ಬಳಿಕ ಆ್ಯಂಬುಲೆನ್ಸ್ ತಡವಾಗಿ ಮನೆಯ ಬಳಿ ಆಗಮಿಸಿದೆ. ಕಾನ್ಸ್‌ಟೇಬಲ್‌ನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆದರೆ ಆಸ್ಪತ್ರೆ ಬಳಿ ಆ್ಯಂಬುಲೆನ್ಸ್‌ನಿಂದ ಆಸ್ಪತ್ರೆಯೊಳಗೆ ಸೋಂಕಿತ ವ್ಯಕ್ತಿಯನ್ನ ಶಿಫ್ಟ್ ಮಾಡಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಯ್ತು.

ಸಿಬ್ಬಂದಿಯೊಬ್ಬರೇ ಪರದಾಡುತ್ತಿದ್ದರೂ ಸಹಾಯಕ್ಕೆ ಯಾರೊಬ್ಬರು ಬಂದಿಲ್ಲ. ಹೀಗಾಗಿ ಸೋಂಕಿತ ಕಾನ್ಸ್‌ಟೇಬಲ್‌ನನ್ನು ಕಷ್ಟಪಟ್ಟು ತಡವಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ರು. ಆಸ್ಪತ್ರೆಯ ಈ ವರ್ತನೆಗೆ ಸಮಯಕ್ಕೆ ಸಿರಿಯಾಗಿ ಆಸ್ಪತ್ರೆ ಸೇರಿಸಿ ಚಿಕಿತ್ಸೆ ನೀಡದಿದ್ದಕ್ಕೆ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊರೊನಾ ವಾರಿಯರ್ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.