ಕೊವಿಡ್-19: ರಾಜ್ಯದಲ್ಲಿಂದು 9 ಸಾವು ಮತ್ತು 952 ಹೊಸ ಪ್ರಕರಣಗಳು
ರೂಪಾಂತರಿತ ಕೊರೊನಾ ವೈರಸ್ ಕರ್ನಾಟಕಕ್ಕೆ ಲಗ್ಗೆಯಿಟ್ಟಿರುವ ಭೀತಿಯ ನಡುವೆ ರಾಜ್ಯದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಕೊಂಚ ಹೆಚ್ಚಾಗಿದೆ. ಜನ ಯಾವ ಕಾರಣಕ್ಕೂ ಮಾರ್ಗಸೂಚಿಗಳನ್ನು, ಸುರಕ್ಷತಾ ಕ್ರಮಗಳನ್ನು ಅಸಡ್ಡೆ ಮಾಡಬಾರದು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗುರುವಾರ ಸಾಯಂಕಾಲ ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ 9 ಜನ ಬಲಿಯಾಗಿದ್ದಾರೆ ಮತ್ತು ಹೊಸದಾಗಿ 952 ಜನರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇದುವರೆಗೆ ಕೊವಿಡ್ ಮಹಾಮಾರಿಯಿಂದ 12,090 ಜನ ಮೃತಪಟ್ಟಿದ್ದು ಸೋಂಕಿತರ ಸಂಖ್ಯೆ 9,19,496ಕ್ಕೇರಿದೆ.
ಸೋಂಕಿತರ ಪೈಕಿ 8,96,116 ಜನ ಗುಣಮುಖರಾಗಿದ್ದಾರೆ, ಮಿಕ್ಕಿದ11,271 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಗೆಯೇ, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಕೊವಿಡ್-19 ವ್ಯಾಧಿಗೆ 6 ಜನರ ಬಲಿಯಾಗಿದ್ದಾರೆ ಮತ್ತು 554 ಜನರಿಗೆ ಸೋಂಕು ತಗುಲಿದೆ. ನಗರದಲ್ಲಿ ಕೊವಿಡ್-19 ವ್ಯಾಧಿಯಿಂದ ಈವರೆಗೆ 4,317 ಜನ ಸತ್ತಿದ್ದಾರೆ ಮತ್ತು ಸೋಂಕು ಪೀಡಿತರ ಸಂಖ್ಯೆ 3,88,386 ತಲುಪಿದೆ.
ಸೋಂಕಿತರ ಪೈಕಿ 3,76,835 ಜನರು ಗುಣಮುಖರಾಗಿದ್ದು ಮಿಕ್ಕಿದ 7,233 ಸೋಂಕಿತರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪ್ರಾಪ್ತವಾಗಿರುವ ಮಾಹಿತಿ ತಿಳಿಸುತ್ತದೆ.




