Karnataka Assembly Polls; ಸಿಟಿ ರವಿ ಹಣ ಮತ್ತು ಅಧಿಕಾರದ ಬಲದೊಂದಿಗೆ ಚುನಾವಣೆ ಎದುರಿಸಿದರೆ ನಾನು ಜನಬಲದೊಂದಿಗೆ ಸ್ಪರ್ಧಿಸಿದ್ದೆ: ಹೆಚ್ ಡಿ ತಮ್ಮಯ್ಯ
ಶಾಸಕಾಂಗ ಪಕ್ಷದ ನಾಯಕನ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ, ಸಿಟಿ ರವಿಯನ್ನು ಸೋಲಿಸಿರುವ ಕಾರಣಕ್ಕೆ ದೊಡ್ಡ ನಾಯಕ ಬಿಂಬಿಸಿಕೊಳ್ಳುವುದಿಲ್ಲ ಎಂದು ತಮ್ಮಯ್ಯ ಹೇಳಿದರು.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೆವಿವೇಟ್ ಅನಿಸಿದ್ದ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಸಿಟಿ ರವಿಯನ್ನು (CT Ravi) ಚಿಕ್ಕಮಗಳೂರಲ್ಲಿ ಸೋಲಿಸಿದ ಹೆಚ್ ಡಿ ತಮ್ಮಯ್ಯ (HD Thammaiah) ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ತಮ್ಮಯ್ಯ, 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರವಿಯವರು ಅಧಿಕಾರ ಮತ್ತು ಹಣದ ಮದದಿಂದ ಚುನಾವಣೆ ಎದುರಿಸಿದರೆ ತಾನು ಜನರ ಪ್ರೀತಿ-ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದೆ ಎಂದರು. ಸಿಎಲ್ ಪಿ ಲೀಡರ್ (CLP leader) ಯಾರಾಗುತ್ತಾರೆ ಎಂದು ಕೇಳಿದ ಪ್ರಶ್ನೆಗೆ ತಮ್ಮಯ್ಯ, ತಾನು ಈಗಷ್ಟೇ ಕಾಂಗ್ರೆಸ್ ಬಂದಿರೋದು, ಶಾಸಕಾಂಗ ಪಕ್ಷದ ನಾಯಕನ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ, ಸಿಟಿ ರವಿಯನ್ನು ಸೋಲಿಸಿರುವ ಕಾರಣಕ್ಕೆ ದೊಡ್ಡ ನಾಯಕ ಬಿಂಬಿಸಿಕೊಳ್ಳುವುದಿಲ್ಲ, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ