Karnataka Assembly Polls; ಸೋಲುವ ಭೀತಿಯಲ್ಲಿರುವ ಸಿಟಿ ರವಿ ಕ್ಷೇತ್ರದಲ್ಲಿ ಹಣ ಮತ್ತು ಹೆಂಡದ ಹೊಳೆ ಹರಿಸುತ್ತಿದ್ದಾರೆ: ಹೆಚ್ ಡಿ ತಮ್ಮಯ್ಯ, ಕಾಂಗ್ರೆಸ್ ನಾಯಕ
ರವಿಯವರಿಗೆ ನ್ಯಾಯಯುತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಸಾಧ್ಯವಿಲ್ಲ. ಅವರು ಲಿಂಗಾಯತ, ಕುರುಬ ಸಮುದಾಯಗಳ ವೈರತ್ವ ಕಟ್ಟಿಕೊಂಡಿದ್ದಾರೆ ಎಂದು ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರು: ಕಾಂಗ್ರೆಸ್ ಧುರೀಣ ಹೆಚ್ ಡಿ ತಮ್ಮಯ್ಯ (HD Tammaiah) ಹಿಂದೊಮ್ಮೆ ಬಿಜೆಪಿ ಶಾಸಕ ಸಿಟಿ ರವಿಯವರ (CT Ravi) ಅಪ್ತವಲ್ಲಯದಲ್ಲಿ ಗುರುತಿಸಿಕೊಂಡವರು. ಆದರೆ ತಮ್ಮಯ್ಯ ಈಗ ಕಾಂಗ್ರೆಸ್ ನಲ್ಲಿದ್ದಾರೆ ಮತ್ತು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಅಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ತಮ್ಮಯ್ಯ, ರವಿಯವರಿಗೆ ಸೋಲಿನ ಭೀತಿ ಹುಟ್ಟಿಕೊಂಡಿದೆ, ಹಾಗಾಗೇ, ಮತದಾರರಿಗೆ ಹಣ, ಸೀರೆ ಮತ್ತು ಮದ್ಯವನ್ನು ಹಂಚುತ್ತಿದ್ದಾರೆ ಎಂದು ಹೇಳಿದರು. ರವಿಯವರಿಗೆ ನ್ಯಾಯಯುತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಸಾಧ್ಯವಿಲ್ಲ. ಅವರು ಲಿಂಗಾಯತ, ಕುರುಬ ಸಮುದಾಯಗಳ ವಿರುದ್ಧ ಮತ್ತು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಹೆಚ್ ಡಿ ದೇವೇಗೌಡರ (HD Devegowda) ವಿರುದ್ಧ ಸಲ್ಲದ ಕಾಮೆಂಟ್ ಗಳನ್ನು ಮಾಡಿ ಎಲ್ಲರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ ಎಂದು ತಮ್ಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕೆಲಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

