ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣಪಕ್ಷ, ಸಪ್ತಮಿ ತಿಥಿ, ಶುಕ್ರವಾರ, 05 ಮಾರ್ಚ್ 2021. ಅನೂರಾಧ ನಕ್ಷತ್ರ, ರಾಹುಕಾಲ: ಬೆಳಿಗ್ಗೆ 10: 58 ಇಂದ ಮಧ್ಯಾಹ್ನ 12 ಗಂ: 27ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.31. ಸೂರ್ಯಾಸ್ತ: ಸಂಜೆ 6.23.
ದಿನಾಂಕ 04-03-2021ರ ಗುರುವಾರದ ರಾಶಿಭವಿಷ್ಯ
ಮೇಷ: ಮೇಲಧಿಕಾರಿಗಳ ಕಿರಿ ಕಿರಿಯಿಂದ ಮನಸ್ಸಿಗೆ ಬೇಸರವಾಗಲಿದೆ. ಉದ್ಯೋಗ ಬದಲಾವಣೆಗೆ ಮನಸ್ಸು ಬಯಸುವುದು. ಕ್ರಿಯಾತ್ಮಕ ಕೆಲಸಗಳಿಗೆ ಚಾಲನೆ ನೀಡಿ. ಮಹಿಳೆಯರಿಗೆ ಅಪವಾದದ ಭೀತಿಯಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಶುಭ ಸಂಖ್ಯೆ: 8
ವೃಷಭ: ಹಿರಿಯರಿಗೆ ದೇವಾಲಯ ಸಂದರ್ಶನ ಯೋಗವಿದೆ. ಸರಕಾರಿ ಲೆಕ್ಕಪತ್ರಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ನಿಮ್ಮ ಮೇಲಿರಲಿದೆ. ಅನಿರೀಕ್ಷಿತವಾಗಿ ಧನಲಾಭವಾಗಲಿದೆ. ದೇವತಾ ಕಾರ್ಯಗಳಿಗೆ ಚಾಲನೆ ನೀಡಲಿದ್ದೀರಿ. ವಿನಾಕಾರಣ ಖರ್ಚು ವೆಚ್ಚ ಮಾಡಬೇಡಿ. ಶುಭ ಸಂಖ್ಯೆ: 2
ಮಿಥುನ: ದಾಯಾದಿಗಳೊಂದಿಗೆ ನಿಮ್ಮ ಕಲಹಕ್ಕೆ ಹಿರಿಯರ ಮಧ್ಯಸ್ಥಿಕೆಯಿಂದ ಪರಿಹಾರ ಸಿಗಲಿದೆ. ಶುಭ ಮಂಗಲ ಕಾರ್ಯ ನೆರವೇರಲಿದ್ದು, ಮನಸ್ಸಯಲ್ಲಿ ಬಂಧು ಮಿತ್ರರ ಆಗಮನದಿಂದ ಸಂತಸದ ವಾತಾವರಣವಿರಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ. ಶುಭ ಸಂಖ್ಯೆ: 5
ಕರ್ಕಟಕ: ಅನುವಂಶಿಕ ಖಾಯಿಲೆಗಳು ಮತ್ತೆ ಮರುಕಳಿಸಲಿವೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಇಷ್ಟಮಿತ್ರರ ಭೇಟಿಯೋಗವಿದೆ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಕಡೆಗೆ ಗಮನ ಹರಿಸಲಿದ್ದಾರೆ. ಶುಭ ಸಂಖ್ಯೆ: 7
ಸಿಂಹ: ನೂತನ ದಂಪತಿಗಳಿಗೆ ಸಂತಾನ ಫಲ ಭಾಗ್ಯವಿದೆ. ಕೌಟುಂಬಿಕವಾಗಿ ಸುಮಧುರ ಕ್ಷಣಗಳನ್ನು ಕಳೆಯಲಿದ್ದೀರಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಆರೋಗ್ಯ ಸಮಸ್ಯೆಗಳಾದೀತು. ಕಠಿಣಪರಿಶ್ರಮ ಪಟ್ಟರೆ ತಕ್ಕ ಫಲ ಸಿಕ್ಕೀತು. ಶುಭ ಸಂಖ್ಯೆ: 1
ಕನ್ಯಾ: ಸರ್ಕಾರಿ ಅಧಿಕಾರಿಗಳಿಗೆ ಉತ್ತಮ ಆದಾಯ ಗಳಿಕೆಯಾಗಲಿದೆ. ಕೆಟ್ಟ ಸ್ನೇಹ ಸಂಗದಿಂದ ದೂರವಿರುವುದೇ ಉತ್ತಮ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸಲಿದ್ದೀರಿ. ಮಹಿಳೆಯರಿಗೆ ಬಿಡುವಿಲ್ಲದ ಕೆಲಸದಿಂದ ದೇಹಾಯಾಸವಾಗಬಹುದು. ಶುಭ ಸಂಖ್ಯೆ: 8
ತುಲಾ: ಬಂಧು ವರ್ಗದವರ ಜತೆಗೂಡಿ ಶುಭ ಮಂಗಲ ಕಾರ್ಯದಲ್ಲಿ ಸಂಭ್ರಮಿಸಲಿದ್ದೀರಿ. ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಒದಗಿ ಬರಲಿವೆ. ಶುಭ ಸಂಖ್ಯೆ: 3
ವೃಶ್ಚಿಕ: ಪೋಷಕರಿಗೆ ಮಕ್ಕಳ ವಿದ್ಯಾಭ‍್ಯಾಸದ ಬಗ್ಗೆ ಚಿಂತೆ ಕಾಡಲಿದೆ. ಹಿರಿಯರ ಮನಸ್ಸಿಗೆ ನೋವುಂಟು ಮಾಡದಂತೆ ನೋಡಿಕೊಳ್ಳಿ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು. ಎಚ್ಚರಿಕೆ ಅಗತ್ಯ. ಶುಭ ಸಂಖ್ಯೆ: 6
ಧನು: ವೃತ್ತಿರಂಗದಲ್ಲಿ ಎಲ್ಲವೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯುವುದರಿಂದ ಚಿಂತೆ ಬೇಡ. ವಿದ್ಯಾರ್ಥಿಗಳಿಗೆ ಏಕಾಗ್ರತತೆಯ ಕೊರತೆ ಉಂಟಾಗಲಿದೆ. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳ ಬಗ್ಗೆ ಎಚ್ಚರಿಕೆ ವಹಿಸಿ. ಚಿಂತೆ ಬೇಡ. ಶುಭ ಸಂಖ್ಯೆ: 4
ಮಕರ: ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಆದರೆ ಮಾತಿನ ಮೇಲೆ ನಿಗಾ ಇರಲಿ. ನೂತನ ದಂಪತಿಗಳು ದೇವಾಲಯ ಸಂದರ್ಶನ ಮಾಡಲಿದ್ದಾರೆ. ಶುಭ ಸಂಖ್ಯೆ: 6
ಕುಂಭ: ಮಹಿಳೆಯರಿಗೆ ಬಿಡುವಿಲ್ಲದ ಕೆಲಸದಿಂದ ದೈಹಿಕ, ಮಾನಸಿಕ ಶ್ರಮ ತಪ್ಪದು. ಆದರೆ ನಿಮ್ಮ ವರ್ತನೆ, ಮಾತಿನ ಮೇಲೆ ತಾಳ್ಮೆಯಿಲ್ಲದೇ ಹೋದರೆ ಇತರರ ಮನಸ್ಸಿಗೆ ಬೇಸರವಾದೀತು. ಮಕ್ಕಳ ಆರೋಗ್ಯ ಚಿಂತೆಗೆ ಕಾರಣವಾದೀತು. ದೇವತಾ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 2
ಮೀನ: ಇಷ್ಟ ಮಿತ್ರರೊಂದಿಗೆ ಪ್ರವಾಸ ಮಾಡಲಿದ್ದೀರಿ. ಮನಸ್ಸಿಗೆ ಖುಷಿ ಕೊಡುವ ಕೆಲಸ ಮಾಡುವುದರಿಂದ ನೆಮ್ಮದಿ ಪಡೆಯುವಿರಿ. ಮಹಿಳೆಯರಿಗೆ ಉಡುಗೊರೆಗಳು ಸಿಗಲಿವೆ. ಕಿರು ಓಡಾಟ ನಡೆಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಶುಭ ಸಂಖ್ಯೆ:7
ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937