AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

24 ವಾರಗಳ ಅವಧಿಗೂ ಮೀರಿದ್ದ ಭ್ರೂಣ ತೆಗೆಯಲು ಅನುಮತಿ ನೀಡಿದ ದೆಹಲಿ ಹೈಕೋರ್ಟ್​; ಮಹಿಳೆಗೆ ಅಪಾಯವಿದ್ದರೂ ಒಪ್ಪಿಗೆ ನೀಡಿದ ಪತಿ

ಮಹಿಳೆ ಗರ್ಭಿಣಿಯಾಗಿ ಆರು ತಿಂಗಳು ಕಳೆದಿತ್ತು. ಆದರೆ ಈಗ ವೈದ್ಯಕೀಯ ತಪಾಸಣೆ ವೇಳೆ ಭ್ರೂಣ ಅಸಹಜವಾಗಿರುವುದು ಬೆಳಕಿಗೆ ಬಂದಿತ್ತು. ಮಿದುಳಿನಲ್ಲಿ ನೀರು ತುಂಬುವ ರೋಗದಿಂದ ಬಳಲುತ್ತಿರುವುದು ಗೊತ್ತಾಯಿತು.

24 ವಾರಗಳ ಅವಧಿಗೂ ಮೀರಿದ್ದ ಭ್ರೂಣ ತೆಗೆಯಲು ಅನುಮತಿ ನೀಡಿದ ದೆಹಲಿ ಹೈಕೋರ್ಟ್​; ಮಹಿಳೆಗೆ ಅಪಾಯವಿದ್ದರೂ ಒಪ್ಪಿಗೆ ನೀಡಿದ ಪತಿ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: Apr 06, 2021 | 5:32 PM

ನವದೆಹಲಿ: ಭ್ರೂಣಹತ್ಯೆ ಮಹಾಪಾಪ ಎನ್ನಲಾಗುತ್ತದೆ. ಕಾನೂನಿನಲ್ಲೂ ಇದಕ್ಕೆ ಅವಕಾಶ ಇಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ 24 ವಾರಗಳವರೆಗಿನ ಅಂದರೆ 6ತಿಂಗಳವರೆಗಿನ ಗರ್ಭಪಾತ ಮಾಡುವ ಮಸೂದೆ ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದೆ. ಆದರೆ ವೈದ್ಯಕೀಯವಾಗಿ ಅನಿವಾರ್ಯ ಪರಿಸ್ಥಿತಿ ಇದ್ದರೆ ಮಾತ್ರ ಹೀಗೆ ಗರ್ಭಪಾತ ಮಾಡಲು ಅವಕಾಶ ಇದೆ. ಇದೀಗ ಮಹಿಳೆಯೊಬ್ಬರ 24 ವಾರಗಳಿಗೂ ಮೀರಿದ ಅವಧಿಯ ಗರ್ಭವನ್ನು ತೆಗೆಸಲು ದೆಹಲಿ ಹೈಕೋರ್ಟ್​ ಅವಕಾಶ ನೀಡಿದೆ.

ಮಹಿಳೆಯ ಹೊಟ್ಟೆಯಲ್ಲಿದ್ದ ಭ್ರೂಣ ತುಂಬ ಅಸಹಜವಾಗಿ ಬೆಳವಣಿಗೆಯಾಗಿದೆ ಎಂಬ ವೈದ್ಯಕೀಯ ವರದಿಯನ್ನು ಗಮನಿಸಿ, ನ್ಯಾಯಾಧೀಶೆ ಪ್ರತಿಭಾ ಎಂ.ಸಿಂಗ್ ಈ ತೀರ್ಪು ನೀಡಿದ್ದಾರೆ. ಈ ಮಹಿಳೆ ಹೃದ್ರೋಗಿಯಾಗಿದ್ದು, ಗರ್ಭಪಾತದ ವೇಳೆ ಅಪಾಯವೂ ಇದೆ ಎಂಬುದಾಗಿಯೂ ವೈದ್ಯರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ತೀರ್ಪು ನ್ಯಾಯಾಧೀಶೆ ಪ್ರತಿಭಾ ಎಂ.ಸಿಂಗ್​ ಅವರು ತೀರ್ಪು ನೀಡುವ ಮುನ್ನ, ಮಹಿಳೆಯ ಪತಿಯೊಂದಿಗೆ ಮಾತುಕತೆ ನಡೆಸಿದ್ದು, ಎಲ್ಲ ಅಪಾಯಗಳನ್ನೂ ಎದುರಿಸಲು ಸಿದ್ಧರಿದ್ದೀರಾ ಎಂದು ಕೇಳಿದ್ದಾರೆ. ಅವರೂ ಒಪ್ಪಿಗೆ ನೀಡಿದ ಬಳಿಕವಷ್ಟೇ ಗರ್ಭಪಾತಕ್ಕೆ ಅನುಮತಿ ನೀಡಿದ್ದಾರೆ.

ಮಹಿಳೆ ಗರ್ಭಿಣಿಯಾಗಿ ಆರು ತಿಂಗಳು ಕಳೆದಿತ್ತು. ಆದರೆ ಈಗ ವೈದ್ಯಕೀಯ ತಪಾಸಣೆ ವೇಳೆ ಭ್ರೂಣ ಅಸಹಜವಾಗಿರುವುದು ಬೆಳಕಿಗೆ ಬಂದಿತ್ತು. ಮಿದುಳಿನಲ್ಲಿ ನೀರು ತುಂಬುವ ರೋಗ ಹಾಗೂ ಮುಖದ ಹೆಮ್ರೇಜ್​ನಿಂದ ಬಳಲುತ್ತಿರುವುದು ಗೊತ್ತಾಯಿತು. ಹಾಗಾಗಿ ಅದನ್ನು ತೆಗೆಸುವುದೇ ಒಳಿತು ಎಂದು ನಿರ್ಧರಿಸಿದ್ದರು. 24ವಾರಗಳಿಗೂ ಮೀರಿರುವ ಕಾರಣ, ಅನುಮತಿ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಏಮ್ಸ್​ನ ವೈದ್ಯರ ತಂಡವನ್ನು ನೇಮಕ ಮಾಡಿ, ಮಹಿಳೆಯ ಆರೋಗ್ಯ ಸ್ಥಿತಿಗತಿ ಪರಿಶೀಲನೆ ಮಾಡುವಂತೆ ಸೂಚಿಸಿತ್ತು. ಈ ತಂಡ ನೀಡಿದ ವರದಿ ಅನ್ವಯ ಗರ್ಭಪಾತಕ್ಕೆ ಅವಕಾಶ ನೀಡಿದೆ.

ಇದನ್ನೂ ಓದಿ: Suresh Raina: ಲೈಫು ತುಂಬಾ ಚಿಕ್ಕದು ಎಂದ ಸುರೇಶ್ ರೈನಾ; ಸೋಷಿಯಲ್ ಮೀಡಿಯಾ ಪೋಸ್ಟ್​ಗೆ ಅಭಿಮಾನಿಗಳು ಖುಷ್

Collateral free loan: ಪೇಪಾಲ್- ಫ್ಲೆಕ್ಸಿಲೋನ್ಸ್ ಸೇರಿ ನೀಡಲಿವೆ 50,000 ರೂ.ನಿಂದ 1,00,00,000 ತನಕ ಟರ್ಮ್ ಸಾಲ