45 ವರ್ಷ ಮೇಲ್ಪಟ್ಟ, ಕೇಂದ್ರ ಸರ್ಕಾರಿ ನೌಕರರು ಕೊವಿಡ್-19 ಲಸಿಕೆ ಸ್ವೀಕರಿಸಲು ಸರ್ಕಾರದ ಸೂಚನೆ
ಜಗತ್ತಿನ ಹಲವು ದೇಶಗಳಲ್ಲಿ ಕೊರೊನಾ ಎರಡನೆ ಅಲೆ ಎದ್ದಿದ್ದು, ಭಾರತವೂ ಹೊರತಾಗಿಲ್ಲ. ಒಂದು ದಿನದಲ್ಲಿ ದಾಖಲಾಗುವ ಕೇಸ್ಗಳ ಸಂಖ್ಯೆ ಲಕ್ಷ ದಾಟುತ್ತಿದೆ. ಇಂದು 96,982 ಪ್ರಕರಣಗಳು ದಾಖಲಾಗಿದ್ದು, 442 ಮಂದಿ ಮೃತಪಟ್ಟಿದ್ದಾರೆ.
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಸಿಕ್ಕಾಪಟೆ ಹೆಚ್ಚುತ್ತಿದೆ. ಲಸಿಕೆ ವಿತರಣೆ ಮೂರನೇ ಹಂತದಲ್ಲಿ ನಡೆಯುತ್ತಿದ್ದು, 65 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟು, ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರಿ ನೌಕರರು, 45 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆಯನ್ನು ತೆಗೆದುಕೊಳ್ಳಿ ಎಂದು ಸರ್ಕಾರ ಹೇಳಿದೆ.
45ವರ್ಷ ಹಾಗೂ ಅದರ ಮೇಲ್ಪಟ್ಟ, ಕೇಂದ್ರ ಸರ್ಕಾರಿ ನೌಕರರು ಎಲ್ಲರೂ ಕೊವಿಡ್ 19 ಲಸಿಕೆಯನ್ನು ತೆಗೆದುಕೊಳ್ಳಬೇಕು. ಕೊವಿಡ್ ಹರಡುವಿಕೆಯನ್ನು ತಡೆಗಟ್ಟಲು ಇದು ಪರಿಣಾಮಕಾರಿಯಾಗಿರುತ್ತದೆ ಎಂದು ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ. ಸರ್ಕಾರದ ಆದೇಶದ ಅನ್ವಯ ಪ್ರತಿಯೊಬ್ಬರೂ, ಸ್ವಯಂಪ್ರೇರಿತರಾಗಿ ಹೋಗಿ ಲಸಿಕೆ ತೆಗೆದುಕೊಳ್ಳಬೇಕಾಗುತ್ತದೆ.
ಜಗತ್ತಿನ ಹಲವು ದೇಶಗಳಲ್ಲಿ ಕೊರೊನಾ ಎರಡನೆ ಅಲೆ ಎದ್ದಿದ್ದು, ಭಾರತವೂ ಹೊರತಾಗಿಲ್ಲ. ಒಂದು ದಿನದಲ್ಲಿ ದಾಖಲಾಗುವ ಕೇಸ್ಗಳ ಸಂಖ್ಯೆ ಲಕ್ಷ ದಾಟುತ್ತಿದೆ. ಇಂದು 96,982 ಪ್ರಕರಣಗಳು ದಾಖಲಾಗಿದ್ದು, 442 ಮಂದಿ ಮೃತಪಟ್ಟಿದ್ದಾರೆ. ಕೊವಿಡ್ 19 ರೂಪಾಂತರ ಸೋಂಕಿತರಿಂದ ಹಾಗೂ ಮಾಸ್ಕ್, ಸಾಮಾಜಿಕ ಅಂತರ ನಿಯಮ ಪಾಲಿಸದವರಿಂದಲೇ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲಿ ಮಹಾರಾಷ್ಟ್ರದಲ್ಲೇ ಸೋಂಕಿನ ಸಂಖ್ಯೆ ಹೆಚ್ಚಾಗಿದೆ. ಇಂದು 47,288 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಅಲ್ಲಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, 25 ವರ್ಷ ಮೀರಿದವರಿಗೂ ಲಸಿಕೆ ಹಾಕಲು ಅವಕಾಶ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: Assam elections 2021: ಅಸ್ಸಾಂ ವಿಧಾನಸಭೆ ಚುನಾವಣೆಯ ಕೊನೇ ಹಂತದ ಮತದಾನ ಮುಕ್ತಾಯ, ಶೇ 82 ಮತದಾನ
ಬೇರೆ ಬೇರೆ ತಂಡದಲ್ಲಿದ್ರೂ ದಿವ್ಯಾ-ದಿವ್ಯಾ ಹೊಸ ಗೇಮ್ ಪ್ಲಾನ್; ರೋಲ್ ಮಾಡೆಲ್ ಆಗೋ ಆಸೆಯಲ್ಲಿ ದಿವ್ಯಾ ಉರುಡುಗ