Assam elections 2021: ಅಸ್ಸಾಂ ವಿಧಾನಸಭೆ ಚುನಾವಣೆಯ ಕೊನೇ ಹಂತದ ಮತದಾನ ಮುಕ್ತಾಯ, ಶೇ 82 ಮತದಾನ

Assam Voting Turnout: ಕೊನೆಯ ಹಂತದ ಚುನಾವಣೆ ನಡೆದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ರಾಜಕಾರಣಿಗಳಾದ ಹಿಮಾಂತ ಬಿಸ್ವ ಶರ್ಮಾ, ಅಸ್ಸಾಂ ಬಿಜೆಪಿ ಅಧ್ಯಕ್ಷ ರಂಜಿತ್ ದಾಸ್, ಎಐಯುಡಿಎಫ್ ನಾಯಕ ಅಮಿನುಲ್ ಇಸ್ಲಾಂ, ಕಾಂಗ್ರೆಸ್ ನ ಹಿರಿಯ ನಾಯಕ ರೆಕಿಬುದ್ದೀನ್ ಅಹಮದ್, ಬಿಪಿಎಫ್ ಹಿರಿಯ ನಾಯಕ ಚಂದ್ರ ಬ್ರಹ್ಮ, ಪ್ರಮೀಳಾ ಬ್ರಹ್ಮ ಕಣದಲ್ಲಿದ್ದಾರೆ.

Assam elections 2021: ಅಸ್ಸಾಂ ವಿಧಾನಸಭೆ ಚುನಾವಣೆಯ ಕೊನೇ ಹಂತದ ಮತದಾನ ಮುಕ್ತಾಯ, ಶೇ 82 ಮತದಾನ
ಅಸ್ಸಾಂ ವಿಧಾನಸಭೆ ಚುನಾವಣೆ
Rashmi Kallakatta

|

Apr 06, 2021 | 8:02 PM

ದಿಸ್ಪುರ್: ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಕೊನೆಯ ಹಂತದ ಮತದಾನ ಮಂಗಳವಾರ ಮುಕ್ತಾಯವಾಗಿದೆ. 126 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆದಿದ್ದು 337 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 25 ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಕೊನೆಯ ಹಂತದ ಚುನಾವಣೆ ನಡೆದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ರಾಜಕಾರಣಿಗಳಾದ ಹಿಮಾಂತ ಬಿಸ್ವ ಶರ್ಮಾ, ಅಸ್ಸಾಂ ಬಿಜೆಪಿ ಅಧ್ಯಕ್ಷ ರಂಜಿತ್ ದಾಸ್, ಎಐಯುಡಿಎಫ್ ನಾಯಕ ಅಮಿನುಲ್ ಇಸ್ಲಾಂ, ಕಾಂಗ್ರೆಸ್ ನ ಹಿರಿಯ ನಾಯಕ ರೆಕಿಬುದ್ದೀನ್ ಅಹಮದ್, ಬಿಪಿಎಫ್ ಹಿರಿಯ ನಾಯಕ ಚಂದ್ರ ಬ್ರಹ್ಮ, ಪ್ರಮೀಳಾ ಬ್ರಹ್ಮ ಕಣದಲ್ಲಿದ್ದಾರೆ.

12 ಜಿಲ್ಲೆಗಳಲ್ಲಿರುವ 40 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿದ್ದು ಕೆಲವೆಡೆ ಸಣ್ಣ ಪುಟ್ಟ ಗಲಭೆಗಳು ನಡೆದಿರುವುದಾಗಿ ವರದಿಯಾಗಿದೆ. ಗೋಲಕ್ ಗುಂಜ್​ನ ಮತಗಟ್ಟೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಸಂಜೆ ಏಳು ಗಂಟೆಯ ಹೊತ್ತಿಗೆ ಅಸ್ಸಾಂನಲ್ಲಿ ಶೇ 82ರಷ್ಟು ಮತದಾನವಾಗಿದೆ.

ಸಲ್ಮಾರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕೊವಿಡ್ ಮಾರ್ಗಸೂಚಿ ಉಲ್ಲಂಘನೆ ಸಲ್ಮಾರ ದಕ್ಷಿಣ ವಿಧಾನಸಭಾ ಕ್ಷೇತ್ರದ 277 ಮತಗಟ್ಟೆಗಳಲ್ಲಿ ಮತದಾರರು ಕೊವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ. ಮತದಾನ ಮಾಡಲು ಬಂದಿದ್ದ ಮತದಾರರು ಮಾಸ್ಕ್ ಧರಿಸಿದ್ದರೂ ಸಾಮಾಜಿಕ ಅಂತರ ಕಾಪಾಡಲಿಲ್ಲ. ಈ ಬಗ್ಗೆ ಮಾಧ್ಯಮ ದವರೊಂದಿಗೆ ಮಾತನಾಡಿದ ಪೊಲೀಸರು ಜನರಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಒತ್ತಾಯಿಸಿದ್ದರೂ ಅವರು ಕಿವಿಗೊಡಲಿಲ್ಲ ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ ವಿಪಕ್ಷಗಳಿಗೆ ಮುಖವೇ ಇಲ್ಲ: ಪ್ರಮೋದ್ ಬೊರೊ ಅಸ್ಸಾಂನಲ್ಲಿ ವಿಪಕ್ಷಗಳಿಗೆ ಮುಖವೇ ಇಲ್ಲ. ಜನರು ಎನ್ ಡಿಎ ಗೆ ಮತಹಾಕಲಿದ್ದಾರೆ. ಯುಪಿಪಿಎಲ್ ಮತ್ತು ಬಿಜೆಪಿ ಮೂರನೇ ಹಂತದ ಚುನಾವಣೆಯಲ್ಲಿ ಎಲ್ಲ 8 ಚುನಾವಣಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬೊಡೊಲ್ಯಾಂಡ್ ಟೆರಿಟೊರಿಯಲ್ ರೀಜನ್​ನ ಪ್ರಧಾನ ಸದಸ್ಯ ಪ್ರಮೋದ್ ಬೊರೊ ಹೇಳಿದ್ದಾರೆ .

ಮೊದಲ ಬಾರಿ ಮತದಾನ ಮಾಡಲು ಉತ್ಸಾಹ ತೋರಿದ ಯುವ ಜನತೆ ಹಲವಾರು ಮತಗಟ್ಟೆಗಳಲ್ಲಿ ಮೊದಲ ಬಾರಿ ಮತದಾನ ಮಾಡಲು ಬಂದ ಯುವಕರು ಹೆಚ್ಚಾಗಿ ಕಂಡು ಬಂದರು. ಈ ಹಂತದ ಚುನಾವಣೆಯಲ್ಲಿ 4,18,537 ಮತದಾರರು ಮೊದಲ ಬಾರಿ ಮತದಾನ ಮಾಡಲು ಅರ್ಹತೆ ಪಡೆದಿದ್ದಾರೆ.

ಅಸ್ಸಾಂನ ರತಾಬಾರಿಯಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ಅಸ್ಸಾಂನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಪತ್ತೆಯಾಗಿರುವ ಹಿನ್ನಲೆಯಲ್ಲಿ ಇಲ್ಲಿನ ರತಾಬಾರಿ ವಿಧಾನಸಭಾ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿದೆ. ಮತಯಂತ್ರಗಳನ್ನು ಸಾಗಿಸುವಾಗ ನಿಯಮಾವಳಿಗಳ ಉಲ್ಲಂಘನೆ ಆಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಮತಗಟ್ಟೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿ ಅಮಾನತು ಮಾಡಲಾಗಿದೆ. ಈ ಅಚಾತುರ್ಯಕ್ಕಾಗಿ ಮೂವರು ಅಧಿಕಾರಿಗಳನ್ನೂ ಚುನಾವಣಾ ಆಯೋಗ ಅಮಾನತು ಮಾಡಿದೆ.

ಇದನ್ನೂ ಓದಿ:Assam Assembly polls: ಕೇವಲ 90 ವೋಟರ್​ಗಳಿರುವ ಮತಗಟ್ಟೆಯಲ್ಲಿ 181 ವೋಟ್​ಗಳ ಚಲಾವಣೆ! 6 ಅಧಿಕಾರಿಗಳು ಸಸ್ಪೆಂಡ್

Assembly Elections 2021: 25 ಚಿತ್ರಗಳಲ್ಲಿ 5 ರಾಜ್ಯಗಳ ಚುನಾವಣಾ ಕಣ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada