Covid-19 vaccination: ಲಸಿಕೆಗೆ ವಯೋಮಿತಿ ನಿರ್ಬಂಧ ಸಡಿಲಿಕೆ ಸಾಧ್ಯವಿಲ್ಲ ಎಂದ ಕೇಂದ್ರ ಸರ್ಕಾರ

ಭಾರತದಲ್ಲಿ ಕೊವಿಡ್​-19 ಅಭಿಯಾನದ 3ನೇ ಹಂತ ಶುರುವಾಗಿದ್ದು 45ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅದನ್ನು ನೀಡಲಾಗುತ್ತಿದೆ. ವಯೋಮಿತಿ ನಿರ್ಬಂಧ ಸಡಿಲಿಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿಗೆ ಪತ್ರ ಬರೆದಿದ್ದರು.

Covid-19 vaccination: ಲಸಿಕೆಗೆ ವಯೋಮಿತಿ ನಿರ್ಬಂಧ ಸಡಿಲಿಕೆ ಸಾಧ್ಯವಿಲ್ಲ ಎಂದ ಕೇಂದ್ರ ಸರ್ಕಾರ
ಲಸಿಕಾ ಅಭಿಯಾನ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 06, 2021 | 10:30 PM

ನವದೆಹಲಿ: ಕೊವಿಡ್​ ಸೋಂಕಿನ ಬೃಹತ್ ಅಲೆಯಲ್ಲಿ ಸಿಲುಕಿದ ಭಾರತ ಅದನ್ನು ನಿಯಂತ್ರಿಸಲು ಈ ವರ್ಷದ ಜನೆವರಿಯಲ್ಲಿ ಲಸಿಕಾ ಅಭಿಯಾನವನ್ನು ಆರಂಭಿಸಿತು. ಈಗಾಗಲೇ 1.25 ಕೋಟಿ ಜನರಿಗೆ ತಗುಲಿರುವ ಮಾಹಾಮಾರಿಯ ಸೋಂಕನ್ನು ಹೊಡೆದೋಡಿಸಲು ಲಸಿಕೆಯೇ ರಾಮಬಾಣ ಅಂತ ತಜ್ಞರು ಹೇಳಿರುವುದರಿಂದ ಲಸಿಕಾ ಅಭಿಯಾನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಸದರಿ ಅಭಿಯಾನವನ್ನು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಅಭಿಪ್ರಾಯ ಮತ್ತು ಸಲಹೆ ಮೇರೆಗೆ ಹಮ್ಮಿಕೊಳ್ಳಲಾಗಿದ್ದು ಅವರಲ್ಲಿ ಹಲವಾರು ಜನ ಲಸಿಕೆಗೆ ಅರ್ಹರ ವ್ಯಾಪ್ತಿಯನ್ನು ಹೆಚ್ಚಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ ಅವರ ಆಗ್ರಹಗಳಿಗೆ ಕೊಕ್ಕೆ ಹಾಕುತ್ತಿರುವ ಕೇಂದ್ರವು ಲಸಿಕೆ ಅಭಿಯಾನವನ್ನು ಸರ್ವರಿಗೂ ವಿಸ್ತರಿಸಲಾಗದೆಂದು ಖಂಡಿತವಾಗಿ ಹೇಳಿದೆ.

ತಮ್ಮ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ಕೇಂದ್ರದ ನಿಲುವನ್ನು ಮತ್ತಷ್ಟು ಸ್ಪಷ್ಟವಾಗಿ ವಿವರಿಸಿದ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್, ‘ಲಸಿಕೆ ನೀಡುವ ಕಾರ್ಯಕ್ರಮವನ್ನು ಯಾಕೆ ಎಲ್ಲರಿಗೂ ವಿಸ್ತರಿಸಲಾಗುತ್ತಿಲ್ಲವೆಂದು ಕೆಲವರು ಕೇಳುತ್ತಿದ್ದಾರೆ. ಈ ಅಭಿಯಾನದ ಹಿಂದೆ ಎರಡು ಗುರಿಗಳಿವೆ, ಸಾವುಗಳನ್ನು ತಡೆಯುವುದು ಮತ್ತು ಆರೋಗ್ಯ ಸಂರಕ್ಷಣೆಯ ವ್ಯವಸ್ಥೆಯನ್ನು ಕಾಪಾಡುವುದು. ನಮ್ಮ ಗುರಿ, ಲಸಿಕೆ ಬೇಕೆಂದು ಕೇಳುತ್ತಿರುವವರಿಗೆ ನೀಡುವುದಲ್ಲ; ಅದರೆ ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ನೀಡುವುದಾಗಿದೆ’ ಎಂದು ಭೂಷಣ್ ಹೇಳಿದರು.

ಭಾರತದಲ್ಲಿ ಕೊವಿಡ್​-19 ಅಭಿಯಾನದ ಮೂರನೇ ಹಂತ ಶುರುವಾಗಿದ್ದು 45ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅದನ್ನು ನೀಡಲಾಗುತ್ತಿದೆ. ಜನೆವರಿ 16ರಂದು ಶುರುವಾದ ಮೊದಲ ಹಂತದ ಅಭಿಯಾನದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಭಾರತದಲ್ಲಿ ಸಿರಮ್ ಇನ್​​ಸ್ಟಿಟ್ಯೂಟ್​ ಆಫ್ ಇಂಡಿಯಾ ತಯಾರಿಸುತ್ತಿರುವ ಕೋವಿಷೀಲ್ಡ್ ಮತ್ತು ಭಾರತ್ ಬಯೋಟೆಕ್ ಲಿಮಿಟೆಡ್ ಸಂಸ್ಥೆಯಲ್ಲಿ ತಯಾರಾಗುತ್ತಿರುವ ಕೊವ್ಯಾಕ್ಸಿನ್ ಲಸಿಕೆಗಳನ್ನು ಬಳಸಲಾಗುತ್ತಿದೆ.

Arvind Kejriwal and Uddhav Thackeray

ಅರವಿಂದ್ ಕೇಜ್ರಿವಾಲ್ ಮತ್ತು ಉದ್ಧವ್ ಠಾಕ್ರೆ

ಮಾರ್ಚ್​ ಒಂದರಂದು ಶುರುವಾದ ಎರಡನೇ ಹಂತದಲ್ಲಿ 60ಕ್ಕಿಂತ ಜಾಸ್ತಿ ವಯಸ್ಸಿನ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 45ಕ್ಕಿಂತ ಜಾಸ್ತಿ ವಯಸ್ಸಿನವರಿಗೆ ಲಸಿಕೆಗಳನ್ನು ನೀಡಲಾಯಿತು. ಕಾರ್ಯಕ್ರಮದ ಮೊದಲ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಸೋಂಕಿನ ವಿರುದ್ಧ ಹೋರಾಟದಲ್ಲಿ ನಿರತರಾಗಿರುವ ಮುಂಚೂಣಿಯ ಕಾರ್ಯಕರ್ತರು ಮತ್ತು ವಯಸ್ಸಿಗೆ ಸಂಬಂಧಿಸಿದ ಇತರ ಕಾಯಿಲೆಗಳಿಂದ ಬಳಲುತ್ತಾ ಹೆಚ್ಚಿನ ಅಪಾಯದಲ್ಲಿರುವ ಜನರನ್ನೊಳಗೊಂಡ ಸುಮಾರು 30 ಕೋಟಿ ಭಾರತೀಯ ನಾಗರಿಕರಿಗೆ ಲಸಿಕೆ ನೀಡುವುದು ಅಭಿಯಾನದ ಉದ್ದೇಶವಾಗಿತ್ತು. ಇದೀಗ 45 ವರ್ಷ ದಾಟಿದ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮತಿಸಿದೆ.

ಮಹಾರಾಷ್ಟ್ರ ಮತ್ತು ದೆಹಲಿ ಮುಖ್ಯಮಂತ್ರಿಗಳಾದ ಉದ್ಧವ್ ಠಾಕ್ರೆ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಲಸಿಕೆ ಎಲ್ಲರಿಗೂ ಸಿಗುವಂತಾಗಲಿ ಮತ್ತು ಲಸಿಕೆ ನೀಡುವ ಕೇಂದ್ರಗಳ ಸಂಖ್ಯೆ ಹೆಚ್ಚಲಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ನಂತರ ಕೇಂದ್ರದಿಂದ ಸ್ಪಷ್ಟನೆ ಬಂದಿದೆ.

ಪ್ರಧಾನಿಗೆ ಬರೆದ ಪತ್ರದಲ್ಲಿ ಕೇಜ್ರಿವಾಲ್ ಅವರು ಎರಡು ಬಗೆಯ ವಿಧಾನ ಅನುಸರಿಸುವ ಸಲಹೆ ನೀಡಿದ್ದರು. ‘ಮೊದಲನೆಯದಾಗಿ ಲಸಿಕೆ ನೀಡುವ ಕೇಂದ್ರಗಳನ್ನು ಗಣನೀಯವಾಗಿ ಹೆಚ್ಚಿಸುವ ತುರ್ತು ಅಗತ್ಯವಿದೆ. ಹಾಗಾಗಬೇಕಾದರೆ, ಲಸಿಕಾ ಕೇಂದ್ರ ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಸಡಿಲಿಸಬೇಕು. ಎರಡನೆಯದಾಗಿ ಲಸಿಕೆ ಪಡೆಯಲು ವಯಸ್ಸಿನ ಮಾನದಂಡ ತೆಗೆದುಹಾಕಿ ಅದು ಎಲ್ಲರಿಗೂ ಸಿಗುವಂತಾಗಬೇಕು. ಹೀಗೆ ಮಾಡಿದರೆ ಜನರಲ್ಲಿ ಲಸಿಕೆ ಪಡೆಯಲು ಇರುವ ಹಿಂಜರಿಕೆ ದೂರವಾಗುತ್ತದೆ. ಹೆಚ್ಚೆಚ್ಚು ಜನ ಲಸಿಕೆ ಪಡೆದುಕೊಂಡರೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ’ ಎಂದು ಕೇಜ್ರಿವಾಲ್ ತಮ್ಮ ಪತ್ರದಲ್ಲಿ  ಕೋರಿದ್ದರು.

‘ವಯೋಮಿತಿ ನಿಬಂಧನೆ  ಸಡಿಲಿಸಿದರೆ, ಸೋಂಕಿನಿಂದ ಅತಿಹೆಚ್ಚು ಪ್ರಭಾವಕ್ಕೆ ಒಳಗಾಗಿರುವ ಮಹಾರಾಷ್ಟ್ರಕ್ಕೆ ಪ್ರಯೋಜನವಾಗಲಿದೆ’ ಎಂದು ಠಾಕ್ರೆ ಅವರು ಪತ್ರದಲ್ಲಿ ಹೇಳಿದ್ದರು.

‘ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಅತಿಯಾಗಿ ಹೆಚ್ಚುತ್ತಿರುವುದರಿಂದ ಮತ್ತು ಸೋಂಕಿತರನ್ನು ಸರ್ಕಾರ ರಕ್ಷಿಸಬೇಕಿರುವುದರಿಂದ ವಯೋಮಿತಿಯನ್ನು 25ಕ್ಕೆ ಇಳಿಸುವಂತೆ ಮನವಿ ಮಾಡುತ್ತೇನೆ. ಯುವ ಮತ್ತು ಕೆಲಸಕ್ಕೆ ಹೋಗುವ ಜನ ಲಸಿಕೆ ಪಡೆದರೆ ಸೋಂಕಿತರ ಪ್ರಮಾಣದ ತೀವ್ರತೆ ಕಡಿಮೆಯಾಗಲಿದೆ ಮತ್ತು ಚಿಕಿತ್ಸೆಯ ಅವಧಿಯೂ ತಗ್ಗಲಿದೆ,’ ಎಂದು ಠಾಕ್ರೆ ತಮ್ಮ ಪತ್ರದಲ್ಲಿ ಬರೆದಿದ್ದರು.

ಇದನ್ನೂ ಓದಿ: Covid 19 Vaccination: ಏಪ್ರಿಲ್ 1ರಿಂದಲೇ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ; ಕೇಂದ್ರ ಸರ್ಕಾರದಿಂದ ಘೋಷಣೆ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು