AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suresh Raina: ಲೈಫು ತುಂಬಾ ಚಿಕ್ಕದು ಎಂದ ಸುರೇಶ್ ರೈನಾ; ಸೋಷಿಯಲ್ ಮೀಡಿಯಾ ಪೋಸ್ಟ್​ಗೆ ಅಭಿಮಾನಿಗಳು ಖುಷ್

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಸುರೇಶ್ ರೈನಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ವ್ಯಕ್ತಿ. ಅವರು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ, ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ.

Suresh Raina: ಲೈಫು ತುಂಬಾ ಚಿಕ್ಕದು ಎಂದ ಸುರೇಶ್ ರೈನಾ; ಸೋಷಿಯಲ್ ಮೀಡಿಯಾ ಪೋಸ್ಟ್​ಗೆ ಅಭಿಮಾನಿಗಳು ಖುಷ್
ಸುರೇಶ್ ರೈನಾ
TV9 Web
| Edited By: |

Updated on:Apr 05, 2022 | 12:45 PM

Share

ಐಪಿಎಲ್ ಟಿ-20 ಕ್ರಿಕೆಟ್​ನ 14ನೇ ಆವೃತ್ತಿ (IPL 2021) ಇನ್ನೇನು ಎರಡು ದಿನಗಳಲ್ಲಿ ಆರಂಭವಾಗಲಿದೆ. ಐಪಿಎಲ್ ಹೊಸ ಆವೃತ್ತಿಗೆ ಅಭಿಮಾನಿಗಳು ಮಾತ್ರವಲ್ಲ, ಐಪಿಎಲ್ ಆಡಲಿರುವ ಎಂಟು ತಂಡಗಳು ಹಾಗೂ ಫ್ರಾಂಚೈಸಿಗಳೂ ಕೂಡ ಕಾತುರವಾಗಿವೆ. ಒಟ್ಟಾರೆ 52 ದಿನಗಳ ಕಾಲ ಇರಲಿರುವ ಕ್ರಿಕೆಟ್ ಜ್ವರದ ಬಿಸಿಯಲ್ಲಿ ತಂಡದ ಆಟಗಾರರಿದ್ದಾರೆ. ಮೈದಾನದಲ್ಲಿ ಅಭ್ಯಾಸದಲ್ಲಿ ತೊಡಗಿಕೊಂಡಿರುವುದು, ಫಿಟ್​ನೆಸ್ ಕಾಯ್ದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಐಪಿಎಲ್ ಆಡಲಿರುವ ಬಹುತೇಕ ತಂಡಗಳು ಸೋಷಿಯಲ್ ಮೀಡಿಯಾಗಳಲ್ಲಿ ನಿಯಮಿತವಾಗಿ ಪೋಸ್ಟ್ ಮಾಡುತ್ತಿರುತ್ತಾರೆ. ತಮ್ಮ ತಂಡದ ಅಭಿಮಾನಿಗಳ ಜೊತೆಗೆ ಸುದ್ದಿಯಲ್ಲಿರುತ್ತಾರೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಸುರೇಶ್ ರೈನಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ವ್ಯಕ್ತಿ. ಅವರು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ, ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ಕೂಡ ಅಂಥದ್ದೇ ಒಂದು ಪೋಸ್ಟ್​ನ್ನು ಅವರು ಹಂಚಿಕೊಂಡಿದ್ದಾರೆ. ಆದರೆ, ಅದು ಐಪಿಎಲ್, ಕ್ರಿಕೆಟ್ ಯಾವುದರ ಬಗ್ಗೆಯೂ ಅಲ್ಲ. ಬದಲಾಗಿ ಬದುಕಿನ ಬಗ್ಗೆ. ಹೌದು. ಸುರೇಶ್ ರೈನಾ ಲೈಫ್ ಬಗ್ಗೆ ಫಿಲಾಸಫಿಕಲ್ ಆಯಾಮದಲ್ಲಿ ಪೋಸ್ಟ್ ಒಂದು ಹಂಚಿಕೊಂಡಿದ್ದಾರೆ.

‘ಬದುಕು ತುಂಬಾ ಚಿಕ್ಕದು. ಹಾಗಾಗಿ, ಯಾವತ್ತೂ ಸಂತೋಷವಾಗಿರಿ’ ಎಂದು ರೈನಾ ಬರೆದುಕೊಂಡಿದ್ದಾರೆ. Life is very short Nanba ಎಂದು ಅವರು ಹೇಳಿದ್ದು, ನನ್ಬಾ ಎಂದರೆ ತಮಿಳಿನಲ್ಲಿ ಗೆಳೆಯ ಎಂಬರ್ಥದ ಪದವಾಗಿದೆ. ಈ ಪೋಸ್ಟ್ ಹಂಚಿಕೊಂಡ ಗಂಟೆಗಳೊಳಗೆ 2.58 ಲಕ್ಷ ಲೈಕ್​ ಗಳಿಸಿದ್ದು, ಹಲವರು ಕಮೆಂಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

View this post on Instagram

A post shared by Suresh Raina (@sureshraina3)

ಹಲವಾರು ಮಂದಿ ಅಭಿಮಾನಿಗಳಿಗೆ ಸೆಲೆಬ್ರಿಟಿಗಳೇ ರೋಲ್ ಮಾಡೆಲ್ ಆಗಿರುತ್ತಾರೆ. ಅಂಥವರು ತಮ್ಮ ಮೆಚ್ಚಿನ ನಟ ಅಥವಾ ಕ್ರಿಕೆಟಿಗ ಹೇಳಿದ್ದನ್ನು ಖುಷಿಯಿಂದ ಸ್ವೀಕರಿಸುತ್ತಾರೆ. ಒಪ್ಪಿಕೊಳ್ಳುತ್ತಾರೆ. ಸುರೇಶ್ ರೈನಾ ಬದುಕಿನ ಬಗ್ಗೆ ಪಾಸಿಟಿವ್ ಆಗಿ ಅಭಿಪ್ರಾಯ ಪಟ್ಟಿರುವುದನ್ನು ಅಭಿಮಾನಿಗಳು ಹಾಗೇ ಖುಷಿಯಾಗಿ ಒಪ್ಪಿಕೊಂಡಿದ್ದಾರೆ. ಇಷ್ಟಪಟ್ಟಿದ್ದಾರೆ.

ಈ ಹಿಂದೆ, ತಮ್ಮ ವಿವಾಹ ವಾರ್ಷಿಕೋತ್ಸವದ ದಿನ ಸುರೇಶ್ ರೈನಾ ಪತ್ನಿಗೆ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಉತ್ತಮ ಉಡುಗೊರೆಯೊಂದನ್ನು ನೀಡಿದ್ದರು. ಹೆಂಡತಿ ಬಗ್ಗೆ ಅತ್ಯುತ್ತಮ ಬರಹ ಬರೆದುಕೊಂಡಿದ್ದರು. ಮಡದಿ ಸೂಪರ್ ವುಮನ್ ಆಗಿದ್ಧಾಳೆ ಎಂದು ಹೇಳಿಕೊಂಡಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಏಪ್ರಿಲ್ 10ರಂದು ಮೊದಲ ಪಂದ್ಯಾಟವನ್ನು ಆಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಸಿಎಸ್​ಕೆ ತನ್ನ ಮೊದಲ ಪಂದ್ಯವನ್ನು ಮುಂಬೈ ಕ್ರೀಡಾಂಗಣದಲ್ಲಿ ಆಡಲಿದೆ.

ಇದನ್ನೂ ಓದಿ: Viral Video: ಅಭಿಮಾನಿಯ ಫೋನ್ ಕಿತ್ತುಕೊಂಡ ನಟ ಅಜಿತ್; ಚುನಾವಣಾ ಮತಗಟ್ಟೆಯಲ್ಲಿ ನಡೆದಿದ್ದೇನು?

ಇದನ್ನೂ ಓದಿ: MS Dhoni: ಮಹೇಂದ್ರ ಸಿಂಗ್ ಧೋನಿ ಮುಂದಿವೆ ಮೂರು ದಾಖಲೆಗಳು; ಐಪಿಎಲ್ 2021ರಲ್ಲೂ ಮಾಡ್ತಾರಾ ಧೋನಿ ಧಮಾಕ?

Published On - 5:27 pm, Tue, 6 April 21

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ