ಕ್ವಿಂಟನ್ ಡಿ ಕಾಕ್ ಮಾಡಿದ್ದು ಸರಿಯಾ ಎಂಬ ಚರ್ಚೆ ಜೋರಾಗುತ್ತಿದ್ದಂತೆ ಅವರದ್ದೇನೂ ತಪ್ಪಿಲ್ಲವೆಂದ ಫಖರ್ ಜಮಾನ್
ಡಿ ಕಾಕ್ ಅವರ ವರ್ತನೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದದ್ದು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಿಟ್ಟುಕೊಂಡಿದೆ. ಮೋಸದಿಂದ ಜಮಾನ್ ಅವರನ್ನು ರನೌಟ್ ಮಾಡಿದರೆಂದು ಡಿ ಕಾಕ್ರನ್ನು ಜರಿಯಲಾಗುತ್ತಿದೆ.
ಪಾಕಿಸ್ತಾನದ ಆರಂಭ ಆಟಗಾರ ಫಖರ್ ಜಮಾನ್ ರವಿವಾರದಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಎರಡನೇ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ನಿಸ್ಸಂದೇಹವಾಗಿ ಇದುವರೆಗೆ ದಾಖಲಾಗಿರುವ ಶ್ರೇಷ್ಠ ಇನ್ನಿಂಗ್ಸ್ಗಳಲ್ಲಿ ಒಂದನ್ನು ಆಡಿದರು. ಒಂದು ದಿನದ ಪಂದ್ಯಗಳಲ್ಲಿ ತಮ್ಮ ವೃತ್ತಿಬದುಕಿನ ಎರಡನೇ ದ್ವಿಶತಕ ಬಾರಿಸಿ, ಒಡಿಐಗಳಲ್ಲಿ ರೋಹಿತ್ ಶರ್ಮ ನಂತರ ವಿಶ್ವದ ಕೇವಲ ಎರಡನೇ ಬ್ಯಾಟ್ಸ್ಮನ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದ ಜಮಾನ್ ದುರದೃಷ್ಟವಶಾತ್ ರನೌಟ್ ಆದರು. ಆದರೆ ಅವರು ಔಟಾದ ಬಗೆ ಅಥವಾ ಔಟ್ ಮಾಡಿದ ರೀತಿ ಭಾರಿ ವಿವಾದವನ್ನು ಸೃಷ್ಟಿಸಿದೆ. ದಕ್ಷಿಣ ಆಫ್ರಿಕಾದ ವಿಕೆಟ್-ಕೀಪರ್ ಕ್ವಿಂಟನ್ ಡಿ ಕಾಕ್ ಅವರು ಜಮಾನ್ ಅವರನ್ನ ಮೋಸದಿಂದ ರನೌಟ್ ಮಾಡಿದರು ಎಂಬ ಟೀಕೆಗಳು ಕೇಳಿ ಬಂದ ನಂತರ ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (ಎಮ್ಸಿಸಿ) ಮಧ್ಯಪ್ರವೇಶ ಮಾಡಿದೆಯಾದರೂ ಘಟನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ, ಅಂಪೈರ್ಗಳು ಮತ್ತು ಮ್ಯಾಚ್ ರೆಫರಿಗೆ ಬಿಟ್ಟಿದ್ದು ಎಂದು ಹೇಳಿದೆ.
ಜಮಾನ್ ಅವರ ಅತ್ಯಮೋಘ ಇನ್ನಿಂಗ್ಸ್ ಕೊನೆ ಓವರ್ನಲ್ಲಿ ಕೊನೆಗೊಂಡಿತು. 49ನೇ ಓವರ್ ಆರಂಭವಾದಾಗ 192 ರನ್ ಗಳಿಸಿ ಆಡುತ್ತಿದ್ದ ಜಮಾನ್ ಮೊದಲ ಎಸೆತವನ್ನು ಲಾಂಗಾಫ್ ಕಡೆ ಆಡಿ ಎರಡನೇ ರನ್ಗಾಗಿ ಸ್ಟ್ರೈಕರ್ ಎಂಡ್ ಕಡೆ ವಾಪಸ್ಸು ಓಡುತ್ತಿದ್ದರು. ಚೆಂಡನ್ನು ಐಡೆನ್ ಮಾರ್ಕ್ರಮ್ ಫೀಲ್ಡ್ ಮಾಡಿ ಡಿ ಕಾಕ್ ಕಡೆ ಎಸೆದ ನಂತರ ಜಮಾನ್ ಅವರ ಗಮನ ಬೇರೆಡೆ ಸೆಳೆಯಲು, ನಾನ್-ಸ್ಟ್ರೈಕರ್ ಕಡೆ ಅಂತ ಕೂಗಿದರು. ತಮ್ಮ ಜೊತೆಗಾರ ಎಲ್ಲಿ ರನೌಟ್ ಅಗಲಿದ್ದಾನೋ ಅಂತ ತಮ್ಮ ಓಟವನ್ನು ನಿಧಾನಗೊಳಿಸಿ ನಾನ್-ಸ್ಟ್ರೈಕರ್ ಕಡೆ ತಿರುಗಿ ನೋಡುತ್ತಿದ್ದಾಗಲೇ ಮಾರ್ಕ್ರಮ್ ಅವರ ಥ್ರೋ ಕಲೆಕ್ಟ್ ಮಾಡಿದ ಡಿ ಕಾಕ್ ಬೇಲ್ಸ್ ಹಾರಿಸಿ ಜಮಾನ್ ಆವರನ್ನು ರನ್ಔಟ್ ಮಾಡಿದರು.
ಡಿ ಕಾಕ್ ಅವರ ವರ್ತನೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದದ್ದು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಿಟ್ಟುಕೊಂಡಿದೆ. ಮೋಸದಿಂದ ಜಮಾನ್ ಅವರನ್ನು ರನೌಟ್ ಮಾಡಿದರೆಂದು ಡಿ ಕಾಕ್ರನ್ನು ಜರಿಯಲಾಗುತ್ತಿದೆ. ಈ ಸಂದರ್ಭದಲ್ಲೇ ಎಮ್ಸಿಸಿ ಸದರಿ ಘಟನೆಗೆ ಸಂಬಂಧಪಟ್ಟ ನಿಯಮವನ್ನು ಟ್ಟಿಟ್ಟರ್ ಮೂಲಕ ತಿಳಿಸುವ ಪ್ರಯತ್ನ ಮಾಡಿದೆ.
‘ನಿಯಮ 41.5.1 ಪ್ರಕಾರ ಯಾವುದೇ ಪೀಲ್ಡರ್ ಬ್ಯಾಟ್ಸ್ಮನ್ ಎಸೆತವನ್ನು ಎದುರಿಸಿದ ನಂತರ ಉದ್ದೇಶಪೂರ್ವಕವಾಗಿ ಮಾತಿನಿಂದಾಲೀ, ಕಾರ್ಯದಿಂದಾಗಲೀ ಪಿಚ್ ಮೇಲಿರುವ ಬ್ಯಾಟ್ಸ್ಮನ್ಗಳಲ್ ಗಮನವನ್ನು ಬೇರೆಡೆ ಸೆಳೆಯುವುದು, ಮೋಸ ಮಾಡುವುದು ಇಲ್ಲವೇ ಅವರಿಗೆ ಅಡಚಣೆಯನ್ನುಂಟು ಮಾಡುವುದು ಪ್ರಮಾದವೆನಿಸುತ್ತದೆ’ ಎಂದು ಎಮ್ಸಿಸಿ ಟ್ವೀಟ್ ಮಾಡಿದೆ.
ಮತ್ತೊಂದು ಟ್ವೀಟ್ನಲ್ಲಿ ಎಮ್ಸಿಸಿ ಹೀಗೆ ಹೇಳಿದೆ:
‘ನಿಯಮ ಇನ್ನೂ ಸ್ಪಷ್ಟವಾಗಿದೆ. ಇಲ್ಲಾಗಿರುವ ಪ್ರಮಾದವು ಬ್ಯಾಟ್ಸ್ಮನ್ನನ್ನು ನಿಜ ಆರ್ಥದಲ್ಲಿ ಮೋಸ ಮಾಡಿದ್ದಕ್ಕಿಂತ ಅಂಥ ಒಂದು ಪ್ರಯತ್ನವನ್ನು ಮಾಡಿರುವುದರಿಂದ ಅಸಲಿಗೆ ಏನು ನಡೆಯಿತು ಅನ್ನುವುದರ ಬಗ್ಗೆ ಮೈದಾನದಲ್ಲಿರುವ ಅಂಪೈರ್ಗಳು ನಿರ್ಧಾರ ತೆಗೆದುಕೊಳ್ಳಬೇಕು. ಮೋಸ ನಡೆದಿದೆ ಅಂತ ಅವರಿಗೆ ಮನವರಿಕೆಯಾದರೆ. ಬ್ಯಾಟ್ಸ್ಮನ್ ನಾಟ್ ಔಟ್, 5 ಪೆನಾಲ್ಟಿ ರನ್ಗಳನ್ನು ಬ್ಯಾಟಿಂಗ್ ತಂಡಕ್ಕೆ ನೀಡಬೇಕು, ಈ ಸಂದರ್ಭದಲ್ಲಿ ಬ್ಯಾಟ್ಸ್ಮನ್ಗಳು 2ರನ್ ಓಡಿದ್ದರಿಂದ ಆ ಟೀಮಿಗೆ ಒಟ್ಟಿ 7 ರನ್ ನೀಡಬೇಕು ಮತ್ತು ಯಾರ ಸ್ಟ್ರೈಕ್ ತೆಗೆದುಕೊಳ್ಳಬೇಕೆನ್ನುವ ನಿರ್ಧಾರವನ್ನು ಬ್ಯಾಟ್ಸ್ಮನ್ಗಳ ವಿವೇಚನೆಗೆ ಬಿಡಬೇಕು’ ಎಂದು ಹೇಳಿದೆ.
After the 1st second of this video, bowler is constantly looking towards wicketkeeper and not the fielder while De Kock is pointing towards the bowler end deliberately. Bowler not looking towards fielder clearly means the ball was already on way to keeper.#FakharZaman #PAKvRSA pic.twitter.com/dlth4Dd8XY
— Wajahat Kazmi ?? (@KazmiWajahat) April 4, 2021
ಸೀಮಿತ ಓವರ್ಗಳ ಕ್ರಿಕೆಟ್ಗೆ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿರುವ ತೆಂಬಾ ಬವುಮಾ ಅವರು ತಮ್ಮ ವಿಕೆಟ್-ಕೀಪರ್ನನ್ನು ಸಮರ್ಥಿಸಿಕೊಂಡಿದ್ದಾರೆ. ‘ಕ್ವಿನ್ನಿ (ಡಿ ಕಾಕ್) ಬಹಳ ಜಾಣ್ಮೆಯನ್ನು ಪ್ರದರ್ಶಿಸಿದರು. ಅವರು ಮಾಡಿದ್ದು ಕ್ರೀಡಾ ಸ್ಫೂರ್ತಿಯಲ್ಲ ಎಂದು ಕೆಲವರು ಟೀಕಿಸಬಹುದು. ಅದರೆ ಜಮಾನ್ ಟಾರ್ಗೆಟ್ ಹತ್ತಿರವಾಗುತ್ತಿದ್ದುದ್ದರಿಂದ ಅವರ ವಿಕೆಟ್ ಪಡೆಯುವುದು ನಮಗೆ ಅತ್ಯವಶ್ಯಕವಾಗಿತ್ತು. ನಾನು ಮತ್ತೊಮ್ಮೆ ಅದನ್ನೇ ಹೇಳುತ್ತೇನೆ, ಕ್ವಿನ್ನಿ ಭಾರೀ ಜಾಣ್ಮೆ ಪ್ರದರ್ಶಿಸಿದರು’ ಎಂದು ಬವೂಮ ಹೇಳಿದ್ದಾರೆ.
‘ಮೈದಾನದಲ್ಲಿ ಪರಿಸ್ಥಿತಿ ನಾವಂದುಕೊಂಡಂತಾಗದೆ ಅದಕ್ಕೆ ತದ್ವಿರುದ್ಧವಾದಾಗ ಬೇರೆ ಉಪಾಯಗಳ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಕ್ವಿನ್ನಿ ಮಾಡಿದ್ದು ಆದನ್ನೇ. ಅವರರು ಯಾವುದೇ ನಿಯಯವನ್ನು ಉಲ್ಲಂಘಿಸದರೆಂದು ನಾನು ಬಾವಿಸುವುದಿಲ್ಲ,’ ಎಂದು ಬವೂಮ ಹೇಳಿದ್ಧಾರೆ. ಜಮಾನ್ ಸಹ ‘ಡಿ ಕಾಕ್ ಅವದ್ದೇನೂ ತಪ್ಪಿಲ್ಲ, ತಪ್ಪೆಲ್ಲ ನಂದೇ’ ಅಂತ ಹೇಳಿದ್ದಾರೆ
‘ತಪ್ಪು ನನ್ನದು. ಜೊತೆ ಆಟಗಾರ ಹ್ಯಾರಿಸ್ ರೌಫ್ ಕ್ರೀಸ್ ತಲುಪಿದರೋ ಇಲ್ಲವೋ ಅಂತ ನೋಡುವುದರಲ್ಲಿ ನಾನು ಮಗ್ನನಾಗಿದ್ದೆ ಯಾಕೆಂದರೆ ಎರಡನೇ ರನ್ಗೆ ಅವರು ತುಸು ಲೇಟಾಗಿ ಓಡಲಾರಂಭಿಸಿದ್ದರು. ಅವರು ತೊಂದರೆಯಲ್ಲಿರಬಹುದೆಂದು ನಾನು ಭಾವಿಸಿದ್ದೆ. ಮಿಕ್ಕಿದ್ದೆಲ್ಲಾ ಮ್ಯಾಚ್ ರೆಫರಿ ಅವರಿಗೆ ಬಿಟ್ಟಿದ್ದು. ಆದರೆ, ನನ್ನ ಪ್ರಕಾರ ಕ್ವಿಂಟನ್ ಡಿ ಕಾಕ್ ಅವರದ್ದೇನೂ ತಪ್ಪಿಲ್ಲ’ ಎಂದು ಜಮಾನ್ ಹೇಳಿದ್ದಾರೆ.
Published On - 8:18 pm, Mon, 5 April 21