2011 Cricket World Cup: ಧೋನಿಯ ಆ ಒಂದು ಸಿಕ್ಸರ್​ ವಿಶ್ವಕಪ್ ಗೆಲ್ಲಿಸಲಿಲ್ಲ.. ನನ್ನ ಪ್ರಕಾರ ಯುವಿ ವಿಶ್ವಕಪ್​ನ ನಿಜವಾದ ನಾಯಕ: ಗೌತಮ್ ಗಂಭೀರ್

2011 Cricket World Cup: ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ತೆಂಡೂಲ್ಕರ್ ಅವರ ಶತಕವನ್ನು ನಾವು ಮರೆಯಬಹುದೇ? ನಾವು ಸಿಕ್ಸರ್ಗಳನ್ನು ಮಾತ್ರ ಏಕೆ ನೆನಪಿಸಿಕೊಳ್ಳುತ್ತೇವೆ?

2011 Cricket World Cup: ಧೋನಿಯ ಆ ಒಂದು ಸಿಕ್ಸರ್​ ವಿಶ್ವಕಪ್ ಗೆಲ್ಲಿಸಲಿಲ್ಲ.. ನನ್ನ ಪ್ರಕಾರ ಯುವಿ ವಿಶ್ವಕಪ್​ನ ನಿಜವಾದ ನಾಯಕ: ಗೌತಮ್ ಗಂಭೀರ್
ಎಂ. ಎಸ್​ ಧೋನಿ ವಿನ್ನಿಂಗ್ ಸಿಕ್ಸರ್
Follow us
ಪೃಥ್ವಿಶಂಕರ
|

Updated on: Apr 02, 2021 | 6:47 PM

ಗೌತಮ್ ಗಂಭೀರ್ ಭಾರತದ 2011 ರ ಕ್ರಿಕೆಟ್ ವಿಶ್ವಕಪ್ ವಿಜಯದ ವೀರರಲ್ಲಿ ಒಬ್ಬರು. ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 97 ಇನಿಂಗ್ಸ್‌ಗಳನ್ನು ಆಡುವ ಮೂಲಕ ಭಾರತವನ್ನು ಗೆಲುವಿನ ಹಾದಿಗೆ ತಂದಿಟ್ಟರು. ಇಂದು, ಭಾರತ ವಿಶ್ವಕಪ್ ಗೆದ್ದ 10 ವರ್ಷಗಳಾಗಿವೆ. ಅಂತಹ ಪರಿಸ್ಥಿತಿಯಲ್ಲಿ ಗೌತಮ್ ಗಂಭೀರ್ ಅವರಿಗೆ ಒಂದು ಅಸಮಾದಾನವಿದೆ. ಅದೆನೆಂದರೆ ಆಗಿನ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಡಿಸಿದ ಕೊನೆಯ ಸಿಕ್ಸರ್‌ ಬಗ್ಗೆ ಜನ ಹೆಚ್ಚಿನ ಆಧ್ಯತೆ ನೀಡುತ್ತಿರುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧೋನಿಯ ಆ ಸಿಕ್ಸರ್​ ಆಧಾರದ ಮೇಲೆ ಭಾರತ ವಿಶ್ವಕಪ್ ಗೆದ್ದಿಲ್ಲ, ಬದಲಿಗೆ ತಂಡದ ಎಲ್ಲ ಆಟಗಾರರು ಕೊಡುಗೆ ನೀಡಿದ್ದಾರೆ ಎಂದರು. ಫೈನಲ್‌ನಲ್ಲಿ ಧೋನಿ ಅಜೇಯ 91 ರನ್ ಗಳಿಸಿದರು ಮತ್ತು ಸಿಕ್ಸರ್‌ನೊಂದಿಗೆ ಭಾರತವನ್ನು ವಿಶ್ವ ವಿಜೇತವನ್ನಾಗಿ ಮಾಡಿದ್ದರು.

ಒಬ್ಬ ವ್ಯಕ್ತಿಯಿಂದ ನಮಗೆ ವಿಶ್ವಕಪ್ ದೊರೆತಿಲ್ಲ ಗೌತಮ್ ಗಂಭೀರ್ ಮಾತಾನಾಡುತ್ತಾ, ಒಬ್ಬ ವ್ಯಕ್ತಿಯಿಂದ ನಮಗೆ ವಿಶ್ವಕಪ್ ದೊರೆಯಿತು ಎಂಬುದನ್ನು ನೀವು ಭಾವಿಸುತ್ತೀರಾ? ಯಾರಾದರೂ ಒಬ್ಬನಿಂದ ವಿಶ್ವಕಪ್ ಗೆಲ್ಲಲು ಸಾಧ್ಯವಾದರೆ, ಭಾರತವು ಈಗ ಎಲ್ಲಾ ವಿಶ್ವಕಪ್​ಗಳನ್ನು ಗೆಲ್ಲಬೇಕಿತ್ತು. ದುರದೃಷ್ಟವಶಾತ್, ಭಾರತದಲ್ಲಿ ಆಯ್ಕೆ ಮಾಡಿದ ಕೆಲವು ಜನರನ್ನು ಪೂಜಿಸಲಾಗುತ್ತದೆ. ನಾನು ಅದನ್ನು ಎಂದಿಗೂ ನಂಬಲಿಲ್ಲ. ತಂಡದ ಆಟಗಳಲ್ಲಿ ಒಬ್ಬನಿಗೆ ಹೆಚ್ಚಿನ ಪ್ರಾದಾನ್ಯತೆ ಇರುವುದಿಲ್ಲ. ಬದಲಿಗೆ ಎಲ್ಲರ ಕೊಡುಗೆ ಉಪಯುಕ್ತವಾಗಿದೆ. 2011 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸದಸ್ಯರ ಕೊಡುಗೆಯನ್ನು ವಿವರಿಸುತ್ತಾ ಮಹೇಂದ್ರ ಸಿಂಗ್ ಧೋನಿ ಅವರ ಸಿಕ್ಸರ್​ ಅನ್ನು ಹೆಚ್ಚು ಮುನ್ನೆಲೆಗೆ ತರುತ್ತಿರುವುದನ್ನು ಗಂಭೀರ್ ಪ್ರಶ್ನಿಸಿದ್ದಾರೆ.

ನಾವು ಸಿಕ್ಸರ್ಗಳನ್ನು ಮಾತ್ರ ಏಕೆ ನೆನಪಿಸಿಕೊಳ್ಳುತ್ತೇವೆ ಜಹೀರ್ ಖಾನ್ ಅವರ ಕೊಡುಗೆಯನ್ನು ನೀವು ಮರೆಯಬಹುದೇ? ಫೈನಲ್‌ನಲ್ಲಿ ಅವರು ಸತತ ಮೂರು ಮೇಡನ್ ಓವರ್‌ಗಳನ್ನು ಎಸೆದರು. ಯುವರಾಜ್ ಸಿಂಗ್ ಅವರು ಆಸ್ಟ್ರೇಲಿಯಾ ವಿರುದ್ಧ ಮಾಡಿದ್ದನ್ನು ಮರೆಯಬಹುದೇ? ಅಥವಾ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ತೆಂಡೂಲ್ಕರ್ ಅವರ ಶತಕವನ್ನು ನಾವು ಮರೆಯಬಹುದೇ? ನಾವು ಸಿಕ್ಸರ್ಗಳನ್ನು ಮಾತ್ರ ಏಕೆ ನೆನಪಿಸಿಕೊಳ್ಳುತ್ತೇವೆ? ಒಂದು ಸಿಕ್ಸರ್ ನಿಮಗೆ ವಿಶ್ವಕಪ್ ಗೆಲ್ಲಲು ಸಾಧ್ಯವಾದರೆ, ಯುವರಾಜ್ ಸಿಂಗ್ ಅವರು ಭಾರತಕ್ಕಾಗಿ ಒಂದೇ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಹೊಡೆದಿದ್ದರಿಂದ ನಮಗೆ ಆರು ವಿಶ್ವಕಪ್ಗಳನ್ನು ಗೆದ್ದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಕ್ರೌನ್ ಪ್ರಿನ್ಸ್ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅವರು 2011 ರ ವಿಶ್ವಕಪ್‌ನಲ್ಲಿ ಟೂರ್ನಿಯ ಮ್ಯಾನ್ ಆಗಿದ್ದರು. ಆದರೆ ನಾವು ಕೇವಲ ಒಂದು ಸಿಕ್ಸರ್​ ಬಗ್ಗೆ ಮಾತ್ರ ಮಾತನಾಡುತ್ತೇವೆ.

ವಿಶ್ವಕಪ್‌ನ ನಾಯಕ ಯುವರಾಜ್‌ ಗೌತಮ್ ಗಂಭೀರ್ ಅವರು ಯುವರಾಜ್ ಸಿಂಗ್ ಅವರನ್ನು 2011 ರ ಕ್ರಿಕೆಟ್ ವಿಶ್ವಕಪ್‌ನ ನಾಯಕ ಎಂದು ಕರೆದಿದ್ದಾರೆ. ಜನರು ತಮ್ಮನ್ನು ವಿಶ್ವಕಪ್ ವಿಜಯದ ನಾಯಕ ಎಂದು ಕರೆಯುತ್ತಾರೆ. ಆದರೆ ನನ್ನ ಪ್ರಕಾರ, ಯುವರಾಜ್ ಸಿಂಗ್ 2007 ರ ಟಿ 20 ವಿಶ್ವಕಪ್ ಮತ್ತು 2011 ರ ವಿಶ್ವಕಪ್ ಎರಡರಲ್ಲೂ ವೀರರಾಗಿದ್ದರು ಆದರಿಂದ ವಿಶ್ವಕಪ್​ ನಾಯಕ ಯುವರಾಜ್​ ಎಂದರು. ಅವರ 97 ರನ್‌ಗಳ ಇನ್ನಿಂಗ್ಸ್‌ ಕುರಿತು ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಿಲ್ಲದಿದ್ದರೂ ಜನರು ಅದನ್ನು ಚೆನ್ನಾಗಿ ನೆನಪಿಸಿಕೊಳ್ಳುತ್ತಾರೆ ಎಂದು ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ: 2011 Cricket World Cup: ನೆನಪಾಗುವುದು ಕೇವಲ ಧೋನಿ ಸಿಕ್ಸರ್, ರವಿಶಾಸ್ತ್ರಿ ಕಾಮೆಂಟರಿ.. ಮೂಲೆ ಗುಂಪಾಗಿದ್ದು ಮಾತ್ರ ಆ ಆಪತ್ಬಾಂಧವ!

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್