AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಸಾದ ಸೇವಿಸಿದ ಭಕ್ತರು ಅಸ್ವಸ್ತ, ಆರೋಗ್ಯಾಧಿಕಾರಿಗಳ ಮುನ್ನೆಚ್ಚರಿಕೆಯಿಂದ ತಪ್ಪಿದ ದುರಂತ

ಮಂಡ್ಯ: ಜಿಲ್ಲೆಯಲ್ಲಿ ಸಂಭವಿಸಬೇಕಿದ್ದ ಭಾರಿ ದುರಂತವೊಂದು ಆರೋಗ್ಯಾಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದರಿಂದ ತಪ್ಪಿದೆ. ಅಧಿಕಾರಿಗಳು ಎಚ್ಚರ ವಹಿಸದೇ ಇದ್ದಿದ್ರೆ, ಗ್ರಾಮದ ಹಲವರು ಪ್ರಾಣ ಕಳೆದುಕೊಳ್ಳಬೇಕಿತ್ತು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಅನ್ನೋ ಗ್ರಾಮದಲ್ಲಿ ಸುಮಾರು 2 ಸಾವಿರ ಮಂದಿ ವಾಸಿಸುತ್ತಿದ್ದಾರೆ. ಎಲ್ಲಾ ಗ್ರಾಮಗಳಂತೆ ಈ ಗ್ರಾಮದಲ್ಲೂ ಮಾರಮ್ಮನ ದೇವಾಲಯವಿದೆ. ಇದು ಗ್ರಾಮದ ಶಕ್ತಿ ದೇವತೆ. ಗ್ರಾಮಸ್ಥರು ತಮಗೆ ಯಾವುದೇ ರೀತಿಯ ಸಮಸ್ಯೆ ಎದುರಾದ್ರೂ ಈ ಶಕ್ತಿ ದೇವತೆಗೆ ಪೂಜೆ ಸಲ್ಲಿಸುತ್ತಿದ್ದರು. ಇದೇ ರೀತಿ ಕನಕಪುರ ಗ್ರಾಮದಲ್ಲಿ ನೆಲೆಸಿರೋ […]

ಪ್ರಸಾದ ಸೇವಿಸಿದ ಭಕ್ತರು ಅಸ್ವಸ್ತ, ಆರೋಗ್ಯಾಧಿಕಾರಿಗಳ ಮುನ್ನೆಚ್ಚರಿಕೆಯಿಂದ ತಪ್ಪಿದ ದುರಂತ
ಆಯೇಷಾ ಬಾನು
|

Updated on: Oct 29, 2020 | 7:58 AM

Share

ಮಂಡ್ಯ: ಜಿಲ್ಲೆಯಲ್ಲಿ ಸಂಭವಿಸಬೇಕಿದ್ದ ಭಾರಿ ದುರಂತವೊಂದು ಆರೋಗ್ಯಾಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದರಿಂದ ತಪ್ಪಿದೆ. ಅಧಿಕಾರಿಗಳು ಎಚ್ಚರ ವಹಿಸದೇ ಇದ್ದಿದ್ರೆ, ಗ್ರಾಮದ ಹಲವರು ಪ್ರಾಣ ಕಳೆದುಕೊಳ್ಳಬೇಕಿತ್ತು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಅನ್ನೋ ಗ್ರಾಮದಲ್ಲಿ ಸುಮಾರು 2 ಸಾವಿರ ಮಂದಿ ವಾಸಿಸುತ್ತಿದ್ದಾರೆ. ಎಲ್ಲಾ ಗ್ರಾಮಗಳಂತೆ ಈ ಗ್ರಾಮದಲ್ಲೂ ಮಾರಮ್ಮನ ದೇವಾಲಯವಿದೆ. ಇದು ಗ್ರಾಮದ ಶಕ್ತಿ ದೇವತೆ. ಗ್ರಾಮಸ್ಥರು ತಮಗೆ ಯಾವುದೇ ರೀತಿಯ ಸಮಸ್ಯೆ ಎದುರಾದ್ರೂ ಈ ಶಕ್ತಿ ದೇವತೆಗೆ ಪೂಜೆ ಸಲ್ಲಿಸುತ್ತಿದ್ದರು.

ಇದೇ ರೀತಿ ಕನಕಪುರ ಗ್ರಾಮದಲ್ಲಿ ನೆಲೆಸಿರೋ ವೈದ್ಯರೊಬ್ಬರು ಮಂಗಳವಾರ ಮಾರಮ್ಮನಿಗೆ ಪ್ರಭಾವಳಿಯನ್ನ ನೀಡಿದ್ರು. ಈ ವೇಳೆ ಗ್ರಾಮಸ್ಥರಿಗೆ ಪ್ರಸಾದವಾಗಿ ನೀಡಲು ಪುಳಿಯೋಗರೆ ಮಾಡಿಸಿದ್ರು. ಪ್ರಸಾದ ತಿಂದ ಜನ ತಮ್ಮ ತಮ್ಮ ಮನೆಗಳಿಗೆ ತೆರಳಿದ್ರು. ಆದ್ರೆ, ರಾತ್ರಿಯಾಗ್ತಿದ್ದಂತೆ ಕೆಲವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ.

ಮಂಗಳವಾರ ರಾತ್ರಿ ಕೆಲವರು ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿದ್ರೂ ಊರಲ್ಲಿ ಯಾವುದೇ ಆತಂಕ ಇರಲಿಲ್ಲ. ನಿನ್ನೆ ಬೆಳಗ್ಗೆ 15 ಜನರು ಒಟ್ಟಿಗೆ ವಾಂತಿ ಭೇದಿಯಾಗಿದೆ ಅಂತಾ ಒಟ್ಟಿಗೆ ಚಿಕಿತ್ಸೆ ಪಡೆದ ಕುರಿತು ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ಎಚ್ಚೆತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಜನರಿಗೆ ಚಿಕಿತ್ಸೆ ನೀಡಿದ್ರು.

ಗ್ರಾಮದ 60 ಕ್ಕೂ ಹೆಚ್ಚು ಜನರು ವಾಂತಿ ಭೇದಿಯಿಂದ ಬಳಲುತ್ತಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಗ್ರಾಮದ 3 ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ 5 ಜನರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಮರಾಜ ನಗರ ಜಿಲ್ಲೆಯ ಸುಳ್ವಾಡಿ ದುರಂತ ನಡೆದು ಇನ್ನೇನು 2 ವರ್ಷಗಳಾಗುತ್ತಿವೆ. ಇದೇ ಮಾದರಿಯಲ್ಲಿ ಮಂಡ್ಯದಲ್ಲಿ ನಡೆಯಲಿದ್ದ ದುರಂತ ತಪ್ಪಿದೆ. ಆರೋಗ್ಯಾಧಿಕಾರಿಗಳು ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದು ತೀವ್ರ ನಿಗಾ ವಹಿಸಿದ್ದಾರೆ. 2 ಸಾವಿರಕ್ಕೂ ಹೆಚ್ಚು ಜನರಿರುವ ಊರಿನ ಜನರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.