AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಕೇಸ್‌; ಪೊಲೀಸ್ ಠಾಣೆ ಮೇಲಿನ ದಾಳಿ ಭಯೋತ್ಪಾದನಾ ಕೃತ್ಯ ಎಂದು ಸಾರಿದ ಹೈಕೋರ್ಟ್

ಠಾಣೆಯ ಮೇಲೆ ದಾಳಿಗೆ ಪೆಟ್ರೋಲ್ ಬಾಟಲ್ ಬಳಸಿದ್ದಾರೆ. ಪೊಲೀಸರ ಮೇಲೆ ರಾಡ್ ಮತ್ತು ದೊಣ್ಣೆಗಳಿಂದ ದಾಳಿ ಮಾಡಿದ್ದಾರೆ. ಜನರನ್ನು ಭೀತರಾಗಿಸಲು ಕೃತ್ಯ ಎಸಗಿದ್ದಾರೆ ಎಂದು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್‌ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಕೇಸ್‌; ಪೊಲೀಸ್ ಠಾಣೆ ಮೇಲಿನ ದಾಳಿ ಭಯೋತ್ಪಾದನಾ ಕೃತ್ಯ ಎಂದು ಸಾರಿದ ಹೈಕೋರ್ಟ್
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಕೇಸ್‌; ಪೊಲೀಸ್ ಠಾಣೆ ಮೇಲಿನ ದಾಳಿ ಭಯೋತ್ಪಾದನಾ ಕೃತ್ಯ ಎಂದು ಸಾರಿದ ಹೈಕೋರ್ಟ್
TV9 Web
| Edited By: |

Updated on:Aug 09, 2022 | 7:48 PM

Share

ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಠಾಣಾ ವಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆಯಾ ಪೊಲೀಸ್ ಠಾಣೆಗಳ ಮೇಲಿನ ದಾಳಿಯು ಭಯೋತ್ಪಾದನಾ ಕೃತ್ಯ ಎಂದು ರಾಜ್ಯ ಹೈಕೋರ್ಟ್​ ಸಾರಿದೆ. ಪ್ರಕರಣದಲ್ಲಿ ಅತೀಕ್ ಅಹ್ಮದ್ ಸೇರಿ ಐವರ ಜಾಮೀನು ಅರ್ಜಿಗಳನ್ನು ಹೈಕೋರ್ಟ್​ ವಜಾಮಾಡಿದೆ. ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಮತ್ತು ನ್ಯಾ. ಶಿವಶಂಕರ್ ಅಮರಣ್ಣನವರ್‌ ಅವರ ನ್ಯಾಯಪೀಠ ಈ ಆದೇಶ ನೀಡಿದೆ. ಎರಡೂ ಠಾಣಾ ವ್ಯಾಪ್ತಿಗಳು ನಡುರಾತ್ರಿ ಧಗಧಗನೆ ಹೊತ್ತಿ ಉರಿದು ನಾಳಿದ್ದು ಗುರುವಾರಕ್ಕೆ 2 ವರ್ಷವಾಗುತ್ತದೆ.

ಠಾಣೆಯ ಮೇಲೆ ದಾಳಿಗೆ ಪೆಟ್ರೋಲ್ ಬಾಟಲ್ ಬಳಸಿದ್ದಾರೆ. ಪೊಲೀಸರ ಮೇಲೆ ರಾಡ್ ಮತ್ತು ದೊಣ್ಣೆಗಳಿಂದ ದಾಳಿ ಮಾಡಿದ್ದಾರೆ. ಜನರನ್ನು ಭೀತರಾಗಿಸಲು ಕೃತ್ಯ ಎಸಗಿದ್ದಾರೆ ಎಂದು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್‌ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. 2020ರ ಆಗಸ್ಟ್​ 11ರಂದು ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಗಲಭೆ ನಡೆದು, ಶಾಸಕ ಅಖಂಡ ಶ್ರೀನಿವಾಸ್ ನಿವಾಸಕ್ಕೂ ಬೆಂಕಿ ಹಚ್ಚಲಾಗಿತ್ತು.

ಕೆಎಂಎಫ್ ನೌಕರ ಕೂಡಾ ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ, ನಂದಿನಿ ಜನರಲ್ ಮ್ಯಾನೇಜರ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಏನು?

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಉದ್ಯೋಗಿಗಳು  ಕೂಡಾ ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ತನ್ಮೂಲಕ ನಂದಿನಿ ಮಿಲ್ಕ್ ಜನರಲ್ ಮ್ಯಾನೇಜರ್ ವಿ. ಕೃಷ್ಣಾರೆಡ್ಡಿ ಅರ್ಜಿಯನ್ನು ವಜಾಗೊಳಿಸಿದೆ. 2021 ನವೆಂಬರ್ 20 ರಂದು.. ಎಸಿಬಿ (ACB) ದಾಳಿ ನಡೆಸಿ ಕೇಸ್ ದಾಖಲಿಸಿತ್ತು. ಆದಾಯ ಮೀರಿ   ಶೇ. 107 % ಆಸ್ತಿ ಹೊಂದಿದ ಆರೋಪ ಹೊರಿಸಲಾಗಿತ್ತು. ಆದರೆ ಪ್ರಕರಣ ರದ್ದು ಕೋರಿ ವಿ. ಕೃಷ್ಣಾರೆಡ್ಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕೆಎಂಎಫ್ ಸಿಬ್ಬಂದಿ ಸರ್ಕಾರಿ ನೌಕರರಲ್ಲವೆಂದು ವಾದಿಸಿದ್ದರು. ಹೀಗಾಗಿ ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲವೆಂದು ವಾದಿಸಿದ್ದರು. ಆದರೆ ಅರ್ಜಿದಾರರ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.

ಕೆಎಂಎಫ್ ನೌಕರ ಕೂಡಾ ಭ್ರಷ್ಟಾಚಾರ ತಡೆ ಕಾಯ್ದೆಗೆ ಒಳಪಡುತ್ತಾರೆ. ಅರ್ಜಿದಾರನ ಮೇಲೆ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪವಿದೆ. ಭ್ರಷ್ಟಾಚಾರ ದೇಶದ ಜನಜೀವನವನ್ನು ಆವರಿಸಿದೆ. ಸಂವಿಧಾನದ ಆಡಳಿತಕ್ಕೆ ಭ್ರಷ್ಟಾಚಾರ ಅಪಾಯಕಾರಿ. ಬೇರೆ ಬೇರೆ ಸ್ವರೂಪಗಳಲ್ಲಿ ಲಂಚಗುಳಿತನ ವ್ಯಾಪಿಸಿದೆ. ಉತ್ತಮ ಆಡಳಿತಕ್ಕಾಗಿ ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ ಅನಿವಾರ್ಯ ಎಂದು ನ್ಯಾ. ಎಂ. ನಾಗಪ್ರಸನ್ನ ಅವರ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.

Published On - 7:44 pm, Tue, 9 August 22

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!