ಸೋನಿಯ ಗಾಂಧಿಯನ್ನು ಬ್ಲ್ಯಾಕ್ಮೇಲ್ ಮಾಡಿ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷನಾಗಿದ್ದಾನೆ: ರಮೇಶ್ ಜಾರಕಿಹೊಳಿ
ಶಿವಕುಮಾರ್ ಅವರನ್ನು ಮಂತ್ರಿಮಂಡಲದಿಂದ ಕೈ ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡೋದಾಗಿ ಹೇಳಿದ ರಮೇಶ್, ಶಿವಕುಮಾರ್ ನಿಂದ ತನ್ನ ಜೀವಕ್ಕೂ ಅಪಾಯವಿದೆ ಯಾಕೆಂದರೆ ಅವನು ಯಾವುದನ್ನೂ ಮಾಡಲು ಹೇಸಲಾರ ಎಂದು ಹೇಳಿದರು.
ಬೆಳಗಾವಿ: ರಮೇಶ್ ಜಾರಕಿಹೊಳಿ (Ramesh Jarkiholi) ಇಂದು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸತತ ಎರಡನೇ ದಿನ ಪತ್ರಿಕಾ ಗೋಷ್ಟಿ ನಡೆಸಿದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ಮನೆಗೆ ಡಿಕೆ ಶಿವಕುಮಾರ್ (DK Shivakumar) ಬೆಂಬಲಿಗರು ಅಶ್ಲೀಲ ಪೋಸ್ಟರ್ ಅಂಟಿಸಿರುವರೆಂದು ಆರೋಪಿಸಿದ ರಮೇಶ್, ಉಪ ಮುಖ್ಯಮಂತ್ರಿಯ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದರು. ಶಿವಕುಮಾರ್ ಒಬ್ಬ ದೊಡ್ಡ ಬ್ಲ್ಯಾಕ್ ಮೇಲರ್ ಎಂದು ಹೇಳಿದ ರಮೇಶ್ ಏಕವಚನದಲ್ಲೇ ಅವರ ಮೇಲೆ ವಾಗ್ದಾಳಿ ನಡೆಸಿದರು. ತಿಹಾರ್ ಜೈಲಿನಲ್ಲಿದ್ದಾಗ ಭೇಟಿಯಾಗಿ ಮಾತಾಡಿಸಿದ್ದ ಸೋನಿಯ ಗಾಂಧಿ (Sonia Gandhi) ಅವರನ್ನು ಶಿವಕುಮಾರ್ ಬ್ಲ್ಯಾಕ್ ಮೇಲ್ ಮಾಡಿದ್ದ ಎಂದ ರಮೇಶ್ ಮೊದಲು ತಾನು ಅವನೊಂದಿಗೆ ಇದ್ದ ಕಾರಣ ಎಲ್ಲವೂ ಗೊತ್ತಿದೆ ಎಂದರು. ತಾನು ಪಕ್ಕದಲ್ಲಿ ಕೂತಿರುವಾಗಲೇ ಆಗ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೋತಿಲಾಲ್ ವೋಹ್ರಾ ಅವರನ್ನೂ ಬ್ಲ್ಯಾಕ್ ಮೇಲ್ ಮಾಡಿದ್ದ ಎಂದು ರಮೇಶ್ ಹೇಳಿದರು. ಶಿವಕುಮಾರ್ ಅವರನ್ನು ಮಂತ್ರಿಮಂಡಲದಿಂದ ಕೈ ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡೋದಾಗಿ ಹೇಳಿದ ರಮೇಶ್, ಶಿವಕುಮಾರ್ ನಿಂದ ತನ್ನ ಜೀವಕ್ಕೂ ಅಪಾಯವಿದೆ ಯಾಕೆಂದರೆ ಅವನು ಯಾವುದನ್ನೂ ಮಾಡಲು ಹೇಸಲಾರ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ