‘ಕೊರೊನಾ ನಿಯಮ ಪಾಲಿಸಲಾಗದಿದ್ದರೆ ನೀವು ಬರೋದೇ ಬೇಡ’- ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಎಚ್ಚರಿಕೆ
ಟೀಂ ಇಂಡಿಯಾ ಆಟಗಾರರು ಕೊರೊನಾ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ಕೂಡ ನಡೆಯುತ್ತಿದೆ. ಈ ಮಧ್ಯೆ ವಿದೇಶಿ ಸರ್ಕಾರವೊಂದು ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದೆ.
ಟೀಂ ಇಂಡಿಯಾ ಸದ್ಯ ಆಸ್ಟ್ರೇಲಿಯಾ ನೆಲದಲ್ಲಿದ್ದು, ಏಕದಿನ, ಟಿ-20 ಸರಣಿ ಪೂರ್ಣಗೊಳಿಸಿದೆ. ಸದ್ಯ, ಟೆಸ್ಟ್ ಸರಣಿಯ ಎರಡು ಪಂದ್ಯಗಳನ್ನು ಆಡಿದ್ದು, ಇನ್ನೂ ಎರಡು ಟೆಸ್ಟ್ಗಳನ್ನು ಆಡಬೇಕಿದೆ. ಮೂರನೇ ಟೆಸ್ಟ್ಗೂ ಮೊದಲು ರೋಹಿತ್ ಶರ್ಮಾ ಸೇರಿ ಐದು ಟೀಂ ಇಂಡಿಯಾ ಆಟಗಾರರು ಕೊವಿಡ್ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಇದೆ. ಈ ಮಧ್ಯೆ, ಕೊರೊನಾ ನಿಯಮ ಪಾಲಿಸಲಾಗದಿದ್ದರೆ ನೀವು ಬರುವುದೇ ಬೇಡ ಎನ್ನುವ ಸಂದೇಶವನ್ನು ಕ್ವೀನ್ಸ್ಲೆಂಡ್ ಸರ್ಕಾರ ರವಾನೆ ಮಾಡಿದೆ.
ಕೊನೆಯ ಟೆಸ್ಟ್ ಪಂದ್ಯ, ಕ್ವೀನ್ಸ್ಲೆಂಡ್ನ ಬ್ರಿಸ್ಬೇನ್ನಲ್ಲಿ ನಡೆಯಲಿದೆ. ಆ ದೇಶದ ಕಠಿಣ ಕೊರೊನಾ ನಿಯಮದಿಂದ ಅಲ್ಲಿಗೆ ತೆರಳಲು ಟೀಂ ಇಂಡಿಯಾ ಹಿಂದೇಟು ಹಾಕುತ್ತಿದೆ. ಸಿಡ್ನಿಗೆ ಬರುವುದಕ್ಕೂ ಮೊದಲು ನಾವು ದುಬೈನಲ್ಲಿ 14 ದಿನ ಕ್ವಾರಂಟೈನ್ ಆಗಿದ್ದವು. ಆಸ್ಟ್ರೇಲಿಯಾ ನೆಲದಲ್ಲಿ ಮತ್ತೆ 14 ದಿನ ಕ್ವಾರಂಟೈನ್ ಆಗಿದ್ದೇವೆ. ಈಗ ಬ್ರಿಸ್ಬೇನ್ನಲ್ಲಿ ಪಂದ್ಯ ಆಡಬೇಕು ಎಂದರೆ ಮತ್ತೆ ಕ್ವಾರಂಟೈನ್ ಆಗಬೇಕು ಎನ್ನುತ್ತಿದ್ದಾರೆ. ಕೊನೆಯ ಟೆಸ್ಟ್ ಆಸ್ಟ್ರೇಲಿಯಾ ನೆಲದಲ್ಲೇ ನಡೆಯಲಿ. ಅದಕ್ಕೆ ನಮ್ಮ ಅಭ್ಯಂತರ ಏನು ಇಲ್ಲ. ಈಗ ಮತ್ತೆ ಕ್ವಾರಂಟೈನ್ ಆಗುವುದು ಸುಲಭದ ಮಾತಲ್ಲ ಎಂದು ಟೀಂ ಇಂಡಿಯಾ ಅಭಿಪ್ರಾಯಪಟ್ಟಿತ್ತು.
ಇದಕ್ಕೆ, ಕ್ವೀನ್ಸ್ಲೆಂಡ್ನ ಆರೋಗ್ಯ ಸಚಿವೆ ರೋಸ್ ಬೇಟ್ಸ್ ತಿರುಗೇಟು ನೀಡಿದ್ದಾರೆ. ಟೀಂ ಇಂಡಿಯಾ ಆಟಗಾರರು ಕೊರೊನಾ ನಿಯಮ ಪಾಲಿಸುವುದಿಲ್ಲ ಎಂದಾದರೆ ಅವರು ಬರುವುದೇ ಬೇಡ. ನಿಯಮ ಎಂಬುದು ಎಲ್ಲರಿಗೂ ಅನ್ವಯವಾಗುತ್ತದೆ ಎಂದಿದ್ದಾರೆ.
Today I was asked about reports the Indian Cricket Team wants quarantine restrictions eased just for them, ahead of the upcoming Gabba Test. My response ? #Cricket #IndiavsAustralia @ICC @CricketAus pic.twitter.com/MV7W0rIntM
— Ros Bates MP (@Ros_Bates_MP) January 3, 2021
India vs Australia Test Series | ಪೂಜಾರಾ ಸ್ಥಾನದಲ್ಲಿ ರೋಹಿತ್ ಶರ್ಮರನ್ನು ಉಪನಾಯಕನೆಂದು ಘೋಷಿಸಿದ ಬಿಸಿಸಿಐ
Published On - 2:54 pm, Sun, 3 January 21