ಮಣಿಪಾಲ್ ಆಸ್ಪತ್ರೆಯಲ್ಲಿ ಸಿದ್ದರಾಮಯ್ಯಗೆ LFT, RFT ಟೆಸ್ಟ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿಎಂ ಸಿದ್ದರಾಮಯ್ಯಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿವಿಧ ಟೆಸ್ಟ್‌ಗಳನ್ನು ಮಾಡಲಾಗ್ತಿದೆ. ಹೌದು ಸಿದ್ದರಾಮಯ್ಯ ಕೊರೊನಾ ಸೋಂಕಿತರಾಗಿದ್ದು ಈಗ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಅವರಿಗೆ ಹೃದಯಕ್ಕೆ ಸಂಬಂಧಿಸಿದಂತೆ ವೈದ್ಯರು ಇಸಿಜಿ ಪರೀಕ್ಷೆ ನಡೆಸಿದ್ದಾರೆ. ಇದಾದ ನಂತರ ಕಿಡ್ನಿ, ಲಿವರ್ಗೆ ಸಂಬಂಧಿಸಿದಂತೆ LFT, RFT ಟೆಸ್ಟ್‌ಗಳನ್ನು ಮಾಡಲಾಗಿದೆ. ಜೊತೆಗೆ ಬಿಪಿ, ಶುಗರ್ ಚೆಕಪ್ ಕೂಡಾ ಮಾಡಲಾಗಿದೆ. ಒಂದು ವೇಳೆ ನ್ಯುಮೋನಿಯಾ ಇದ್ರೂ ಎಕ್ಸ್ರೇಯಲ್ಲಿ […]

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿಎಂ ಸಿದ್ದರಾಮಯ್ಯಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿವಿಧ ಟೆಸ್ಟ್‌ಗಳನ್ನು ಮಾಡಲಾಗ್ತಿದೆ.
ಹೌದು ಸಿದ್ದರಾಮಯ್ಯ ಕೊರೊನಾ ಸೋಂಕಿತರಾಗಿದ್ದು ಈಗ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಅವರಿಗೆ ಹೃದಯಕ್ಕೆ ಸಂಬಂಧಿಸಿದಂತೆ ವೈದ್ಯರು ಇಸಿಜಿ ಪರೀಕ್ಷೆ ನಡೆಸಿದ್ದಾರೆ. ಇದಾದ ನಂತರ ಕಿಡ್ನಿ, ಲಿವರ್ಗೆ ಸಂಬಂಧಿಸಿದಂತೆ LFT, RFT ಟೆಸ್ಟ್‌ಗಳನ್ನು ಮಾಡಲಾಗಿದೆ. ಜೊತೆಗೆ ಬಿಪಿ, ಶುಗರ್ ಚೆಕಪ್ ಕೂಡಾ ಮಾಡಲಾಗಿದೆ.
ಒಂದು ವೇಳೆ ನ್ಯುಮೋನಿಯಾ ಇದ್ರೂ ಎಕ್ಸ್ರೇಯಲ್ಲಿ ಪತ್ತೆಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ವೈದ್ಯರು ಅವರಿಗೆ ಸಿಟಿ ಸ್ಕ್ಯಾನ್ ಮಾಡಿದ್ದಾರೆ. ಸಿಟಿ ಸ್ಕ್ಯಾನ್ ವರದಿಯಲ್ಲಿ ಲಂಗ್ಸ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೋ ಇಲ್ಲವೋ ಎಂದು ಪರೀಕ್ಷೆಯಲ್ಲಿ ಗೊತ್ತಾಗಲಿದೆ. ಹಾಗೇನೆ ಲಂಗ್ಸ್‌ನಲ್ಲಿ ಕಫಾ ಏನಾದರೂ ಸೇರಿಕೊಂಡಿದೆಯಾ ಎಂದು ಗೊತ್ತಾಗಲಿದೆ.
ಸದ್ಯಕ್ಕೆ ನಡೆಸಿದ ಪರೀಕ್ಷೆಯಲ್ಲಿ ಎಲ್ಲವೂ ನಾರ್ಮಲ್ ಇದ್ದು ಅವರ ಆರೋಗ್ಯವೂ ಸ್ಥಿರವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನನ್ನ ಕೊರೊನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದೇನೆ.
ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.
— Siddaramaiah (@siddaramaiah) August 4, 2020
Published On - 1:17 pm, Tue, 4 August 20



