ಹುಬ್ಬಳ್ಳಿ: ಮಧ್ಯರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ಯುವಕರ ಬರ್ಬರ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಗೋಪನಕೊಪ್ಪ ಬಸ್ ನಿಲ್ದಾಣದ ಬಳಿ ನಡೆದಿದೆ. ಮಂಜುನಾಥ್ ಕಬ್ಬಿನ್, ನಿಯಾಜ್ ಹತ್ಯೆಯಾದವರು.
ಹಳೆಯ ವೈಷಮ್ಯದಿಂದ ದುಷ್ಕರ್ಮಿಗಳು ಮಧ್ಯರಾತ್ರಿ ಯುವಕರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಧ್ಯರಾತ್ರಿ ಹರಿದ ನೆತ್ತರಿಗೆ ಹುಬ್ಬಳ್ಳಿ ಜನ ಬೆಚ್ಚಿಬಿದ್ದಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಡಬಲ್ ಮರ್ಡರ್ ಆದ ದೃಶ್ಯಗಳನ್ನ ನೋಡಿದ್ರೆ ಎದೆ ಝಲ್ ಎನ್ನುತ್ತೆ:
ತಡರಾತ್ರಿ ನಡೆದಿದ್ದ ಡಬಲ್ ಮರ್ಡರ್ ದೃಶ್ಯಗಳನ್ನು ನೋಡಿದ್ರೆ ಎದೆ ಝಲ್ ಎನ್ನುತ್ತೆ.ರಕ್ತದ ಮಡುವಿನಲ್ಲಿ ಬಿದ್ದು ಮಂಜುನಾಥ ಮತ್ತು ನಿಯಾಜ್ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ.
Published On - 8:14 am, Thu, 27 August 20