ಶಿರಾದಲ್ಲಿ ಚೊಚ್ಚಲ ಜಯ ದಾಖಲಿಸಿಯೇ ಬಿಟ್ಟಿತು ಬಿಜೆಪಿ!
ತುಮಕೂರು: ಭಾರಿ ಕುತೂಹಲ ಮೂಡಿಸಿದ್ದ ಶಿರಾ ಬೈಎಲೆಕ್ಷನ್ ಸಮರಕ್ಕೆ ತೆರೆ ಬಿದ್ದಿದೆ. ಶಿರಾ ಕ್ಷೇತ್ರದಲ್ಲೂ ಬಿಜೆಪಿ ರಣ ಕಹಳೆ ಮೊಳಗಿದೆ. ಮೊದಲ ಬಾರಿಗೆ ಶಿರಾದಲ್ಲಿ ಕಮಲ ಅರಳಿದ್ದು ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಬರೊಬ್ಬರಿ 12,949 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಶಿರಾದಲ್ಲಿ ದಳಪತಿಗಳ ಅನುಕಂಪದ ಪ್ಲ್ಯಾನ್ ಫ್ಲಾಪ್ ಆಗಿದೆ. ಸದ್ಯ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 74,522 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 61,573 ಮತಗಳು ಹಾಗೂ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ 35,982 ಮತಗಳನ್ನು […]

ತುಮಕೂರು: ಭಾರಿ ಕುತೂಹಲ ಮೂಡಿಸಿದ್ದ ಶಿರಾ ಬೈಎಲೆಕ್ಷನ್ ಸಮರಕ್ಕೆ ತೆರೆ ಬಿದ್ದಿದೆ. ಶಿರಾ ಕ್ಷೇತ್ರದಲ್ಲೂ ಬಿಜೆಪಿ ರಣ ಕಹಳೆ ಮೊಳಗಿದೆ. ಮೊದಲ ಬಾರಿಗೆ ಶಿರಾದಲ್ಲಿ ಕಮಲ ಅರಳಿದ್ದು ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಬರೊಬ್ಬರಿ 12,949 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಶಿರಾದಲ್ಲಿ ದಳಪತಿಗಳ ಅನುಕಂಪದ ಪ್ಲ್ಯಾನ್ ಫ್ಲಾಪ್ ಆಗಿದೆ. ಸದ್ಯ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 74,522 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 61,573 ಮತಗಳು ಹಾಗೂ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ 35,982 ಮತಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: R.R. ನಗರ ಮಿನಿ ಕುರುಕ್ಷೇತ್ರ: ಮುನಿರತ್ನಗೆ ಭರ್ಜರಿ ಗೆಲುವು
Published On - 4:07 pm, Tue, 10 November 20




